Nirmala Sitharaman Saree: 8 ಸೀರೆಗಳು, 8 ಬಜೆಟ್... ಆಯವ್ಯಯ ಮಂಡನೆಗೂ ಮುನ್ನ ಸೀರೆ ಮೂಲಕವೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಟ್ಟ ಸುಳಿವೇನು ?

Nirmala Sitharaman Budget saree: ಮೋದಿ ಸರ್ಕಾರದ ಮೂರನೇ ಅವಧಿಯ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದು ಅವರ ಸತತ 8ನೇ ಬಜೆಟ್ ಭಾಷಣವಾಗಿದೆ. ಬಜೆಟ್ ಸಮಯದಲ್ಲಿ ಸೀತಾರಾಮನ್ ಇಲ್ಲಿಯವರೆಗೆ ಯಾವ ಬಣ್ಣದ ಸೀರೆಗಳನ್ನು ಧರಿಸಿದ್ದರು ಮತ್ತು ಈ ಸೀರೆಗಳು ಕೊಟ್ಟ ಸುಳಿವೇನಾಗಿತ್ತು ಎಂದು ನೋಡೋಣ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

2025 ರ ಬಜೆಟ್ ಭಾಷಣದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ದಡಿಯನ್ನು ಹೊಂದಿರುವ ಮಾಸಲು ಬಿಳಿ ಬಣ್ಣದ ಸೀರೆ ಉಟ್ಟಿದ್ದಾರೆ. ಅದರ ಮೇಲೆ ಬಿಹಾರದ ಮಧುಬನಿ ಚಿತ್ರಕಲೆಯನ್ನು ಚಿತ್ರಿಸಲಾಗಿದೆ. ಮೆರೂನ್ ಬಣ್ಣದ ಬ್ಲೌಸ್‌ನೊಂದಿಗೆ ಮ್ಯಾಚ್‌ ಮಾಡಿದ್ದಾರೆ. ಇದು ಸತ್ಯದ ಸಂಕೇತವಾಗಿದೆ. ಆದರೆ ಮರೂನ್ ಬಣ್ಣವು ಅತ್ಯಾಧುನಿಕತೆ, ಜ್ಞಾನ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ.

2 /8

ಬಜೆಟ್ 2024 ರ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆನೆ ಬಣ್ಣದ ಚೆಕ್ಡ್ ಸೀರೆಯನ್ನು ಧರಿಸಿದ್ದರು. ಅದರ ಮೇಲೆ ಚಿನ್ನದ ಎಲೆಗಳ ಮುದ್ರಿತ ಅಂಚು ಗೋಚರಿಸುತ್ತದೆ. ಸೀರೆಯ ಪಲ್ಲು ಕೆನ್ನೇರಳೆ ಮತ್ತು ಚಿನ್ನದ ಬಣ್ಣದ್ದಾಗಿತ್ತು. ಇದು ಐಶ್ವರ್ಯ ಮತ್ತು ಮೃದುತ್ವವನ್ನು ಸಂಕೇತಿಸುತ್ತದೆ. ಸಾರ್ವತ್ರಿಕ ಸಾಮರಸ್ಯ ಮತ್ತು ಭಾವನಾತ್ಮಕ ಸಮತೋಲನವನ್ನು ಪ್ರತಿನಿಧಿಸುತ್ತದೆ.

3 /8

2024 ರ ಮಧ್ಯಂತರ ಬಜೆಟ್ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡರು. ಇದು ಶಾಂತಿ, ಸ್ಥಿರತೆ, ಸ್ಫೂರ್ತಿ, ಜ್ಞಾನ ಮತ್ತು ವಿಶ್ವಾಸದ ಸಂಕೇತವಾಗಿದೆ.

4 /8

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023 ರಲ್ಲಿ ಕೆಂಪು ಮತ್ತು ಕಪ್ಪು ಮಿಶ್ರಿತ ಸೀರೆಯಲ್ಲಿ ಬಜೆಟ್ ಮಂಡಿಸಿದರು. ಈ ಬಣ್ಣವು ಧೈರ್ಯ ಮತ್ತು ಶಕ್ತಿಯ ಸಂಕೇತವಾಗಿದೆ.

5 /8

2022 ರ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಂದು ಬಣ್ಣದ ಸೀರೆಯನ್ನು ಧರಿಸಿದ್ದರು. ಈ ಬಣ್ಣ ಭದ್ರತೆಯನ್ನು ಸಂಕೇತಿಸುತ್ತದೆ.  

6 /8

ನಿರ್ಮಲಾ ಸೀತಾರಾಮನ್ 2021 ರ ಬಜೆಟ್ ಸಮಯದಲ್ಲಿ ಅವರು ಕೆಂಪು ಬಣ್ಣದ ಸೀರೆಯನ್ನು ಉಟ್ಟು ಬಜೆಟ್ ಮಂಡಿಸಿದರು. ಕೆಂಪು ಬಣ್ಣವನ್ನು ಶಕ್ತಿ ಮತ್ತು ನಿರ್ಣಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವರ ಸೀರೆಯ ಬಣ್ಣ ಕೆಂಪು ಮತ್ತು ಕೆನೆ ಬಣ್ಣ ಮಿಶ್ರಿತವಾಗಿತ್ತು.

7 /8

ಯಾವುದೇ ಶುಭ ಕಾರ್ಯಕ್ಕೆ ಹಳದಿ ಬಣ್ಣವನ್ನು ಶುಭವೆಂದು ಪರಿಗಣಿಸಲಾಗುತ್ತದೆ. 2020 ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಳದಿ ಬಣ್ಣದ ಸೀರೆಯಲ್ಲಿ ಬಜೆಟ್ ಅನ್ನು ಮಂಡಿಸಿದರು. ಹಳದಿ ಬಣ್ಣವು ಉತ್ಸಾಹ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ.

8 /8

ಪ್ರತಿಯೊಂದು ಬಣ್ಣವೂ ಒಂದು ಸಂದೇಶ ನೀಡುತ್ತದೆ. 2019 ರಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುಲಾಬಿ ಬಣ್ಣದ ಸೀರೆ ಉಟ್ಟು ಬಜೆಟ್ ಮಂಡಿಸಿದರು. ಗುಲಾಬಿ ಬಣ್ಣವನ್ನು ಸ್ಥಿರತೆ ಮತ್ತು ಗಂಭೀರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.