physical relationship during pregnancy: ಮುಟ್ಟು ತಪ್ಪಿದ ಸಮಯದಿಂದ ಹೆರಿಗೆಯವರೆಗೆ, ಮಹಿಳೆಯರಿಗೆ ಅನೇಕ ವಿಷಯಗಳ ಬಗ್ಗೆ ಅನುಮಾನಗಳಿರುತ್ತವೆ, ವಿಶೇಷವಾಗಿ ಲೈಂಗಿಕತೆಯ ವಿಷಯಕ್ಕೆ ಬಂದಾಗ. ಈ ಸಮಯದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ತಿಳಿದುಕೊಳ್ಳಿ.
ಗರ್ಭಿಣಿಯಾಗಿದ್ದಾಗ ಮಹಿಳೆಯ ದೇಹದಲ್ಲಿ ಹಲವು ಬದಲಾವಣೆಗಳಾಗುತ್ತವೆ.. ಹೀಗಾಗಿ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ.. ಅದಕ್ಕಾಗಿ ಪತಿಯಾದವರು ಹೀಗೆ ಮಾಡಿದರೆ ನಿಮ್ಮ ಹೆಂಡತಿ ಮತ್ತು ಹುಟ್ಟಲಿರುವ ಮಗುವಿಗೆ ಒಳ್ಳೆಯದು ಎಂದು ಹಲವರು ಭಾವಿಸುತ್ತಾರೆ.
ಆರೋಗ್ಯಕರ ಹೆರಿಗೆಯನ್ನು ಬಯಸಿದರೆ, ಗರ್ಭಾವಸ್ಥೆಯಲ್ಲಿ ಖಂಡಿತವಾಗಿಯೂ ಲೈಂಗಿಕತೆಯನ್ನು ಹೊಂದಿರಬೇಕು ಎಂದು ಹೇಳಲಾಗುತ್ತದೆ.. ಆದರೆ ಇದು ಗರ್ಭಿಣಿಯ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ..
ನೀವು ಮಹಿಳೆಯ ಮೇಲೆ ಮಲಗಿ ಲೈಂಗಿಕ ಕ್ರಿಯೆ ನಡೆಸುವುದಕ್ಕಿಂತ ಕುಳಿತುಕೊಳ್ಳುವ ಭಂಗಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ, ಹೊಟ್ಟೆಯ ಮೇಲೆ ಯಾವುದೇ ಒತ್ತಡವಿರುವುದಿಲ್ಲ. ಯಾವುದೇ ಸಮಸ್ಯೆ ಇರುವುದಿಲ್ಲ. ಅಲ್ಲದೇ ನೀವು ಏಳು ತಿಂಗಳವರೆಗೆ ಸಾಮಾನ್ಯ ಲೈಂಗಿಕತೆಯನ್ನು ಹೊಂದಬಹುದು.
ಮತ್ತೊಂದು ವರದಿಯ ಪ್ರಕಾರ ಗರ್ಭದಾರಣೆಯ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗದೇ ಇರುವುದು ಒಳ್ಳೆಯದು.. ಏಕೆಂದರೇ ಆ ಸಮಯದಲ್ಲಿ ಆಗುವ ರಕ್ತಸ್ರಾವ ಅಥವಾ ಆಮ್ನಿಯೋಟಿಕ್ ದ್ರವ ಸೋರಿಕೆಯಿಂದಾಗಿ ಗರ್ಭಪಾತವಾಗುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುತ್ತದೆ..
ಇದಲ್ಲದೇ ಮಹಿಳೆಗೆ ಅಕಾಲಿಕ ಹೆರಿಗೆಯ ಯಾವುದೇ ಲಕ್ಷಣಗಳು ಕಂಡುಬಂದರೂ ಹೆರಿಗೆ ಆಗುವವರೆಗೂ ದೈಹಿಕ ಸಂಪರ್ಕದಿಂದ ದೂರವಿರುವುದು ಒಳಿತು.. ಇಲ್ಲವೇ ಅಂತಹ ಪರಿಸ್ಥಿತಿಯಲ್ಲಿ ವೈದ್ಯರ ಸಲಹೆ ತೆಗೆದುಕೊಳ್ಳಬೇಕು..
ಸೂಚನೆ: ಇಲ್ಲಿ ನೀಡಲಾದ ಮಾಹಿತಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಲ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.