ಜೀ ಅಚೀವರ್ಸ್‌ ಅವಾರ್ಡ್-2025: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಜೀ ಕನ್ನಡ ನ್ಯೂಸ್‌

Zee Achievers Award 2025: ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್‌ ಕಾರ್ಲ್ಟ್ರನ್‌ ಹೋಟೆಲ್‌ನಲ್ಲಿ ಫೆ. 09 ರಂದು ಜೀ ಅಚೀವರ್ಸ್‌ ಅವಾರ್ಡ್-2025 ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಿ.ಕೆ. ಶಿವಕುಮಾರ್‌, ಸದಾನಂದ ಗೌಡ ಹಾಗೂ ರಾಮಲಿಂಗಾರೆಡ್ಡಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂತು.
 

1 /16

Zee Achievers Award 2025: ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್‌ ಕಾರ್ಲ್ಟ್ರನ್‌ ಹೋಟೆಲ್‌ನಲ್ಲಿ ಫೆ. 09 ರಂದು ಜೀ ಅಚೀವರ್ಸ್‌ ಅವಾರ್ಡ್-2025 ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಿ.ಕೆ. ಶಿವಕುಮಾರ್‌, ಸದಾನಂದ ಗೌಡ ಹಾಗೂ ರಾಮಲಿಂಗಾರೆಡ್ಡಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂತು.  

2 /16

ಜೀ ಕನ್ನಡ ನ್ಯೂಸ್‌ ನ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕಾಗಿ ಜೀ ಅಚೀವರ್ಸ್‌ ಅವಾರ್ಡ್-2025 ಅನ್ನು ಹಮ್ಮಿಕೊಳ್ಳಲಾಗಿತ್ತು.  

3 /16

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 46 ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

4 /16

ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್‌ ಕಾರ್ಲ್ಟ್ರನ್‌ ಹೋಟೆಲ್‌ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

5 /16

ರಾಜ್ಯದ ವಿವಿಧ ಸಾಧಕರಿಗೆ ಡಿ.ಕೆ.ಶಿವಕುಮಾರ್ ಅವರು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.  

6 /16

ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಅವರು, ಜೀ ಕನ್ನಡ ನ್ಯೂಸ್‌ ಗುರುತಿಸಿರುವ ಸಾಧಕರು ನಿಜಕ್ಕೂ ಸಮಾಜದ ಆಸ್ತಿ. ನಾಡು ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸನ್ಮಾನ ಮತ್ತು ಪ್ರಶಸ್ತಿಗಳು ಸೇವೆಗೆ ಕೊನೆಯೆಂದು ಭಾವಿಸಬಾರದು. ಮತ್ತಷ್ಟು ಪ್ರೇರಣೆ ಮತ್ತು ಹುಮ್ಮಸ್ಸು ಎಂದು ತಿಳಿಯಬೇಕು ಎಂದರು.  

7 /16

ಜೀ ಕನ್ನಡ ನ್ಯೂಸ್‌ ಸಂಪಾದಕರಾದ ರವಿ ಅವರು ಸ್ವಾಗತ ಭಾಷಣದಲ್ಲಿ ಸಾಧಕರ ಸೇವೆ ಮತ್ತು ಕೈಂಕರ್ಯಗಳನ್ನು ಗುಣಗಾನ ಮಾಡಿದರು. ಅಲ್ಲದೆ ʼಜೀ ಕನ್ನಡ ನ್ಯೂಸ್‌ʼ ಮೂರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಮಸ್ತ ವೀಕ್ಷಕರ ಸಹಕಾರಕ್ಕೆ ಧನ್ಯವಾದಗಳನ್ನ ತಿಳಿಸಿದರು.  

8 /16

ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಚಿವರಾದ ರಾಮಲಿಂಗಾರೆಡ್ಡಿ, ಚಿತ್ರತಾರೆಯರಾದ ಧೃವ ಸರ್ಜಾ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು. ಜೊತೆಗೆ ಡಾ.ರಾಜಕುಮಾರ್ ಪುತ್ರಿಯರಾದ ಪೂರ್ಣಿಮಾ ರಾಮ್‌ಕುಮಾರ್‌ ಹಾಗೂ ಲಕ್ಷ್ಮಿ ಗೋವಿಂದರಾಜು ಹಾಜರಿದ್ದು, ಸಾಧಕರನ್ನು ಸನ್ಮಾನಿಸಿದರು. 

9 /16

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ 46 ಸಾಧಕರನ್ನು ಅಭಿನಂದಿಸಿರೋ ವಿಡಿಯೋ ಪ್ಲೇ ಮಾಡಲಾಯಿತು.   

10 /16

ಜೀ ಕನ್ನಡ ನ್ಯೂಸ್‌ ಗುರುತಿಸಿರುವ ಸಾಧಕರು ನಾಡು-ನುಡಿ, ನೆಲ-ಜಲ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಎಲೆಮರೆಯ ಕಾಯಿಯಂತಿರೋ ವ್ಯಕ್ತಿಗಳಿಗೆ ಮುಖ್ಯವಾಹಿನಿ ಕಲ್ಪಿಸಿಕೊಟ್ಟು ಗೌರವಿಸಿರೋದು ಉತ್ತಮ ಕಾರ್ಯವೆಂದು ಸಿಎಂ ಸಿದ್ದರಾಮಯ್ಯನವರು ಮೆಚ್ಚುಗೆ ವ್ಯಕ್ತಪಡಿಸಿದರು.  

11 /16

ಇನ್ನೂ ಈ ಸಂದರ್ಭದ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿಯವರು, ಸದ್ದಿಲ್ಲದೆ ಸ್ವಂತಕ್ಕೆ ಏನನ್ನೂ ಗಳಿಸಿಕೊಳ್ಳದ ನಿಸ್ವಾರ್ಥ ಜನರು ನಾಡಿನ ಉದ್ದಗಲಕ್ಕೂ ಜೀವಿಸುತ್ತಿದ್ದಾರೆ. ಸದಾ ಸಮಾಜ, ರಾಜ್ಯಕ್ಕೆ ಮಿಡಿಯುವ ಸ್ಪಂದಿಸುವ ಮಂದಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ರಾಜ್ಯವು ಅಭಿವೃದ್ಧಿಯಾಗಲಿದೆ. ಸಮೂಹ ಮಾಧ್ಯಮಗಳು ಎಲೆಮರೆ ಕಾಯಿಯಂತಿರೋ ಮಂದಿಗೆ ಕೈ ಕೊಟ್ಟು ಮುಖ್ಯವಾಹಿನಿಗೆ ತಂದು ಬಿಟ್ಟರೆ ಉಪಯೋಗ ಹೆಚ್ಚಾಗಲಿದೆ." ಎಂದರು  

12 /16

ಇನ್ನೂ ಸದಾನಂದ ಗೌಡರು ಮಾತನಾಡಿ " ರಾಜ್ಯದ ಉದ್ದಗಲದ ಸಾಧಕರನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಟ್ಟದ್ದೀರಿ. ಬದಲಾದ ಮಾಧ್ಯಮಗಳ ಸಂರಚನೆಯಾದ ಸೋಷಿಯಲ್‌ ಮೀಡಿಯಾ, AI ರೀತಿಯ ಸಮೂಹ ಮಾಧ್ಯಮ ಜನರನ್ನ ಕ್ಷಣಾರ್ಧದಲ್ಲಿ ಆಕರ್ಷಿಸುತ್ತಿದೆ. ಮುಂದಿನ ದಾರಿದೀಪ ಹೆಜ್ಜೆಗುರುತು ಸೃಷ್ಟಿಸುವ ʼಜೀ ಕನ್ನಡ ನ್ಯೂಸ್‌ʼ ಕಾರ್ಯ ಮರೆಯೋ ಹಾಗಿಲ್ಲ. ನಿಜವಾದ ಸಾಧಕರಿಗೆ ಸನ್ಮಾನ ದೊರೆತಿರುವುದು ಅಭಿನಂದನೀಯ." ಎಂದರು.  

13 /16

ನಂತರ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ, " ವಸ್ತುನಿಷ್ಠ ಸುದ್ದಿ ಪ್ರಸಾರದಿಂದ ʼಜೀ ಕನ್ನಡ ನ್ಯೂಸ್‌ʼ ರಾಜ್ಯದ ಜನರ ಮನಸಿಗೆ ಮುಟ್ಟಿದೆ. ಮೂರನೆ ವರ್ಷದ ವಾರ್ಷಿಕೋತ್ಸವ ಸಂಭ್ರದಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿರೋ ಗಣ್ಯರನ್ನು ಗುರುತಿಸಿ ಗೌರವ ಸಲ್ಲಿಸಿರುವುದು ಅಭಿನಂದನೆಗೆ ಅರ್ಹವಾದುದು. ಕಾಲ ಕಾಲಕ್ಕೆ ಬದಲಾವಣೆ ಅಗತ್ಯವಿರುವ ಹಾಗೆ ಗಣ್ಯರ ಸಾಧನೆ ವಿಭಿನ್ನವಾಗಿದ್ದು, ಗುರ್ತಿಸುವಿಕೆ ಕೂಡ ಅಗಾಧ ಪ್ರಕ್ರಿಯೆ. ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕರ ಸನ್ಮಾನ ಮತ್ತೊಂದು ಸಾಧನೆಗೆ ಮೆಟ್ಟಿಲಾಗಲಿ, ಸ್ಪೂರ್ತಿಯಾಗಲಿ." ಎಂದರು  

14 /16

ಇನ್ನೂ, ಈ ಸಂದರ್ಭದಲ್ಲಿ  ಸತ್ಯನಾರಾಯಣ, ಸಂಜಯ್ ಬೈದ್‌, ಬಿ.ಸಿ.ಜಯಪ್ರಸಾದ್‌,ಗೋಪಿ ಕೃಷ್ಣ, ಶಶಿಕುಮಾರ್ ತಿಮ್ಮಯ್ಯ,ಕೆ.ಎಂ.ಸಂದೇಶ್‌, ಸುಂದರ್‌ ರಾಜ್‌ಪತ್ತಿ, ಡಾ.ಎ.ಎಸ್‌.ಬಾಲಸುಬ್ರಮಣ್ಯ,  ನವೀನ್ ಕೆ, ನಿರ್ಮಲಾ ಹೆಚ್‌ ಸುರಪುರ, ನರಸಿಂಹಮೂರ್ತಿ ಮದ್ಯಸ್ತ, ಜೆ.ವೆಂಕಟೇಶ್‌,ಡಾ.ಶರದ್ ಕುಲಕರ್ಣಿ,ಡಾ.ಎನ್‌.ಕೀರ್ತಿರಾಜ್‌, ಎಂ.ಶಿವರಾಜ್‌, ರಾಘವೇಂದ್ರ ಕುಲಕರ್ಣಿ, ಡಾ.ಸುಪ್ರೀತ್‌, ಮಲ್ಲಿಕಾರ್ಜುನ ಗಂಗಾಂಬಿಕೆ, ಡಾ.ದ್ಯಾನೇಶ್ವರ್‌, ಗಂಗಾಧರ ರಾಜು.  

15 /16

ಡಾ.ಜಿ.ಎಸ್.ರವಿ, ಎ.ಅಮೃತರಾಜ್‌, ಬಸವರಾಜ ಆರ್‌.ಕಬಾಡೆ, ಡಾ.ಕೆ.ಮುನಿಯಪ್ಪ ಓದೇನಹಳ್ಳಿ, ವೇಲು ನಾಯ್ಕರ್‌,  ಎನ್.‌ರೀನಾ ಸುವರ್ಣ,ಡಾ.ಜಿ.ಎಸ್‌.ಶ್ರೀಧರ್‌, ಪ್ರೊ.ಎಂ.ವಿ.ಪ್ರಕಾಶ್‌, ಅಲಗಣಿ ಕಿರಣ್‌ಕುಮಾರ್‌, ಜಿ.ಎಸ್‌.ಶಶಿಕುಮಾರ್‌, ಡಿ.ಎಸ್‌.ರಾಮಲಿಂಗೇಗೌಡ, ಟಿ.ಜಿ.ವಿಶ್ವಾಸ್‌.  

16 /16

ಡಾ.ಜಿ.ಎಸ್‌.ಲತಾ ಜೈಪ್ರಕಾಶ್‌, ಎಸ್‌.ಕುಮಾರ್‌, ಗಿರೀಶ್ ಲಿಂಗಣ್ಣ, ಡಾ.ಶ್ರೀಮಂತ್‌ ಕುಂಬಾರ್‌, ಡಾ.ಫಾರೂಕ್‌ ಅಹ್ಮದ್‌ ಮಣೂರ್‌, ಅರುಣಕುಮಾರ್‌ ಎಸ್‌.ಪಾಟೀಲ್‌, ಯು.ಜೆ.ಮಲ್ಲಿಕಾರ್ಜುನ್‌, ಕೃಷ್ಣಮೂರ್ತಿ ಸಿ.ಎನ್‌, ಡಾ.ಪಂಡಿತ ಸಿದ್ದಾಂತ ಅರಣ್ ಶರ್ಮಾ,ಸಿಎಂ ಶಾಬಾಜ್‌ ಖಾನ್‌, ಅನಿಲ್ ಕುಮಾರ್‌ ಜಿ.ಆರ್‌, ಡಾ.ಆಶಿಕ್‌ ಬಿಜಿ, ಸುರೇಶ್‌ ಶಂಕರ್ ಜತ್ತಿ, ಎಂ.ಬಿ.ಜೋಷಿ, ಸೇರಿ ಒಟ್ಟು 46 ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.