ಹೊಸ ಮಾರ್ಗಸೂಚಿ: ಬ್ಯಾಂಕಿಂಗ್ ಹೆಸರಿನಲ್ಲಿ ಕರೆ ವಂಚನೆ ತಪ್ಪಿಸಲು ಬಹುದೊಡ್ಡ ಕ್ರಮ ಕೈಗೊಂಡ ಆರ್‌ಬಿ‌ಐ

RBI New Guidelines: ಬ್ಯಾಂಕಿನಿಂದ ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಅನಾಮಿಕ ಕರೆಗಳ ಮೂಲಕ ಮಾಹಿತಿ ಪಡೆದು ಹಣ ವಂಚಿಸುವುದಕ್ಕೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ. ಅನಾಮಿಕ ಕರೆಗಳನ್ನು ತಡೆಗಟ್ಟಲು ತನ್ನದೇ ಎರಡು ವಿಶಿಷ್ಟ ಸಂಖ್ಯೆಗಳನ್ನು ಪರಿಚಯಿಸುತ್ತಿದೆ.

Written by - Yashaswini V | Last Updated : Jan 22, 2025, 08:55 AM IST
  • ಪ್ರತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರ ಜೊತೆ ಸಂವಹನಕ್ಕಾಗಿ ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದವು. ಆ ಸಂಖ್ಯೆಗಳ ಮೂಲಕ ಮಾಹಿತಿ ನೀಡುತ್ತಿದ್ದವು.
  • ಕೆಲವರು ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ಗ್ರಾಹಕರಿಗೆ ಕರೆ ಮಾಡಿ ಅವರಿಂದ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಒಟಿಪಿ ಪಡೆದು ವಂಚಿಸುತ್ತಿದ್ದರು.
  • ಇತ್ತೀಚಿಗೆ ಆನ್ ಲೈನ್ ವಂಚನೆಗಳು ಸಿಕ್ಕಾಪಟ್ಟೆಯಾಗಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಅನಾಮಿಕ ಕರೆಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.
ಹೊಸ ಮಾರ್ಗಸೂಚಿ: ಬ್ಯಾಂಕಿಂಗ್ ಹೆಸರಿನಲ್ಲಿ ಕರೆ ವಂಚನೆ ತಪ್ಪಿಸಲು ಬಹುದೊಡ್ಡ ಕ್ರಮ ಕೈಗೊಂಡ ಆರ್‌ಬಿ‌ಐ  title=

RBI New Guidelines: ಇತ್ತೀಚಿಗೆ ಆನ್ ಲೈನ್ ವಂಚನೆಗಳು ಸಿಕ್ಕಾಪಟ್ಟೆಯಾಗಿದ್ದವು. ಜೊತೆಗೆ ಬ್ಯಾಂಕಿನಿಂದ ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಅನಾಮಿಕ ಕರೆಗಳ ಮೂಲಕ ಮಾಹಿತಿ ಪಡೆದು ಹಣ ಲಪಟಾಯಿಸುತ್ತಿದ್ದರು. ಇಂಥ ವಂಚನೆಗೆ ಕಡಿವಾಣ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಾಗಿದೆ. ಅದಕ್ಕಾಗಿಯೇ ಅನಾಮಿಕ ಕರೆಗಳನ್ನು ತಡೆಗಟ್ಟಲು ತನ್ನದೆಯಾದ ಎರಡು ವಿಶಿಷ್ಟ ನಂಬರ್ ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

ಪ್ರತಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರ ಜೊತೆ ಸಂವಹನಕ್ಕಾಗಿ ಅವರದೆಯಾದ ಮೊಬೈಲ್ ಸಂಖ್ಯೆಗಳನ್ನು ಹೊಂದಿದ್ದವು. ಆ ಸಂಖ್ಯೆಗಳ ಮೂಲಕ ಮಾಹಿತಿ ನೀಡುತ್ತಿದ್ದವು. ಈ ಕ್ರಮವನ್ನೇ ದುರುಪಯೋಗ ಪಡಿಸಿಕೊಂಡಿರುವ ಕೆಲವರು ಬೇರೆ ಬೇರೆ ಮೊಬೈಲ್ ಸಂಖ್ಯೆಗಳಿಂದ ಗ್ರಾಹಕರಿಗೆ ಕರೆ ಮಾಡಿ ಅವರಿಂದ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ (Aadhar) ಸಂಖ್ಯೆ ಮತ್ತು ಒಟಿಪಿ (OTP) ಪಡೆದು ವಂಚಿಸುತ್ತಿದ್ದರು.

ಇದನ್ನೂ ಓದಿ- ತೆರಿಗೆ ಮಿತಿ ಹೆಚ್ಚಳ: ಆದಾಯ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್, ಮಧ್ಯಮ ವರ್ಗದವರಿಗೆ ಜಾಕ್ ಪಾಟ್

ಇಂಥ ಅಕ್ರಮಗಳನ್ನು ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗ ಎರಡು ಪ್ರತ್ಯೇಕ ನಂಬರ್ ಗಳನ್ನು ಪರಿಚಯಿಸುತ್ತಿದೆ. ಮೊದಲನೆಯದಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಜೊತೆ ಮಾಡಿರುವ ವಹಿವಾಟಿಗೆ ಸಂಬಂಧಿಸಿದಂತೆ 1600ರಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಮಾತ್ರ ಕರೆ ಮಾಡಲಾಗುತ್ತದೆ. ಆ ಸಂಖ್ಯೆಗಳಿಂದ ಕರೆ ಬಂದರೆ ಮಾತ್ರ ಸ್ವೀಕರಿಸಬೇಕು ಮತ್ತು ಮಾಹಿತಿ ನೀಡಬೇಕು.

ಇದನ್ನೂ ಓದಿ- ಎಚ್ಚರ… ಮಾರುಕಟ್ಟೆಯಲ್ಲಿ ಹೆಚ್ಚಾದ 500 ರೂಪಾಯಿ ನಕಲಿ ನೋಟುಗಳ ಹಾವಳಿ! ಅಸಲಿ ನೋಟನ್ನು ಪತ್ತೆಹಚ್ಚುವ ಮಾರ್ಗ ತಿಳಿಸಿದ ಆರ್‌ಬಿ‌ಐ 

ಇದಲ್ಲದೆ ಮಾರ್ಕೆಟಿಂಗ್ ಕರೆಗಳು ಮತ್ತು SMS ಸೇವೆಗಾಗಿ 1400ರಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಮಾತ್ರ ಕರೆ ಅಥವಾ SMS ಬರುತ್ತವೆ. ಅಂಥ ಕರೆಗಳಿಗೆ ಮಾತ್ರ ಪ್ರತಿಕ್ರಿಯಿಸಬೇಕು. ವೈಯಕ್ತಿಕ ಸಾಲ, ವಿಮೆಯಂತಹ ಸೇವೆಗಳಿಗೆ ಸಂಬಂಧಿಸಿದಂತೆ 140ರಿಂದ ಪ್ರಾರಂಭವಾಗುವ ಸಂಖ್ಯೆಗಳಿಂದ ಕರೆ ಬಂದರೆ ಮಾತ್ರ ಸ್ವೀಕರಿಸಬೇಕು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News