ಉಚಿತ ಚಿಕಿತ್ಸೆಯಿಂದ ಪಿಂಚಣಿವರೆಗೆ; ESIC ಕಾರ್ಡ್ ಉದ್ಯೋಗಿಗಳಿಗೆ ಈ 5 ಪ್ರಯೋಜನಗಳು ಸಿಗುತ್ವೆ!!

Esic scheme benefits: ಇಎಸ್‌ಐ ಮೂಲಕವೂ ಹೆರಿಗೆ ರಜೆ ದೊರೆಯುತ್ತದೆ. ಇದರಡಿ ಮಹಿಳಾ ಉದ್ಯೋಗಿಗೆ ಹೆರಿಗೆಯ ಸಮಯದಲ್ಲಿ 26 ವಾರಗಳ ಹೆರಿಗೆ ರಜೆ ಮತ್ತು ಗರ್ಭಪಾತದ ಸಂದರ್ಭದಲ್ಲಿ ಆರು ವಾರಗಳ ಸರಾಸರಿ ವೇತನದ 100 ಪ್ರತಿಶತವನ್ನು ನೀಡಲಾಗುತ್ತದೆ.

ESIC Scheme Benefits: ESI ಯೋಜನೆಯನ್ನು ನೌಕರರ ರಾಜ್ಯ ವಿಮಾ ನಿಗಮವು ಕಡಿಮೆ ಆದಾಯದ ಜನರಿಗಾಗಿ ನೀಡುತ್ತಿದೆ. ಇದರಡಿ ಇಎಸ್‌ಐ ಕಾರ್ಡ್ ಅನ್ನು ನೌಕರರು ಮತ್ತು ಅದನ್ನು ಅವಲಂಬಿಸಿರುವ ಜನರಿಗೆ ನೀಡಲಾಗುತ್ತದೆ. ಇಎಸ್‌ಐ ಕಾರ್ಡ್‌ನ ಆಧಾರದ ಮೇಲೆ ಉದ್ಯೋಗಿ ಇಎಸ್‌ಐ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಉಚಿತ ಚಿಕಿತ್ಸೆಯಿಂದ ಪಿಂಚಣಿವರೆಗೆ ESIC ಕಾರ್ಡ್ ಉದ್ಯೋಗಿಗಳಿಗೆ ದೊರೆಯುವ 5 ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ದೇಶದಲ್ಲಿ 150ಕ್ಕೂ ಹೆಚ್ಚು ESIC ಆಸ್ಪತ್ರೆಗಳಿದ್ದು, ಇಲ್ಲಿ ಎಲ್ಲಾ ರೀತಿಯ ರೋಗಗಳ ಚಿಕಿತ್ಸೆಗೆ ಸೌಲಭ್ಯಗಳು ಲಭ್ಯವಿದೆ. 21 ಸಾವಿರ ಅಥವಾ ಅದಕ್ಕಿಂತ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಇಎಸ್‌ಐಸಿಯ ಪ್ರಯೋಜನವಿದೆ. ದೈಹಿಕವಾಗಿ ವಿಕಲಚೇತನರಿಗೆ ಕನಿಷ್ಠ ವೇತನ ಮಿತಿ ಮಾಸಿಕ 25,000 ರೂ. ಇರುತ್ತದೆ.

2 /7

ESIC ಪ್ರೀಮಿಯಂ ಪಾವತಿಗೆ ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಕೊಡುಗೆ ನೀಡುತ್ತಾರೆ. ಇದರಲ್ಲಿ ಉದ್ಯೋಗಿಯ ಪರವಾಗಿ 1.75 ಪ್ರತಿಶತ ವೇತನವನ್ನು ಮತ್ತು ಉದ್ಯೋಗದಾತರ ಪರವಾಗಿ 4.75ರಷ್ಟು ವೇತನವನ್ನು ನೀಡಲು ಅವಕಾಶವಿದೆ. ಇದರಿಂದ ದೊರೆಯುವ ಐದು ಪ್ರಯೋಜನಗಳ ಬಗ್ಗೆ ತಿಳಿಯಿರಿ.

3 /7

ಇಎಸ್‌ಐ ವ್ಯಾಪ್ತಿಗೆ ಒಳಪಡುವ ನೌಕರರು ಉಚಿತ ಚಿಕಿತ್ಸೆ ಪಡೆಯುತ್ತಾರೆ. ಇದರಲ್ಲಿ ವಿಮಾದಾರನ ಹೊರತಾಗಿ ಆತನನ್ನು ಅವಲಂಬಿಸಿರುವ ಇತರ ಕುಟುಂಬ ಸದಸ್ಯರಿಗೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದರಡಿ ಚಿಕಿತ್ಸೆಯ ವೆಚ್ಚದ ಮೇಲೆ ಗರಿಷ್ಠ ಮಿತಿಯಿಲ್ಲ. ಆದರೆ, ವೈದ್ಯಕೀಯ ವಿಮೆಯಲ್ಲಿ ಇದು ಇಲ್ಲ.

4 /7

ನಿವೃತ್ತ ಉದ್ಯೋಗಿ ಮತ್ತು ಶಾಶ್ವತವಾಗಿ ಅಂಗವಿಕಲ ವಿಮಾದಾರ ವ್ಯಕ್ತಿ, ಅವನ/ಅವಳ ಸಂಗಾತಿಯು ವಾರ್ಷಿಕ 120 ರೂ. ಪ್ರೀಮಿಯಂನಲ್ಲಿ ವೈದ್ಯಕೀಯ ಸೌಲಭ್ಯವನ್ನು ಪಡೆಯುತ್ತಾರೆ. ಇದರಲ್ಲಿ ಅನಾರೋಗ್ಯ ರಜೆಗಾಗಿ ವಿಮಾದಾರರಿಗೆ 91 ದಿನಗಳ ಹಣವನ್ನು ಪಾವತಿಸಲಾಗುತ್ತದೆ.

5 /7

ಇಎಸ್‌ಐ ಮೂಲಕವೂ ಹೆರಿಗೆ ರಜೆ ದೊರೆಯುತ್ತದೆ. ಇದರಡಿ ಮಹಿಳಾ ಉದ್ಯೋಗಿಗೆ ಹೆರಿಗೆಯ ಸಮಯದಲ್ಲಿ 26 ವಾರಗಳ ಹೆರಿಗೆ ರಜೆ ಮತ್ತು ಗರ್ಭಪಾತದ ಸಂದರ್ಭದಲ್ಲಿ ಆರು ವಾರಗಳ ಸರಾಸರಿ ವೇತನದ 100 ಪ್ರತಿಶತವನ್ನು ನೀಡಲಾಗುತ್ತದೆ.

6 /7

ಉದ್ಯೋಗದ ಸಮಯದಲ್ಲಿ ವಿಮಾದಾರನು ಮರಣಹೊಂದಿದರೆ, ಅವರ ಅಂತ್ಯಕ್ರಿಯೆಗಾಗಿ ESICನಿಂದ ಗರಿಷ್ಠ 10,000 ರೂ. ಇದಲ್ಲದೆ, ಅವಲಂಬಿತರಿಗೆ ನಿಗದಿತ ಅನುಪಾತದಲ್ಲಿ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಪಿಂಚಣಿಯಲ್ಲಿ ಮೂರು ಭಾಗಗಳಿವೆ.

7 /7

ಯಾವುದೇ ಕಾರಣದಿಂದ ತಾತ್ಕಾಲಿಕ ಅಂಗವೈಕಲ್ಯ ಉಂಟಾದರೆ, ವಿಮಾದಾರರಿಗೆ ಅವರು ಚೇತರಿಸಿಕೊಳ್ಳುವವರೆಗೆ ಮತ್ತು ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ಇಡೀ ಜೀವನಕ್ಕೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಅವಲಂಬಿತರಿಗೆ ನಿವೃತ್ತಿಯ ನಂತರ ನಿರುದ್ಯೋಗ ಭತ್ಯೆ, ಪಿಂಚಣಿ ಮತ್ತು ಉಚಿತ ಚಿಕಿತ್ಸೆ ದೊರೆಯುತ್ತದೆ.