Viral Video: ಬಾಂಗ್ಲಾದೇಶದಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕೆಲವರು.. ರೈಲು ಹಳಿಯ ಪಕ್ಕದಲ್ಲಿ ನಿಂತು.. ರೈಲು ಬರುತ್ತಿರುವಾಗ ಸೆಲ್ಫಿ ವಿಡಿಯೋ ತೆಗೆಯಲು ಯತ್ನಿಸಿದ್ದಾರೆ. ಆದರೆ, ರೈಲು ಬರುವಾಗ ಅನಿರೀಕ್ಷಿತ ಘಟನೆ ನಡೆದಿದು ಹೋಗಿದೆ.
ಈ ವೀಡಿಯೊವನ್ನು Twitter (x) ನಲ್ಲಿ ಅಕ್ಟೋಬರ್ 27, 2024 ರಂದು gharkekalesh ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಈಗಾಗಲೇ ಈ ವಿಡಿಯೋವನ್ನು 22 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಟಿಕ್ ಟಾಕ್ ವೀಡಿಯೋ ಮಾಡುವ ವೇಳೆ ಬಾಲಕನಿಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದ್ದು, ಈ ವಿಡಿಯೋ ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಹೀಗಾಗುತ್ತಿರುವುದು ಇದೇ ಮೊದಲಲ್ಲ. ಈ ರೀತಿ ಸೆಲ್ಫಿ ತೆಗೆದುಕೊಂಡವರಿಗೆ ಹಲವು ಬಾರಿ ರೈಲುಗಳು ಬಡಿದಿವೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಹೀಗೆ ಮಾಡುವಾಗ ಹಲವು ಸಂದರ್ಭಗಳಲ್ಲಿ ಜನರು ಪ್ರಾಣ ಕಳೆದುಕೊಂಡ ಘಟನೆಗಳು ಕೂಡ ಸಾಕಷ್ಟಿವೆ. ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ರೈಲ್ವೆ ಅಧಿಕಾರಿಗಳು ಎಷ್ಟು ಬಾರಿ ಹೇಳಿದರೂ ಯುವಕರ ಮನೋಭಾವ ಬದಲಾಗಿಲ್ಲ.
ಭಾರತೀಯ ರೈಲ್ವೇಯಲ್ಲಿ ಹಲವು ಕಾನೂನುಗಳಿವೆ. ಜನರು ಹಳಿಗಳನ್ನು ಮುಟ್ಟುವುದು ಕೂಡ ಅಪರಾಧ. ಹಳಿ ದಾಟುವುದು ಕೂಡ ಅಪರಾಧ. ಅಂತಹ ಹಲವಾರು ನಿಯಮಗಳಿದ್ದರೂ, ಜನರು ಹೆಚ್ಚಾಗಿ ಅವುಗಳನ್ನು ಅನುಸರಿಸುವುದಿಲ್ಲ. ಬಾಂಗ್ಲಾದೇಶದಲ್ಲೂ ಅದೇ ಆಗುತ್ತಿದೆ. ಒಟ್ಟಿನಲ್ಲಿ ಈ ಘಟನೆ, ಇಂತಹ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುವವರಿಗೆ ಎಚ್ಚರಿಕೆ ಎಂದೆ ಹೇಳಬಹುದು.
While Making Tiktok Videos A Train Hits the guy in Bangladesh
https://t.co/06kZEovLGn— Ghar Ke Kalesh (@gharkekalesh) October 27, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.