Darshan Thoogudeepa Net worth: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ಜೈಲು ವಾಸ ಅನುಭವಿಸಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ನಟ ದರ್ಶನ್ ಆಸ್ತಿ ವಿವರ ಇಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ಜೈಲು ವಾಸ ಅನುಭವಿಸಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ನಟ ದರ್ಶನ್ ಆಸ್ತಿ ವಿವರ ಇಲ್ಲಿದೆ. 16 ಫೆಬ್ರವರಿ 1977ರಲ್ಲಿ ಹುಟ್ಟಿರುವ ದರ್ಶನ್ ತೂಗುದೀಪ ಚಂದನವನದ ಪ್ರತಿಭಾನ್ವಿತ ನಟ. ನಟ, ನಿರ್ಮಾಪಕ ಮತ್ತು ವಿತರಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡಿರುವ ದಾಸ, 2006ರಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಕೂಡ ಪ್ರಾರಂಭಿಸಿದ್ದರು.
ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಕೂಡ ದರ್ಶನ್ ಪಾಲಿಗೆ ಬಂದಿದೆ. ಇನ್ನು ದರ್ಶನ್ ಅವರು ಮೊದಲ ಬಾರಿಗೆ ನಾಯಕನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 2002ರಲ್ಲಿ ತೆರೆಕಂಡ ಮೆಜೆಸ್ಟಿಕ್ ಚಿತ್ರದ ಮೂಲಕ.
ಅಷ್ಟೇ ಅಲ್ಲ, ಕರ್ನಾಟಕ ರಾಜ್ಯ ಅತ್ಯುತ್ತಮ ನಟ ಪ್ರಶಸ್ತಿ ಕೂಡ ದರ್ಶನ್ ಪಾಲಿಗೆ ಬಂದಿದೆ. ಇನ್ನು ದರ್ಶನ್ ಅವರು ಮೊದಲ ಬಾರಿಗೆ ನಾಯಕನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು 2002ರಲ್ಲಿ ತೆರೆಕಂಡ ಮೆಜೆಸ್ಟಿಕ್ ಚಿತ್ರದ ಮೂಲಕ.
ಕೊಡಗಿನ ಪೊನ್ನಂಪೇಟೆಯಲ್ಲಿ ಜನಿಸಿದ ದರ್ಶನ್ ಅವರ ತಾಯಿ ಹೆಸರು ಮೀನಾ ಮತ್ತು ತಂದೆ ತೂಗುದೀಪ ಶ್ರೀನಿವಾಸ್. ತೂಗುದೀಪ ಶ್ರೀನಿವಾಸ್ ಹೆಸರು ಕರ್ನಾಟಕದ ಪ್ರತಿಯೊಬ್ಬ ಜನರಿಗೂ ತಿಳಿದಿರುವಂತೆ. ಅಂದಿನ ಕಾಲದಲ್ಲಿ ಅತ್ಯುತ್ತಮ ಪೋಷಕ ನಟನಾಗಿದ್ದ ಅವರು ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.
ದರ್ಶನ್ ಅವರಿಗೆ ದಿವ್ಯಾ ಎಂಬ ಸಹೋದರಿ ಮತ್ತು ದಿನಕರ್ ತೂಗುದೀಪ ಎಂಬ ಸಹೋದರ ಇದ್ದಾರೆ. ಇನ್ನು 2000ನೇ ಇಸವಿಯಲ್ಲಿ ದರ್ಶನ್ ವಿಜಯಲಕ್ಷ್ಮಿ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ ವಿನೀಶ್ ಎಂಬ ಮಗನಿದ್ದಾನೆ.
2017 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದ ದರ್ಶನ್ ಅವರು ʼಜೊತೆ ಜೊತೆಯಲಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ನಟನಾಗಿಯೂ ಮಿಂಚಿರುವ ದರ್ಶನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (2012) ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.
ವರದಿಗಳ ಪ್ರಕಾರ, ಇವರ ಆಸ್ತಿ ಮೌಲ್ಯವನ್ನು ನೋಡುವುದಾದರೆ, ಆರ್ ಆರ್ ನಗರದಲ್ಲಿ 6 ರಿಂದ 7 ಕೋಟಿ ಬೆಲೆಬಾಳುವ 2 ಮನೆಗಳನ್ನು ಹೊಂದಿದ್ದಾರಂತೆ. ಅಷ್ಟೇ ಅಲ್ಲದೆ, ಚಂದ್ರ ಲೇಔಟ್ʼನಲ್ಲಿ 5-6ಕೋಟಿ ಬೆಲೆ ಬಾಳುವ ಕಾಂಪ್ಲೆಕ್ಸ್ ಕೂಡ ದರ್ಶನ್ ಹೆಸರಿನಲ್ಲಿದೆ ಎನ್ನಲಾಗಿದೆ. ಇವೆಲ್ಲದ ಜೊತೆಗೆ 4-5 ಕೋಟಿ ಬೆಲೆ ಬಾಳುವ ನಾಲ್ಕು ಐಷಾರಾಮಿ ಕಾರುಗಳ ಒಡೆಯ ಕೂಡ ಹೌದು.
ವಾಚ್‌ಗಳ ಮೇಲೆಯೂ ಸಿಕ್ಕಾಪಟ್ಟೆ ಕ್ರೇಜ್ ಹೊಂದಿರುವ ದರ್ಶನ್ ಅವರು ಕೋಟಿ ಕೋಟಿ ಬೆಲೆ ಬಾಳುವ ವಾಚುಗಳನ್ನು ಖರೀದಿಸುತ್ತಾರೆ ಎನ್ನಲಾಗಿದೆ. ಅಂದಹಾಗೆ ಮೈಸೂರು- ನರಸೀಪುರ ರಸ್ತೆಯಲ್ಲಿ 5 ಕೋಟಿ ಮೌಲ್ಯದ ನಾಲ್ಕು ಎಕರೆ ಫಾರ್ಮ್ ಹೌಸ್ ಕೂಡಾ ದರ್ಶನ್ ಹೊಂದಿದ್ದಾರೆ ಎನ್ನಲಾಗಿದೆ.