ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಯಾರು ಗೊತ್ತಾ? ಕಿಚ್ಚ ಸುದೀಪ್‌ ಬಳಿಕ ಬಿಗ್‌ ಬಾಸ್‌ ಹೋಸ್ಟ್‌ ಮಾಡೋದು ಕೂಡ ಇವರೇಯಂತೆ...

highest paid actors: ಕನ್ನಡ ಚಿತ್ರರಂಗ ಇಂದು ಉತ್ತುಂಗಕ್ಕೇರುತ್ತಿದೆ. ಬ್ಯಾಕ್‌ ಟು ಬ್ಯಾಕ್‌ ಸೂಪರ್‌ ಹಿಟ್‌ ಸಿನಿಮಾಗಳನ್ನೇ ನೀಡುತ್ತಿರುವ ಸ್ಯಾಂಡಲ್ವುಡ್‌ ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡುತ್ತಿದೆ. ಕೆಜಿಎಫ್‌, ಚಾರ್ಲಿ, ಕಾಂತಾರಾ, ಮ್ಯಾಕ್ಸ್‌ ಹೀಗೆ ಹಲವಾರು ಸಿನಿಮಾಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್‌ ಆಗಿದ್ದಲ್ಲದೆ, ದೇಶಾದ್ಯಂತ ಭಾರೀ ಮೆಚ್ಚುಗೆ ಪಡೆದಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಕನ್ನಡ ಚಿತ್ರರಂಗ ಇಂದು ಉತ್ತುಂಗಕ್ಕೇರುತ್ತಿದೆ. ಬ್ಯಾಕ್‌ ಟು ಬ್ಯಾಕ್‌ ಸೂಪರ್‌ ಹಿಟ್‌ ಸಿನಿಮಾಗಳನ್ನೇ ನೀಡುತ್ತಿರುವ ಸ್ಯಾಂಡಲ್ವುಡ್‌ ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡುತ್ತಿದೆ. ಕೆಜಿಎಫ್‌, ಚಾರ್ಲಿ, ಕಾಂತಾರಾ, ಮ್ಯಾಕ್ಸ್‌ ಹೀಗೆ ಹಲವಾರು ಸಿನಿಮಾಗಳು ಕನ್ನಡದಲ್ಲಿ ಸಿಕ್ಕಾಪಟ್ಟೆ ಹಿಟ್‌ ಆಗಿದ್ದಲ್ಲದೆ, ದೇಶಾದ್ಯಂತ ಭಾರೀ ಮೆಚ್ಚುಗೆ ಪಡೆದಿತ್ತು.

2 /8

ಇನ್ನು ಕನ್ನಡ ಸಿನಿರಂಗ ಬೆಳೆದಂತೆ ನಟರೂ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸುತ್ತಿದ್ದಾರೆ. ಹೀಗಿರುವಾಗ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್‌ ನಟರು ಯಾರೆಂಬುದನ್ನು ಮುಂದೆ ನೋಡೋಣ.

3 /8

ಯಶ್:‌ ರಾಕಿಂಗ್‌ ಸ್ಟಾರ್‌ ಯಶ್‌ ಇಂದು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಕೆಜಿಎಫ್‌ ಬಳಿಕ ಸಿಕ್ಕಾಪಟ್ಟೆ ಫ್ಯಾನ್‌ ಬೇಸ್‌ ಪಡೆದುಕೊಂಡ ಯಶ್‌ ಇದೀಗ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗಾಗಿ ಅವರು 200 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಮೂಲಕ ಯಶ್‌ ರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಅಂದಹಾಗೆ ಯಶ್‌ ಅವರು ಸುದೀಪ್‌ ರೀತಿಯೇ ಖದರ್‌ ತೋರಿಸುವ ಗತ್ತಿನಿಂದ ನಡೆದುಕೊಳ್ಳು ನಟ. ಹೀಗಿರುವಾಗ ಮುಂದಿನ ಸೀಸನ್‌ ನಂತರ ಇವರು ಬಿಗ್‌ ಬಾಸ್‌ ಹೋಸ್ಟ್‌ ಮಾಡಬಹುದು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.

4 /8

ದರ್ಶನ್ ತೂಗುದೀಪ: ನಟ, ನಿರ್ಮಾಪಕ ಮತ್ತು ವಿತರಕರಾಗಿ ಸ್ಯಾಂಡಲ್‌ವುಡ್‌ಗೆ ಅಪೂರ್ವ ಕೊಡುಗೆ ನೀಡಿರುವ ದರ್ಶನ್ ತೂಗುದೀಪ ಅವರು ಕೂಡ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. ಇವರು ತಮ್ಮ ಮುಂಬರುವ ಸಿನಿಮಾ 'ಡೆವಿಲ್'ಗಾಗಿ 22 ಕೋಟಿ ರೂಪಾಯಿ ಸಂಭಾವನೆ ಫಿಕ್ಸ್ ಮಾಡಿದ್ದಾರಂತೆ. ಅಷ್ಟೇ ಅಲ್ಲದೆ, ಈಗಾಗಲೇ ಅಡ್ವಾನ್ಸ್ ರೂಪದಲ್ಲಿ ದರ್ಶನ್ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

5 /8

ಕಿಚ್ಚ ಸುದೀಪ್: ನಟ, ನಿರ್ದೇಶಕ, ನಿರ್ಮಾಪಕ, ಗಾಯಕ ಮತ್ತು ನಿರೂಪಕನಾಗಿ ಕನ್ನಡ ಸಿನಿಮಾರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಕಲಕಲಾವಲ್ಲಭ ಕಿಚ್ಚ ಸುದೀಪ್‌ ಅವರು ಸಿನಿಮಾವೊಂದಕ್ಕೆ 10 ರಿಂದ 25 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

6 /8

ಶಿವರಾಜ್ ಕುಮಾರ್: ನಟ, ಚಲನಚಿತ್ರ ನಿರ್ಮಾಪಕ ಮತ್ತು ದೂರದರ್ಶನ ನಿರೂಪಕರಾಗಿ ಅಪಾರ ಕೊಡುಗೆ ನೀಡಿರುವ ಡಾ.ಶಿವರಾಜ್‌ ಕುಮಾರ್‌ ಅವರು ಪ್ರತಿ ಚಿತ್ರಕ್ಕೆ 4.5 ಕೋಟಿಯಿಂದ 6ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

7 /8

ಉಪೇಂದ್ರ: ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ಚಿತ್ರಕಥೆಗಾರ ಉಪೇಂದ್ರ ಅವರು, ತಮ್ಮ ವಿಭಿನ್ನ ರೀತಿಯ ಬರಹ ಮತ್ತು ನಿರ್ದೇಶನದಿಂದಲೇ ಖ್ಯಾತಿ ಪಡೆದವರು. ಇವರು ಪ್ರತಿ ಸಿನಿಮಾಗೆ 10-15 ಕೋಟಿ ರೂ. ಪಡೆಯುತ್ತಾರೆ ಎನ್ನಲಾಗಿದೆ.

8 /8

ರಿಷಭ್ ಶೆಟ್ಟಿ: ಸದ್ಯ ಬಿಗ್‌ ಬಾಸ್‌ನ ಮುಂದಿನ ಹೋಸ್ಟ್‌ ಇವರೇ ಎಂದು ಹೇಳಲಾಗುತ್ತಿರುವ ನಟ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ದೊಡ್ಡ ಹಿಟ್‌ ಪಡೆದಿದ್ದಾರೆ. ನಿರ್ದೇಶಕ ಮತ್ತು ನಟನಾಗಿ ಸ್ಯಾಂಡಲ್ವುಡ್‌ನಲ್ಲಿ ಕೆಲಸ ಮಾಡುತ್ತಿರುವ ರಿಷಬ್‌ ಹಲವಾರು ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಅದರಲ್ಲಿ ಮುಖ್ಯವಾಗಿ ಮೂರು ರಾಷ್ಟ್ರಪ್ರಶಸ್ತಿಗಳನ್ನು ರಿಷಬ್‌ ಪಡೆದಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕಾಂತಾರ ಚಿತ್ರಕ್ಕೆ ರಿಷಬ್‌ ತೆಗೆದುಕೊಂಡಿದ್ದು ಕೇವಲ 5.5 ಕೋಟಿ ಸಂಭಾವನೆ ಎಂದು ಹೇಳಲಾಗುತ್ತಿದೆ.