Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಶುಕ್ರವಾರ, ಅನುರಾಧಾ ನಕ್ಷತ್ರ, ವ್ಯಾಘಾತ ಯೋಗ, ತೈತಿಲ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಶುಕ್ರವಾರದಂದು ಲಕ್ಷ್ಮಿ ಕೃಪೆಯಿಂದ ಅನಿರೀಕ್ಷಿತ ಆರ್ಥಿಕ ಲಾಭವಾಗಲಿದೆ. ಭಾವನಾತ್ಮಕ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿರಿ. ಸಂಬಂಧಿಕರೊಂದಿಗೆ ಸೌಮ್ಯವಾಗಿ ಮಾತನಾಡಿ. ಸೃಜನಶೀಲತೆ ಮತ್ತು ನವೀನ ಆಲೋಚನೆಗಳಿಂದ ದಿಢೀರ್ ಲಾಭಗಳಿಸುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ನಿಮ್ಮ ಬದುಕಿನಲ್ಲಿ ಪ್ರಣಯ ಅರಳುತ್ತದೆ. ಆದರೆ, ಬೇರೆಯವರ ಭಾವನೆಗಳೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹೊಸ ದೃಷ್ಟಿಕೋನದಿಂದ ನೋಡುವುದರಿಂದ ಬೇರೆಯವರೊಂದಿಗಿನ ನಿಮ್ಮ ಭಾವನೆಗಳನ್ನು ಬದಲಾಯಿಸಲು ಸಾಧ್ಯವಾಗುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಒಡಹುಟ್ಟಿದವರ ನಡುವಿನ ಉದ್ವಿಗ್ನತೆಯನ್ನು ಪರಿಹರಿಸಲು ಮನೆಯ ಹಿರಿಯರ ಸಹಾಯವನ್ನು ತೆಗೆದುಕೊಳ್ಳಿ. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವುದು ಲಾಭದಾಯಕವಾಗಿದೆ. ತಾಯಿ ಮಹಾಲಕ್ಷ್ಮೀ ಕೃಪೆಯಿಂದ ಅನಿರೀಕ್ಷಿತ ಲಾಭಗಳು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ವಾರಾಂತ್ಯದಲ್ಲಿ ಸ್ವಯಂಪ್ರೇರಿತವಾಗಿ ಕುಟುಂಬದೊಂದಿಗೆ ವಿಹಾರಕ್ಕೆ ಯೋಜಿಸಿ. ಇದರಿಂದ ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಹಳೆಯ ಸ್ನೇಹಿತರೊಂದಿಗೆ ಭೇಟಿಯು ಮನಸ್ಸಿಗೆ ಸಂತೋಷವನ್ನು ನೀಡಲಿದೆ. ಕೆಲಸದಲ್ಲಿ ಬಡ್ತಿ ಸಂಭವವಿದೆ. ಇಂದು ಅದೃಷ್ಟದ ದಿನ.
ಇದನ್ನೂ ಓದಿ- ಶೀಘ್ರದಲ್ಲೇ ಶುಕ್ರ ವಕ್ರ ನಡೆ ಆರಂಭ: ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಜಯ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ, ರಾಜವೈಭೋಗ..!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಬರವಣಿಗೆ ಅಥವಾ ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಲಾಭದಾಯಕ ದಿನ. ನಿಮ್ಮ ಗುರಿಯನ್ನು ತಲುಪಲು ಹಿಂದೆಂದೂ ಗಮನಿಸದಂತ ಗುಪ್ತ ರತ್ನವನ್ನು ಅನಾವರಣಗೊಳ್ಳಲಿದೆ. ಪ್ರೀತಿ ಪಾತ್ರರೊಂದಿಗೆ ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಹಳೆಯ ಕಾಗದ ಪತ್ರಗಳನ್ನು ಪರಿಶೀಲಿಸುವಾಗ ಹಳೆಯ ನೆನಪುಗಳು ಮರುಕಳಿಸಬಹುದು. ಕಾರ್ಯಾಗಾರಕ್ಕೆ ಹಾಜರಾಗುವುದರಿಂದ ಕುತೂಹಲದಿಂದ ಕೂಡಿರುವ ಕೌಶಲ್ಯಗಳು ಹೆಚ್ಚಾಗಲಿವೆ. ಸಂಜೆ ವೇಳೆಗೆ ಪ್ರೀತಿ ಪಾತ್ರರೊಂದಿಗೆ ವಾಯು ವಿಹಾರಕ್ಕೆ ತೆರಳಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಪ್ರಾಮಾಣಿಕ ಸಂಭಾಷಣೆಗಳಿಗೆ ಮುಕ್ತರಾಗಿರಿ. ನಿಜವಾದ ಸಂವಹನಗಳು ಸಂಬಂಧವನ್ನು ಬಲಗೊಳಿಸುತ್ತದೆ. ಬೇರೆಯವರ ಬಗ್ಗೆ ಅನುಚಿತವಾಗಿ ಮಾತನಾಡುವುದನ್ನು ತಪ್ಪಿಸಿ. ಕೇವಲ ನಿಮ್ಮ ದೃಷ್ಟಿ ಕೋನದಿಂದ ಮಾತ್ರ ಯೋಚಿಸದೆ ಬೇರೆಯವರ ಆಯಾಮವನ್ನೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಬಾಹ್ಯ ಗೊಂದಳಗಳನ್ನು ತಪ್ಪಿಸಿ ವೈಯಕ್ತಿಕ ಬೆಳವಣಿಗೆಗಳ ಮೇಲೆ ಗಮನ ಕೇಂದ್ರೀಕರಿಸಿ. ಆತ್ಮಾವಲೋಕನ ಚಟುವಟಿಕೆಗಳು ಅಮೂಲ್ಯವಾದ ಒಳನೋಟವನ್ನು ತರಬಹುದು. ಸ್ವಯಂ ಅನ್ವೇಷಣೆಯು ನಿಮ್ಮ ಬದುಕಿಗೆ ದಾರಿ ದೀಪವಾಗಲಿದೆ.
ಇದನ್ನೂ ಓದಿ- Maya Yoga 2025: 164 ವರ್ಷಗಳ ನಂತರ ʻಮಯಾ ಯೋಗʼ! ಈ ರಾಶಿಯವರ ಜೀವನದಲ್ಲಿ ಬೆಳಗಲಿದೆ ಸಂಪತ್ತಿನ ಭಾಗ್ಯ
ಧನು ರಾಶಿಯವರ ಭವಿಷ್ಯ (Sagittarius Horoscope):
ದೀರ್ಘಕಾಲಿನ ಗುರಿಗಳಿಗೆ ಹೊಂದಿಕೆಯಾಗುವ ಕೆಲಸಗಳ್ಳಿ ನಿಮ್ಮ ಶಕ್ತಿಯನ್ನು ತೊಡಗಿಸಿಕೊಳ್ಳಿ. ಯಾವುದೇ ವಿಚಾರದಲ್ಲಿ ದಿಢೀರ್ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಚೆನ್ನಾಗಿ ಯೋಚಿಸಿ, ಅಗತ್ಯವಿದ್ದರೆ ಕ್ಷೇತ್ರ ತಜ್ಞರೊಂದಿಗೆ ಸಮಾಲೋಚಿಸಿ ನಿರ್ಧರಿಸುವುದು ಒಳ್ಳೆಯದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಯಾವುದೇ ವಿಚಾರಗಳಲ್ಲಿ ಪೂರ್ವಾಗ್ರಹ ಪೀಡಿತರಾಗಿರದೆ ಮಾಹಿತಿ ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬನ್ನಿ. ರಹಸ್ಯ ಪ್ರಯಾಣ ಸಾಧ್ಯತೆ ಇದೆ. ಕೆಲಸದಲ್ಲಿ ವಿವೇಷಣೆಯಿಂದ ಇರಿ. ಅತ್ಯುತ್ತಾ ಫಲಿತಾಂಶಗಳಿಗಾಗಿ ಸಾಹಸಮಯ ಮನೋಭಾವವನ್ನು ಬೆಳೆಸಿಕೊಳ್ಳಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಕುಟುಂಬಕ್ಕಾಗಿ ಸಮಯ ಮೀಸಲಿಡಿ. ಉದ್ಯೋಗದಲ್ಲಿ ಸಹೋದ್ಯೋಗಳೊಂದಿಗೆ ಬೇಡದ ಮಾತುಗಳನ್ನು ತಪ್ಪಿಸಿ. ಕಠಿಣ ಪರಿಶ್ರಮಕ್ಕೆ ಬೆಲೆ ದೊರೆಉತ್ತದೆ. ಸವಾಲುಗಳು ಎಂತದ್ದೆ ಇದ್ದರೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಿರಿ. ಮುಕ್ತ ಸಂವಹನವು ನಿಮ್ಮ ಸಂಪರ್ಕವನ್ನು ಹೆಚ್ಚಿಸುತ್ತದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಶುಭ ಶುಕ್ರವಾರದಂದು ತಾಯಿ ಲಕ್ಷ್ಮಿ ಕೃಪೆಯಿಂದ ಧನಾತ್ಮಕ ಶಕ್ತಿಯನ್ನು ಅನುಭವಿಸುವಿರಿ. ದೃಢವಾದ ಸಂವಹನವು ವೃತ್ತಿ ವ್ಯವಹಾರದಲ್ಲಿ ನಿಮ್ಮ ಪ್ರಗತಿಗೆ ಸಹಾಯಕವಾಗಲಿದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಾಗ ತಾಳ್ಮೆಯಿಂದ ವರ್ತಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.