ಮಿಥುನ ರಾಶಿಗೆ ಗುರುವಿನ ಸಂಚಾರ: ಈ ಮೂರು ರಾಶಿಗಳಿಗೆ ಹಠಾತ್‌ ಧನಲಾಭ, ಅದೃಷ್ಟದ ಬೆಂಬಲದಿಂದ ಬದಲಾಗಲಿದೆ ಲಕ್!

Jupiter's transit to Gemini: ಯಾರ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿರುತ್ತದೋ ಅವರು ತುಂಬಾ ಬಲಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಜ್ಞಾನದಿಂದ ಜೀವನದಲ್ಲಿ ಹೆಚ್ಚಿನ ಎತ್ತರ ತಲುಪಲಿದ್ದಾರೆ.

Jupiter Transit 2025: ಬೃಹಸ್ಪತಿ ಅಂತಾ ಕರೆಯಲ್ಪಡುವ ಗುರುಗ್ರಹವು ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಹೊಂದಿದೆ. ಇದು ಶುಭ ಗ್ರಹವಾಗಿದ್ದು, ಜ್ಞಾನ, ಅದೃಷ್ಟ, ಸಂಪತ್ತು, ಮದುವೆ, ಶಿಕ್ಷಣ, ವೃತ್ತಿ ಮತ್ತು ಧರ್ಮ ಇತ್ಯಾದಿಗಳಿಗೆ ಸಂಬಂಧಿಸಿದೆ. ಯಾರ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗಿರುತ್ತದೋ ಅವರು ತುಂಬಾ ಬಲಶಾಲಿಗಳಾಗಿರುತ್ತಾರೆ. ಈ ಜನರು ತಮ್ಮ ಜ್ಞಾನದಿಂದ ಜೀವನದಲ್ಲಿ ಹೆಚ್ಚಿನ ಎತ್ತರ ತಲುಪಲಿದ್ದಾರೆ. ಗುರುವಿನ ಚಲನೆ ಬದಲಾದಾಗಲೆಲ್ಲಾ ಅದು 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗ ಬೀರುತ್ತದೆ. ಮೇ ತಿಂಗಳಲ್ಲಿ ಗುರುಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇದರಿಂದ ಯಾವ ರಾಶಿಗಳ ಮೇಲೆ ಶುಭ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿಯಿರಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಪಂಚಾಂಗದ ಪ್ರಕಾರ ಮೇ 14ರ ಬೆಳಗ್ಗೆ 11.20ಕ್ಕೆ ಗುರು ತನ್ನ ರಾಶಿಯನ್ನು ಬದಲಾಯಿಸಲಿದೆ. ಗುರು ಗ್ರಹವು ಮಿಥುನ ರಾಶಿಗೆ ಸಾಗಲಿದೆ. ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಮಿಥುನ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಈ ಗುರು ಗ್ರಹದ ಸಂಚಾರವು ಯಾವ ರಾಶಿಯವರಿಗೆ ಶುಭವನ್ನು ತರಲಿದೆ ಎಂಬುದರ ಬಗ್ಗೆ ತಿಳಿಯಿರಿ....

2 /5

ಗುರುವಿನ ಸಂಚಾರ ಕರ್ಕಾಟಕ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಅವಕಾಶ ಸಿಗುತ್ತವೆ. ಹಳೆಯ ಹೂಡಿಕೆ ನಿಮಗೆ ಲಾಭದಾಯಕವಾಗಿವೆ. ವ್ಯಾಪಾರ ಮಾಡುವ ಜನರಿಗೆ ಆರ್ಥಿಕ ಲಾಭಗಳು ಸಿಗಲಿವೆ. ಇದರಿಂದ ಕಟಕ ರಾಶಿಯವರು ತಮ್ಮ ಸಾಲವನ್ನು ಸುಲಭವಾಗಿ ಮರುಪಾವತಿಸಲು ಸಾಧ್ಯವಾಗಲಿದೆ. 40-90 ವರ್ಷ ವಯಸ್ಸಿನ ಜನರು ದೀರ್ಘಕಾಲದ ಕಾಯಿಲೆಗಳ ನೋವಿನಿಂದ ಪರಿಹಾರ ಪಡೆಯುತ್ತಾರೆ. ನಿಮ್ಮ ಆರೋಗ್ಯವು ಸಹ ಸುಧಾರಿಸಲಿದೆ.

3 /5

ಕನ್ಯಾ ರಾಶಿಯವರ ಜೀವನದಲ್ಲಿ ಮೇ 14ರ ನಂತರ ಸಂತೋಷ ಬರಲಿದೆ. ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳ ಬುದ್ಧಿಶಕ್ತಿ ಬೆಳೆಯುತ್ತದೆ. ಉದ್ಯೋಗಿಗಳ ಜಾತಕದಲ್ಲಿ ಬಡ್ತಿ ಮತ್ತು ಸಂಬಳ ಹೆಚ್ಚಳದ ಸಾಧ್ಯತೆಯಿದೆ. ಕೆಲವು ದೊಡ್ಡ ಯೋಜನೆಗಳಿಂದ ಉದ್ಯಮಿಗಳು ಅಪಾರ ಲಾಭ ಪಡೆಯುವ ಸಾಧ್ಯತೆಯಿದೆ. ಕುಟುಂಬದ ಹಿರಿಯರ ಆರೋಗ್ಯ ಸುಧಾರಿಸಲಿದೆ. ಅದೃಷ್ಟದ ಬೆಂಬಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

4 /5

ಗುರು ದೇವರ ಆಶೀರ್ವಾದದಿಂದ ಮೀನ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಕುಟುಂಬದಲ್ಲಿ ಅಪಾರ ಸುಖ-ಸಂತೋಷ ಇರಲಿದೆ. ಕುಟುಂಬ ಸದಸ್ಯರ ನಡುವಿನ ಅಂತರವು ದೂರವಾಗಲಿದೆ. ಐಟಿ, ಮಾರ್ಕೆಟಿಂಗ್, ಆರೋಗ್ಯ, ಮಾಧ್ಯಮ, ನಿರ್ವಹಣೆ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಸಂಬಂಧಿಸಿದ ಜನರ ಆದಾಯವು ಮತ್ತಷ್ಟು ಹೆಚ್ಚಾಗಲಿದೆ. ಸಣ್ಣ ಉದ್ಯಮಿಗಳ ಕೆಲಸದಲ್ಲಿ ಬೆಳವಣಿಗೆ ಇರುತ್ತದೆ. 2025ರಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ. ಅದೃಷ್ಟದ ಬೆಂಬಲದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

5 /5

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)