Brazilian actress Claudia Raia: ನಟಿ ಕ್ಲೌಡಿಯಾ ರೈಯಾ ಅವರು ತಮ್ಮ ಹುಟ್ಟುಹಬ್ಬದಂದು ಮಗಳಿಗೆ ವೈಬ್ರೇಟರ್ ಅನ್ನು ಉಡುಗೊರೆಯಾಗಿ ನೀಡಿರುವುದನ್ನು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದು, ಇದನ್ನು ಕೇಳಿದ ನಂತರ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
Brazilian actress Claudia Raia: ನಟಿ ಕ್ಲೌಡಿಯಾ ರೈಯಾ ಅವರು ತಮ್ಮ ಹುಟ್ಟುಹಬ್ಬದಂದು ಮಗಳಿಗೆ ವೈಬ್ರೇಟರ್ ಅನ್ನು ಉಡುಗೊರೆಯಾಗಿ ನೀಡಿರುವುದನ್ನು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದು, ಇದನ್ನು ಕೇಳಿದ ನಂತರ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ.
ಪೋಷಕರು ತಮ್ಮ ಮಕ್ಕಳ ಜನ್ಮದಿನದಂದು ಅವರ ಆದ್ಯತೆಗಳು ಮತ್ತು ವಯಸ್ಸಿನ ಆಧಾರದ ಮೇಲೆ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಅಂತಹ ಉಡುಗೊರೆಯೊಂದು ನಟಿಯೊಬ್ಬರನ್ನು ದೊಡ್ಡ ವಿವಾದಕ್ಕೆ ಸಿಲುಕಿಸಿದೆ. ಬ್ರೆಜಿಲಿಯನ್ ನಟಿ ಕ್ಲೌಡಿಯಾ ರೈಯಾ ಅವರು ನೇರ ದೂರದರ್ಶನದಲ್ಲಿ ಆಘಾತಕಾರಿಯಾದ ವಿಚಾರವನ್ನು ಬಹಿರಂಗಪಡಿಸುವ ಮೂಲಕ ಭಾರಿ ವಿವಾದವನ್ನು ಸೃಷ್ಟಿಸಿದ್ದಾರೆ.
ಕ್ಲೌಡಿಯಾ ರೈಯಾ ತನ್ನ 12 ನೇ ಹುಟ್ಟುಹಬ್ಬದಂದು ತನ್ನ ಮಗಳಿಗೆ ವೈಬ್ರೇಟರ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶದ ಅಲೆಯನ್ನು ಸೃಷ್ಟಿಸಿದ್ದು, ಆಕೆಯನ್ನು ಪೊಲೀಸರು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಕ್ಲೌಡಿಯಾ ರೈಯಾ, 58, ಬ್ರೆಜಿಲ್ನ ಪ್ರಸಿದ್ಧ ಸೋಪ್ ಒಪೆರಾ ನಟಿ ಮತ್ತು ಗಾಯಕಿ. ಪೋರ್ಚುಗೀಸ್ ಟೆಲಿವಿಷನ್ ಶೋ 'ಗೌಚಾ'ದಲ್ಲಿ ಸಂದರ್ಶನ ನೀಡುವಾಗ ಈ ಆಘಾತಕಾರಿ ವಿವಾರವನ್ನು ಬಹಿರಂಗ ಪಡಿಸಿದ್ದಾರೆ.
"ನನ್ನ ಮಗಳಿಗೆ 12 ವರ್ಷವಾದಾಗ, ನಾನು ಅವಳಿಗೆ ಒಂದು ವೈಬ್ರೇಟರ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ" ಎಂದು ಅವರು ಹೇಳಿದ್ದರು.
ಕ್ಲೌಡಿಯಾ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ಮುಗ್ಧತೆಯನ್ನು ಯಾರೂ ಗೌರವಿಸುವುದಿಲ್ಲ” ಎಂದು ಇನ್ಸ್ಟಾಗ್ರಾಮ್ನಲ್ಲಿ ಬಳಕೆದಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ ಎದ್ದ ತಕ್ಷಣ ನಟಿ ಯೂ-ಟರ್ನ್ ತೆಗೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ವಿವರಿಸಿದ ಕ್ಲೌಡಿಯಾ, “ನಾನು ಯಾವಾಗಲೂ ನನ್ನ ಮಕ್ಕಳೊಂದಿಗೆ ಯಾವುದೇ ವಿಷಯದ ಬಗ್ಗೆ ಸಂವಹನ ನಡೆಸಲು ಪ್ರಯತ್ನಿಸುತ್ತೇನೆ. ಇದು ಲೈಂಗಿಕ ಶಿಕ್ಷಣವನ್ನೂ ಒಳಗೊಂಡಿದೆ. ನನ್ನ ಮಕ್ಕಳಿಗೆ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವುದು ನನಗೆ ಮುಖ್ಯವಾಗಿದೆ. ಪ್ರತಿಯೊಂದು ಕುಟುಂಬವು ಸಮಸ್ಯೆಗಳನ್ನು ಎದುರಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಅದನ್ನು ಗೌರವಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.
ಬ್ರೆಜಿಲಿಯನ್ ಸುದ್ದಿ ಸಂಸ್ಥೆ ಮೆಟ್ರೋಪೋಲ್ಸ್ ವರದಿಯ ಪ್ರಕಾರ, ಮಿನಾಸ್ ಗೆರೈಸ್ ಕಾಂಗ್ರೆಸ್ ಮಹಿಳೆ ಕ್ರಿಸ್ಟಿಯಾನೊ ಕಾಪೊರೆಜೊ ಅವರು ಕ್ಲೌಡಿಯಾ ರೈಯಾ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮಕ್ಕಳ ಮತ್ತು ಬಾಲಾಪರಾಧಿ ಕಾಯ್ದೆಯ (ಆರ್ಟಿಕಲ್ 241-ಡಿ) ಉಲ್ಲಂಘನೆ ಆರೋಪಿಸಲಾಗಿದೆ.
ಸೆಕ್ಸ್ ಥೆರಪಿಸ್ಟ್ ತಮಾರಾ ಝನೊಟೆಲ್ಲಿ ಕ್ಲೌಡಿಯಾ ಅವರ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜನರು ಈಗ ವೈಬ್ರೇಟರ್ಗಳನ್ನು ಕೇವಲ ಸಂತೋಷಕ್ಕಾಗಿ ಮಾತ್ರವಲ್ಲದೆ ಆರೋಗ್ಯಕ್ಕಾಗಿಯೂ ಬಳಸುತ್ತಾರೆ. ಕೆಲವು ವೈದ್ಯರು ಇದರ ಬಳಕೆಯನ್ನು ಸಹ ಶಿಫಾರಸು ಮಾಡುತ್ತಾರೆ, ಆದರೆ 12 ವರ್ಷ ವಯಸ್ಸಿನ ಹುಡುಗಿಗೆ ವೈಬ್ರೇಟರ್ ನೀಡುವುದು ಗಂಭೀರ ವಿಷಯವಾಗಿದೆ. ಅನೇಕ ಹುಡುಗಿಯರು ಪ್ರೌಢಾವಸ್ಥೆಗೆ ಮುಂಚೆಯೇ ಲೈಂಗಿಕತೆಯ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದಾರೆ, ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಆಟಿಕೆಗಳನ್ನು ನೀಡುವುದು ತಪ್ಪು ಮತ್ತು ನೋವುಂಟುಮಾಡುತ್ತದೆ ಎಂದು ಅವರು ಹೇಳಿದರು.