Zee Achievers award 2025: 3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ವತಿಯಿಂದ ಗೌರವಿಸಲಾಯಿತು.
Zee Achievers award 2025: Zee Achievers award ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿ.ಕೆ.ಶಿವಕುಮಾರ್, ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ, ಡಿ. ವಿ. ಸದಾನಂದಗೌಡ, ರಾಮಲಿಂಗಾರೆಡ್ಡಿ, ಶಿವರಾಜ್ ತಂಗಡಗಿ ಹಾಗೂ ಸತೀಶ್ ಜಾರಕಿಹೊಳಿ ಅವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಆಲಗಾನಿ ಕಿರಣ್ ಕುಮಾರ್, ಶಿಕ್ಷಣತಜ್ಞ ಅನಿಲ್‌ಕುಮಾರ್ ಜಿ. ಆರ್, ಬಿಬಿಎಂಪಿ ಒಕ್ಕೂಟದ ಅಧ್ಯಕ್ಷರಾಗಿರುವ ಅಮೃತ್ ರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನೂ ಶಿಕ್ಷಣತಜ್ಞ ಡಾ. ಎ.ಎಸ್. ಬಾಲಸುಬ್ರಮಣ್ಯ,ಮುಖ್ಯ ಇಂಜಿನಿಯರ್ ಆಗಿ SWM-BSWL, BBMP ಯಲ್ಲಿ ಕಾರ್ಯ ನಿರ್ವಿಹಿಸುತ್ತಿರುವ ಬಸವರಾಜ್ ಆರ್. ಕಬಡೆ ಹಾಗೂ ಸಮಾಜೆ ಸೇವೆಗಾಗಿ ತಮ್ಮನ್ನು ತಾವು ಮುಡಿಪಾಗಿಸಿಕೊಂಡಿರುವ ಸಿ.ಎಂ. ಶಾಬಾಸ್ ಖಾನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕರಾಗಿ ಕೆಲಸ ಮಾಡುತ್ತಿರುವ ಅರುಣ್ ಕುಮಾರ್ ಎಸ್ ಪಾಟೀಲ್, ಅರುಣ್ ಶರ್ಮಾ ಹಾಗೂ, ಸಾಮಾಜ ಸೇವಕಿ ಮತ್ತು ಉದ್ಯಮಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಜಿ.ಎಸ್ ಲತಾ ಜೈ ಪ್ರಕಾಶ್ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.
ಆರೋಗ್ಯ ಸೇವೆಯಲ್ಲಿ ನಿರತಾಗಿರುವ ಡಾ. ಫರೂಕ್ ಅಹ್ಮದ್ ಮಾನೂರ್, ಬಿಜೆಪಿ ನಾಯಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಕೆ. ಮುನಿಯಪ್ಪಾ ಹಾಗೂ ಜ್ಯೋತಿಷಿಗಳಾದ ಡಾ. ಎನ್ ಕೀರ್ತಿರಾಜ್ ಅವರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಶರದ್ ಕುಲಕರ್ಣಿ, ಸಮಾಜ ಸೇವೆಯಲ್ಲಿ ನಿರತರಾಗಿರುವ ಡಾ. ಜಿ.ಎಸ್. ಶ್ರೀಧರ್ ಹಾಗೂ ಆರೋಗ್ಯ ಸೇವೆ ಮಾಡುತ್ತಿರುವ ಡಾ. ಆಶಿಕ್ ಬಿ.ಜಿ ಅವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನೂ, ಶಿಕ್ಷಣತಜ್ಞ ಡಾ. ಜಿ.ಎಸ್. ರವಿ, ಆರೋಗ್ಯ ಸೇವಕರಾಗಿರುವ ಡಾ. ಧ್ಯಾನೇಶ್ವರ್ ಹಾಗೂ ಡಾ. ಶ್ರೀಮಂತ್ ಕುಂಬಾರ್ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕಿಯಾದ ಗನಗಾಂಬಿಕೆ ಮಲ್ಲಿಕಾರ್ಜುನ್, ಸಮಾಜ ಸೇವಕ ಗಣಗಾದರ್ ರಾಜು ಹಾಗೂ ಬಾಹ್ಯಾಕಾಶ ಮತ್ತು ರಕ್ಷಣಾ ತಜ್ಞ ಹಾಗೂ ಬರಹಗಾರರಾಗಿರುವ ಗಿರೀಶ್ ಲಿಂಗಣ್ಣ ಅವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನೂ, ಸಮಾಜ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಗೋಪಿ ಕೃಷ್ಣ, ಜೆ. ವೆಂಕಟೇಶ್ ಹಾಗೂ ಜಯಪ್ರಕಾಶ್ ಬೆಳ್ಳೆಕೆರೆ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕರಾಗಿರುವ ಕೆ. ಎಂ ಸಂದೇಶ್, ಕೃಷ್ಣ ಮೂರ್ತಿ ಸಿ.ಎನ್, ಹಾಗೂ ಜ್ಯೋತಿಷಿಯಾಗಿರುವ ಎಂ.ಬಿ. ಜೋಷಿ ಅವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ಆಡಳಿತ ಪಕ್ಷದ ನಾಯಕರಾಗಿರುವ ಎಂ. ಶಿವರಾಜ್, ಪ್ರೊಫೆಸರ್ ಆಗಿರುವ ಎಂ.ವಿ. ಪ್ರಕಾಶ್ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನವೀನ್ ಕೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನೂ ಸಮಾಜ ಸೇವಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಿರ್ಮಲಾ ಸುರಾಪುರ, ಹೋಟೆಲ್ ಉದ್ಯಮಿಯಾಗಿರುವ ನರಸಿಂಹ ಮೂರ್ತಿ ಮದ್ಯಸ್ತ ಹಾಗೂ ಜ್ಯೋತಿಷಿ ಹಾಗೂ ವಾಸ್ತು ಸಲಹಾಗಾರರಾಗಿರುವ ಡಾ. ಪಂಡಿತ್ ಶ್ರೀ ಸಿದ್ದಾಂತ್ ಅರುಣ್ ಶರ್ಮಾ ಗುರುಜೀ ಅವರಿಗೂ ಪ್ರಶ್ತಿ ನೀಡಲಾಯಿತು.
ಜ್ಯೋತಿಷಿಗಳಾಗಿರುವ ರಾಘವೇಂದ್ರ ಕುಲಕರ್ಣಿ, ಸಮಾಜ ಸೇವಕರಾಗಿರುವ ರಾಮಲಿಂಗೇ ಗೌಡ ಹಾಗೂ ಅಸಿಸ್ಟೆಂಟ್ ಕಮೀಶನರ್ ಆಫ್ ಪೋಲಿಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ರೀನಾ ಸುವರ್ಣಾ. ಎನ್ ಅವರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮಾಜ ಸೇವಕರಾಗಿರುವ ಎಸ್. ಕುಮಾರ್, ಉದ್ಯಮಿಯಾಗಿರುವ ಸಂಜಯ್ ಬೇಧ್ ಹಾಗೂ ಶಶಿಕುಮಾರ್ ತಿಮ್ಮಯ್ಯ ಅವರಿಗೂ ಗೌರವ ನೀಡಿ ಸನ್ಮಾನಿಸಲಾಯಿತು.
ರಾಷ್ಟ್ರೀಯ ಪ್ಯಾರಾಲಿಂಪಿಕ್ ತರಬೇತುದಾರರಾಗಿರುವ ಸತ್ಯ ನಾರಾಯಣ, ಸಮಾಜ ಸೇವಕ ಶಶಿಕುಮಾರ್ ಜಿ ಎಸ್ ಹಾಗೂ ಉದ್ಯಮಿಯಾಗಿರುವ ಸುಂದರ್ ರಾಜ್ ಪರಿಯವರಿಗೂ ಕೂಡ ಸನ್ಮಾನ ಮಾಡಿ ಗೌರವಿಸಲಾಯಿತು.
ಇನ್ನೂ, ಸುಪ್ರೀತ್ ಗರೂಜಿ, ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಸುರೇಶ್ ಶಂಕರ್ ಜಟ್ಟಿ ಹಾಗೂ ಕನ್ನಡ ಪರ ಕಾರ್ಯಕರ್ತ ಹಾಗೂ ಸಮಾಜ ಸೇವಕರಾಗಿರುವ ಯು.ಜೆ. ಮಲ್ಲಿಕಾರ್ಜುನ್ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇನ್ನೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆಗಿರುವ ವೇಲು ನಾಯಕರ್, ಉದ್ಯಮಿಯಾರಿರುವ ವಿಶ್ವಾಸ್ ಟಿ. ಜಿ. ಹಾಗೂ ವೈ ಎನ್ ಸಿದ್ದೇ ಗೌಡ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಸಲಾಯಿತು.