ಪ್ರೀತಿಸಿ ಮದುವೆಯಾಗಿದ್ದರೂ 50 ನೇ ವಯಸ್ಸಿನಲ್ಲಿ ಪತಿಗೆ ವಿಚ್ಛೇದನ ಘೋಷಿಸಿದ ಖ್ಯಾತ ಹಿರಿಯ ನಟಿ! ಬಹು ಚರ್ಚೆಗೆ ಗ್ರಾಸವಾದ ಡಿವೋರ್ಸ್‌..

Star Actress Divorce: ಸಿನಿಮಾ ತಾರೆಯರ ಬದುಕು ಹೊರ ಜಗತ್ತಿಗೆ ಬಣ್ಣಬಣ್ಣವಾಗಿ ಕಾಣಿಸಿದರೂ ಅವರ ನಿಜ ಜೀವನದ ಕಷ್ಟ ನೋವುಗಳು ಯಾರಿಗೂ ತಿಳಿದಿರುವುದಿಲ್ಲ.. ಸಾಕಷ್ಟು ನೋವು-ನಲಿವುಗಳನ್ನು ಕಂಡು ದೊಡ್ಡ ಮಟ್ಟಕ್ಕೆ ಬೆಳೆದಿರುತ್ತಾರೆ.. ಇದೀಗ ಅಂತದ್ದೇ ನಟಿಯೊಬ್ಬರ ಜೀವನ ಕುರಿತಾದ ಕೆಲವು ಕುತೂಹಲಕಾರಿ ಮಾಹಿತಿಯನ್ನು ಇಂದು ನಾವು ತಿಳಿಯೋಣ..   

Written by - Savita M B | Last Updated : Feb 6, 2025, 11:59 AM IST
  • ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ವಿವಾಹ ಅಥವಾ ವ್ಯವಹಾರಗಳ ಬಗ್ಗೆ ನಡೆಯುವಷ್ಟು ಚರ್ಚೆ ಅವರ ವಿಚ್ಛೇದನಗಳ ಬಗ್ಗೆ ಇರುವುದಿಲ್ಲ.
  • 42ನೇ ವಯಸ್ಸಿನಲ್ಲಿ ಮದುವೆಯಾಗಿ 50ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದ ನಟಿಯೊಬ್ಬರು ಇದ್ದಾರೆ.
ಪ್ರೀತಿಸಿ ಮದುವೆಯಾಗಿದ್ದರೂ 50 ನೇ ವಯಸ್ಸಿನಲ್ಲಿ ಪತಿಗೆ ವಿಚ್ಛೇದನ ಘೋಷಿಸಿದ ಖ್ಯಾತ ಹಿರಿಯ ನಟಿ! ಬಹು ಚರ್ಚೆಗೆ ಗ್ರಾಸವಾದ ಡಿವೋರ್ಸ್‌..  title=

urmila matondkar: ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳ ವಿವಾಹ ಅಥವಾ ವ್ಯವಹಾರಗಳ ಬಗ್ಗೆ ನಡೆಯುವಷ್ಟು ಚರ್ಚೆ ಅವರ ವಿಚ್ಛೇದನಗಳ ಬಗ್ಗೆ ಇರುವುದಿಲ್ಲ. ಆದರೆ 40 ರಿಂದ 50 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದ ಕೆಲವು ನಟ-ನಟಿಯರ ಸುದ್ದಿ ಮಾತ್ರ ಸಿನಿರಂಗದಲ್ಲಿ ಸಂಚಲನ ಸೃಷ್ಟಿಸಿವೆ.. ಅದರಂತೆ 42ನೇ ವಯಸ್ಸಿನಲ್ಲಿ ಮದುವೆಯಾಗಿ 50ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದ ನಟಿಯೊಬ್ಬರು ಇದ್ದಾರೆ. ಆ ನಟಿ ಬೇರಾರೂ ಅಲ್ಲ ಊರ್ಮಿಳಾ ಮಾತೋಂಡ್ಕರ್.

ನಟಿ ಊರ್ಮಿಳಾ ಮಾತೋಂಡ್ಕರ್ ಬಹಳ ಜನಪ್ರಿಯ ನಟಿ. ಊರ್ಮಿಳಾ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಚಲನಚಿತ್ರಗಳು ಮತ್ತು ಧಾರಾವಾಹಿಗಳಿಗೆ ಹೆಸರುವಾಸಿಯಾಗಿರುವ ಊರ್ಮಿಳಾ ಮಾತೋಂಡ್ಕರ್, ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಇವುಗಳ ಬಗ್ಗೆ ಯಾವಾಗಲೂ ನಟಿ ಮುಕ್ತವಾಗಿ ಮಾತನಾಡಿದ್ದಾರೆ..

ಇದನ್ನೂ ಓದಿ :  6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ !

ಉರ್ಮಿಳಾ ಮಾತೋಂಡ್ಕರ್ ಅವರ ವಿಚ್ಛೇದನದ ಸುದ್ದಿಯಿಂದಾಗಿ ಅವರು ದೇಶದಾದ್ಯಂತ ಚರ್ಚೆಗೆ ಗ್ರಾಸವಾದರು. ಊರ್ಮಿಳಾ ಮಾತೋಂಡ್ಕರ್ ಮತ್ತು ಮೊಹ್ಸಿನ್ ಅಖ್ತರ್ 2016 ರಲ್ಲಿ ವಿವಾಹವಾದರು. ಅವರ ಪ್ರೇಮಕಥೆ ತುಂಬಾ ವಿಶಿಷ್ಟವಾಗಿದೆ. ಏಕೆಂದರೇ ಊರ್ಮಿಳಾ ಮಾತೋಂಡ್ಕರ್ 42 ನೇ ವಯಸ್ಸಿನಲ್ಲಿ ಮೊಹ್ಸಿನ್ ಅವರನ್ನು ವಿವಾಹವಾದರು. ಇಬ್ಬರೂ ಅಂತರ್ಜಾತಿ ವಿವಾಹವಾಗಿದ್ದರು. ಆದರೆ 8 ವರ್ಷಗಳ ನಂತರ, ಇಬ್ಬರೂ ಬೇರ್ಪಟ್ಟರು.

ಊರ್ಮಿಳಾ ಮತ್ತು ಮೊಹ್ಸಿನ್ ತಮ್ಮ ಸ್ನೇಹಿತ, ಪ್ರಸಿದ್ಧ ಬಾಲಿವುಡ್ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಸೋದರ ಸೊಸೆ ರಿದ್ಧಿಯ ಮದುವೆಯಲ್ಲಿ ಊರ್ಮಿಳಾ ಮತ್ತು ಮೊಹ್ಸಿನ್ ಪರಸ್ಪರ ಭೇಟಿಯಾದರು. ಮೊದಲ ಭೇಟಿಯಲ್ಲೇ ಇಬ್ಬರೂ ಪರಸ್ಪರ ಒಳ್ಳೆಯ ಸ್ನೇಹಿತರಾಗಿದ್ದರು. ಇದಾದ ನಂತರ, ಇಬ್ಬರ ನಡುವಿನ ಭೇಟಿಗಳು ಹೆಚ್ಚಾದವು. ಕೆಲವು ದಿನಗಳ ನಂತರ, ಮೊಹ್ಸಿನ್ ಊರ್ಮಿಳಾಳನ್ನು ಮದುವೆ ಪ್ರಪೋಸ ಮಾಡಿದರು.. ಆದರೆ ಒಂದು ವರ್ಷದ ಊರ್ಮಿಳಾ ಒಪ್ಪಿಕೊಂಡರು.. 

ಒಬ್ಬರನ್ನೊಬ್ಬರು ಅಪಾರವಾಗಿ ಪ್ರೀತಿಸುತ್ತಿದ್ದ ಊರ್ಮಿಳಾ ಮತ್ತು ಮೊಹ್ಸಿನ್ ಮದುವೆಯಾಗುವ ಬಗ್ಗೆ ಯೋಚಿಸಿದರು. ಇದರಿಂದ ಇಬ್ಬರೂ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಮೊಹ್ಸಿನ್ ಊರ್ಮಿಳಾ ಗಿಂತ 10 ವರ್ಷ ಚಿಕ್ಕವನು. ಊರ್ಮಿಳಾ ವಯಸ್ಸು ಮತ್ತು ಧರ್ಮವನ್ನು ಲೆಕ್ಕಿಸದೆ 42 ನೇ ವಯಸ್ಸಿನಲ್ಲಿ ಮೊಹ್ಸಿನ್ ಅವರನ್ನು ವಿವಾಹವಾದರು.

ಇದನ್ನೂ ಓದಿ :  6, 4, 4, 6, 6...ಅಬುದಾಬಿಯಲ್ಲಿ ರನ್ ಗಳ ಸುರಿ ಮಳೆ !ನೈಟ್ ರೈಡರ್ಸ್ ಬೌಲರ್ ಬೆವರಿಳಿಸಿದ RCB ಆಟಗಾರ !

ಊರ್ಮಿಳಾ ಮತ್ತು ಮೊಹ್ಸಿನ್ ಹಿಂದೂ ಮತ್ತು ಇಸ್ಲಾಮಿಕ್ ಪದ್ಧತಿಗಳ ಪ್ರಕಾರ ವಿವಾಹವಾದರು. ಇಬ್ಬರೂ 2016 ರಲ್ಲಿ ವಿವಾಹವಾದರು, ಕುಟುಂಬ ಸದಸ್ಯರು ಬಹಳ ಕಡಿಮೆ ಸಂಖ್ಯೆಯಲ್ಲಿ ಹಾಜರಿದ್ದರು. ಮದುವೆಯಲ್ಲಿ ಉದ್ಯಮದಿಂದ ಮನೀಶ್ ಮಲ್ಹೋತ್ರಾ ಮಾತ್ರ ಹಾಜರಿದ್ದರು. ಊರ್ಮಿಳಾ ಧಾರ್ಮಿಕ ಮತ್ತು ವಯಸ್ಸಿನ ನಿರ್ಬಂಧಗಳನ್ನು ಧಿಕ್ಕರಿಸಿ ಮೊಹ್ಸಿನ್‌ನ ಪ್ರೀತಿಗಾಗಿ ಅವನನ್ನು ಮದುವೆಯಾದಳು. ಎಂಟು ವರ್ಷಗಳ ದಾಂಪತ್ಯದ ನಂತರ ಊರ್ಮಿಳಾ ತನ್ನ ಪತಿ ಮೊಹ್ಸಿನ್ ಅಖ್ತರ್ ಅವರಿಗೆ ವಿಚ್ಛೇದನ ನೀಡಿದರು.. ಸೆಪ್ಟೆಂಬರ್‌ನಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಈ ನಿರ್ಧಾರ ತೆಗೆದುಕೊಂಡರು.

ಊರ್ಮಿಳಾ ಮಾತೋಂಡ್ಕರ್ ವಿಚ್ಛೇದನ ಪಡೆದಿದ್ದು ಏಕೆ?
ಮಾಧ್ಯಮ ವರದಿಗಳ ಪ್ರಕಾರ, ಊರ್ಮಿಳಾ ಮಾತೋಂಡ್ಕರ್ ಅವರಿಗೆ ಸಂಬಂಧಿಸಿದ ಮೂಲವೊಂದು, ಊರ್ಮಿಳಾ ತಮ್ಮ ಕೆಲಸದ ಮೇಲೆ ಗಮನಹರಿಸಲು ಬಯಸಿ, ಸಾಕಷ್ಟು ಚಿಂತನೆ ಮತ್ತು ತಿಳುವಳಿಕೆಯ ನಂತರ ತನ್ನ ಪತಿ ಮೊಹ್ಸಿನ್‌ನಿಂದ ಬೇರ್ಪಡಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.. ಆದರೆ ಅವರ ವಿಚ್ಛೇದನದ ಹಿಂದಿನ ನಿಖರವಾದ ಕಾರಣ ಇನ್ನೂ ಬಹಿರಂಗಗೊಂಡಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News