ಲವ್‌ ಫೆಲ್ಯೂವರ್‌ ಆಗಿದ್ಯಾ..? ಶ್ರೀಕೃಷ್ಣ ಪರಮಾತ್ಮನ ಈ 5 ಅದ್ಭುತ ಮಾತುಗಳು ನಿಮ್ಮ ಜೀವನವನ್ನೇ ಬದಲಾಯಿಸುತ್ತವೆ..

Lord Krishna inspirational speech : ಬ್ರೇಕಪ್‌, ಜೀವನದಲ್ಲಿ ಸಾಲು ಸಾಲು ಕಷ್ಟಗಳು, ಸೋಲು ಹೀಗೆ ನಾನಾ ರೀತಿಯ ತೊಂದರೆಗಳು ನಿಮ್ಮನ್ನ ಕಾಡುತ್ತಿದ್ದರೆ ಕುಗ್ಗಬೇಡಿ.. ಆಪತ್ಬಾಂಧವ.. ಅನಾಥ ರಕ್ಷಕ, ಪ್ರೀತಿಯ ಪ್ರತಿರೂಪನಾದ ಶ್ರೀಕೃಷ್ಣನು ಹೇಳಿರುವ ಈ 5 ಮಾತುಗಳನ್ನು ಕೇಳಿ ಸಾಕು..
 

1 /10

ಶ್ರೀಕೃಷ್ಣನು ಅರ್ಜುನನಿಗೆ ಐದು ಅದ್ಭುತ ಮಾತುಗಳನ್ನು ಕೇಳುತ್ತಾನೆ... ಭಗವದ್ಗೀತೆಯಲ್ಲಿ ಈ ಮುಕುಂದನ ಈ ಅಮೂಲ್ಯ ಮಾತುಗಳನ್ನು ಉಲ್ಲೇಖಿಸಲಾಗಿದೆ.. ಜೀವನದಲ್ಲಿ ನೋವು.. ಸತತ ಸೋಲು, ನಂಬಿದವರಿಂದ ಮೋಸ, ಬ್ರೇಕಪ್‌ ಸೇರಿದಂತೆ ಹಲವಾರು ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇವು ನಿಮ್ಮನ್ನ ಬದಲಾಯಿಸುತ್ತದೆ..  

2 /10

ಶ್ರೀಮದ್ ಭಾಗವತ ಗೀತೆಯಲ್ಲಿನ ಪ್ರತಿಯೊಂದು ಶ್ಲೋಕವನ್ನು ಶ್ರೀಕೃಷ್ಣನೇ ಹೇಳುತ್ತಾನೆ. ರಾಧಾರಮಣ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಈ ಮಾತುಗಳನ್ನು ಬೋಧನೆ ಮಾಡುತ್ತಾನೆ.. ಇದು ಪಾರ್ಥನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.. ಆನಂತರ ಮಧ್ಯಮ ಪಾಂಡವ ಸಂಪೂರ್ಣ ಆತ್ಮವಿಶ್ವಾಸದಿಂದ ಧರ್ಮಯುದ್ಧದಲ್ಲಿ ಹೋರಾಡುತ್ತಾನೆ..   

3 /10

ಅಂದು ಶ್ರೀಕೃಷ್ಣ ಹೇಳಿದ ಮಾತುಗಳು ಕಲಿಯುಗದಲ್ಲಿ ಇಂದಿಗೂ ಜನರನ್ನು ಮಾರ್ಗದರ್ಶಿಸುತ್ತದೆ. ಭಗವದ್ಗೀತೆ ಕೇವಲ ಧರ್ಮಗ್ರಂಥವಲ್ಲ ಇಂದಿನ ಜನರಿಗೆ ಪರಿಪೂರ್ಣ ಮಾರ್ಗದರ್ಶಕವಾಗಿದೆ. ಧರ್ಮ, ಅಧರ್ಮ, ಕರ್ಮಗಳ ಬಗ್ಗೆ ಇದರಲ್ಲಿ ಬಹಳ ಅರ್ಥಪೂರ್ಣವಾಗಿ ತಿಳಿಸಿಲಾಗಿದೆ..  

4 /10

ಭಗವದ್ಗೀತೆಯನ್ನು ಅರ್ಥಮಾಡಿಕೊಂಡವರ ಜೀವನವು ಯಶಸ್ವಿಯಾಗುತ್ತದೆ. ಗೀತೆಯನ್ನು ಓದಿದವರು ಜೀವನದಲ್ಲಿ ಎಲ್ಲಾ ರೀತಿಯ ತೊಂದರೆಗಳಿಂದ ಹೊರಬರಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಇದರೊಂದಿಗೆ ಸದಾ ಚಂಚಲವಾಗಿರುವ, ಅಲ್ಲಿ ಇಲ್ಲಿ ಅಲೆದಾಡುವ ಅಥವಾ ಸದಾ ಯಾವುದೋ ಭಯದಿಂದ ತೊಂದರೆಗೀಡಾಗಿರುವ ಮನಸ್ಸಿನ ನಿಯಂತ್ರ ಮಾಡಬಹುದು..  

5 /10

ಜೀವನದಲ್ಲಿ ಶಾಂತಿಯನ್ನು ಬಯಸುವವರು ಗೀತೆಯನ್ನು ಪಠಿಸಬೇಕು. ಇದರಲ್ಲಿ ಶ್ರೀಕೃಷ್ಣನು ಮನುಷ್ಯನಿಗೆ ಎಲ್ಲಾ ರೀತಿಯ ಒತ್ತಡದಿಂದ ಮುಕ್ತಿ ನೀಡುವ ಮತ್ತು ಮಾನಸಿಕ ಶಾಂತಿಯ ನೀಡುವ 5 ಉಪದೇಶಗಳನ್ನು ಮಾಡಿದ್ದಾನೆ.. ಬನ್ನಿ ಕಲಿಯುಗದ ಪ್ರತ್ಯಕ್ಷ ದೈವ ಶ್ರೀಕೃಷ್ಣನ ಆ ಅದ್ಭುತ ನುಡಿಗಳನ್ನು ಅರಿತುಕೊಳ್ಳೋಣ..  

6 /10

ನಿನ್ನ ಕೆಲಸ ಮಾಡು, ಫಲದ ಆಸೆ ಬೇಡ : ಶ್ರೀಮದ್ ಭಗವದ್ಗೀತೆಯಲ್ಲಿ, ಶ್ರೀಕೃಷ್ಣನು ಅತ್ಯಂತ ಸರಳವಾದ ಮಾತುಗಳಲ್ಲಿ ಇದು ಒಂದು.. ಯಾವುದೇ ವ್ಯಕ್ತಿ ತನ್ನ ಕೆಲಸದ ಫಲಿತಾಂಶವನ್ನು ನೋಡದೆ ಕೆಲಸ ಮಾಡಬೇಕು. ಏಕೆಂದರೆ ನಾವು ನಮ್ಮ ಕೆಲಸವನ್ನು ನಿಸ್ವಾರ್ಥವಾಗಿ ಮಾಡಿದಾಗ ಫಲಿತಾಂಶದ ಬಗ್ಗೆ ಚಿಂತಿಸುವುದಿಲ್ಲ.. ವೈಫಲ್ಯದ ಭಯವೂ ಇರುವುದಿಲ್ಲ..   

7 /10

ಯಾರೂ ಶಾಶ್ವತವಲ್ಲ : ಶ್ರೀಮದ್ ಭಗವದ್ಗೀತೆಯ ಪ್ರಕಾರ, ಇಂದಿನ ಯುಗದಲ್ಲಿ ಅನೇಕ ವಿಷಯಗಳು ಮನುಷ್ಯನನ್ನು ಆಕರ್ಷಿಸುತ್ತವೆ. ನಾವು ಯಾವುದಕ್ಕೂ ಅತಿಯಾಗಿ ಅಂಟಿಕೊಳ್ಳಬಾರದು.. ಅತೀಯಾದ ಬಾಂಧವ್ಯವೂ ಸಹ ನಮಗೆ ಮುಂದೊಂದು ದಿನ ತೊಂದರೆ ನೀಡುತ್ತವೆ.. ಆದ್ದರಿಂದ ಯಾರನ್ನೂ ಅವಲಂಬಿಸಬೇಡಿ ಮತ್ತು ಯಾರೊಂದಿಗೂ ಅಂಟಿಕೊಳ್ಳಬೇಡಿ.. ಒಂಟಿಯಾಗಿ ಹೋರಾಡುವುದನ್ನು ಜೀವಿಸುವುದನ್ನು ಕಲಿಯಿರಿ..  

8 /10

ಅದೃಷ್ಟವನ್ನು ಅವಲಂಬಿಸಬೇಡಿ, ಪ್ರಯತ್ನಿಸಿ : ಅದೃಷ್ಟವನ್ನು ನೆಚ್ಚಿಕೊಂಡು ಯಾರೂ ಏನನ್ನೂ ಪಡೆಯುವುದಿಲ್ಲ. ಯಾವಾಗಲೂ ಪ್ರಯತ್ನಿಸಿ, ಕಷ್ಟಪಟ್ಟು ದುಡಿಯಿರಿ.. ಆಗ ಅದೃಷ್ಟ ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಮನುಷ್ಯನು ತನ್ನ ಪ್ರಯತ್ನದ ಬಲದಿಂದ ತನ್ನ ಹಣೆಬರಹವನ್ನು ಬದಲಾಯಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ.. ಹಾಗಾಗಿ ಪ್ರಯತ್ನದಿಂದ ಹಿಂದೆ ಸರಿಯಬೇಡಿ.  

9 /10

ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಕೆಲಸ ಮಾಡಿ : ಭಗವದ್ಗೀತೆಯ ಪ್ರಕಾರ, ಒಬ್ಬನು ಬುದ್ಧಿವಂತಿಕೆ ಮತ್ತು ಆತ್ಮಸಾಕ್ಷಿಯಿಂದ ಪ್ರತಿಯೊಂದು ಕೆಲಸವನ್ನು ಮಾಡಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಸಿಗುವುದಲ್ಲದೆ, ಮಾನಸಿಕ ತೊಂದರೆಯಾಗುವುದಿಲ್ಲ. ಬುದ್ಧಿವಂತಿಕೆ ಮತ್ತು ಆತ್ಮಸಾಕ್ಷಿಯಿಂದ ಮಾಡಿದ ಕೆಲಸವು ಯಶಸ್ವಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.  

10 /10

ಚಿಂತೆ ಬಿಡಿ, ದೇವರನ್ನು ಆಶ್ರಯಿಸಿ : ಯಾರು ದೇವರನ್ನು ಆಶ್ರಯಿಸುತ್ತಾನೊ, ಅಂತಹ ಜನರ ಎಲ್ಲಾ ಭಯ, ತೊಂದರೆ ಮತ್ತು ಚಿಂತೆಗಳನ್ನು ದೇವರು ದೂರ ಮಾಡುತ್ತಾನೆ ಎಂದು ಶ್ರೀಕೃಷ್ಣನೇ ಶ್ರೀಮದ್ ಭಾಗವತ ಗೀತೆಯ 18 ನೇ ಅಧ್ಯಾಯದಲ್ಲಿ ಹೇಳಿದ್ದಾನೆ. ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಶರಣಾಗುವಂತೆ ಕೇಳಿಕೊಂಡನು. ನೀನು ಎಲ್ಲಾ ಧರ್ಮಗಳನ್ನು ಬಿಟ್ಟು ನನಗೆ ಶರಣಾಗು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ ಎಂದು ಅರ್ಜುನನಿಗೆ ಹೇಳಿದನು. ಹಾಗಾಗಿ ಅನಗತ್ಯವಾಗಿ ಚಿಂತಿಸಬೇಡಿ.