"ನನಗೆ ಇವನೇ ಎಲ್ಲಾ.. ನನ್ನ ಪ್ರಪಂಚ ಇವನೇ" ಎನ್ನುತ್ತಾ ಜೀವದ ಗೆಳೆಯನ ಪರಿಚಯಿಸಿದ ಆಂಕರ್‌ ಅನುಪಮಾ ಗೌಡ!

Anupama Gowda: ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಯಶಸ್ಸು ಕಂಡಿರುವ ಮುದ್ದು ಮುಖದ ಚೆಲುವೆ ಅನುಪಮಾ ಗೌಡ ಇದೀಗ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಮನರಂಜಿಸೋಕೆ ಬರ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಯಶಸ್ಸು ಕಂಡಿರುವ ಮುದ್ದು ಮುಖದ ಚೆಲುವೆ ಅನುಪಮಾ ಗೌಡ ಇದೀಗ ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ರಿಯಾಲಿಟಿ ಶೋ ಮೂಲಕ ನಿರೂಪಕಿಯಾಗಿ ಮನರಂಜಿಸೋಕೆ ಬರ್ತಿದ್ದಾರೆ.

2 /7

ಅನುಶ್ರೀ ನಂತರ ಸದ್ಯ ಕರ್ನಾಟಕದಲ್ಲಿ ಜನಪ್ರಿಯತೆ ಪಡೆದಿರುವ ಆಂಕರ್‌ ಅಂದ್ರೆ ಅದು ಅನುಪಮಾ ಗೌಡ. ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್‌ ಆಗಿರುವ ಈ ಸುಂದರಿ ಆಗಾಗ್ಗೆ ತನ್ನ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಮೇಕಪ್‌ ಪ್ರಾಡಕ್ಟ್‌ಗಳ ಬಗ್ಗೆ ಮಾಹಿತಿ ನೀಡುವುದಾಗಲಿ,  ತನ್ನ ದಿನನಿತ್ಯದ ಕೆಲಸಗಳ ಬಗ್ಗೆಯಾಗಲಿ, ರೆಡಿಯಾಗುವ ವಿಡಿಯೋ ಜೊತೆಗೆ ತಾನು ದೇಶ-ವಿದೇಶ ಸುತ್ತಾಡುವು ವಿಡಿಯೋಗಳನ್ನು ಸಹ ಶೇರ್‌ ಮಾಡುತ್ತಿರುತ್ತಾರೆ.  

3 /7

ಇದೀಗ ಅನುಪಮಾ ಅವರ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅದರಲ್ಲಿ ಅವರು ತಮ್ಮ ಜೀವದ ಗೆಳೆಯ ಯಾರೆಂಬುದನ್ನು ಬಾಯ್ಬಿಟ್ಟು ಹೇಳಿದ್ದಾರೆ. ಅಷ್ಟೇ ಅಲ್ಲ ಅವರನ್ನು ಮುದ್ದಾಡಿದ್ದಾರೆ.  

4 /7

ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಪಮಾ ಅವರು ನಟಿಯೂ ಹೌದು. ಲಂಕೇಶ್‌ ಪತ್ರಿಕೆ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಈ ಮುದ್ದು ಹುಡುಗಿ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.  

5 /7

ಅಕ್ಕ ಸೀರಿಯಲ್​ ಮೂಲಕ ಡಬಲ್‌ ರೋಲ್‌ ಮಾಡಿದ್ದ ಅನುಪಮಾ ಸಖತ್‌ ಫೇಮಸ್‌ ಆಗಿದ್ದರು. ಇನ್ನು ಬಿಗ್‌ ಬಾಸ್‌ ಸೀಸನ್‌ 5ರಲ್ಲಿ ಭಾಗವಹಿಸಿದ ನಂತರ ಅನುಪಮಾ ಅದೃಷ್ಟವೇ ಬದಲಾಯಿತು ಎನ್ನಬಹುದು.  

6 /7

ಈ ಹಿಂದೆ ಅಂದರೆ 2024ದ ಫ್ರೆಂಡ್‌ಶಿಪ್‌ ಡೇ ದಿನ ಅನುಪಮಾ ಅವರು ತಮ್ಮ ಆಪ್ತ ಸ್ನೇಹಿತನ್ನು ಪರಿಚಯ ಮಾಡಿದ್ದರು. ‘ಗಿಚ್ಚಿ ಗಿಲಿಗಿಲಿ ಸೀಸನ್‌ 3ರ ವೇದಿಕೆ ಮೇಲೆ "ಇವನೇ ನನ್ನ ಪ್ರಪಂಚ. ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬರ್ತಾರೆ ಎಂಬ ಮಾತಿದೆ. ನನ್ನ ಜೀವನದಲ್ಲಿ ಇವನು ಬಂದಿದ್ದಾನೆ. ನಾನು ಈತನಿಗೆ ತಾಯಿ ಆಗಿದೀನಿ. ನನಗೆ ಈತನೇ ಎಲ್ಲವೂ" ಎಂದು ತಮ್ಮ ಮುದ್ದಿನ ನಾಯಿ ಮರಿಯನ್ನು ಪರಿಚಯಿಸಿದ್ದಾರೆ.  

7 /7

ಫೋಟೋ ಕೃಪೆ: Anupama Anandkumar ಇನ್‌ಸ್ಟಾಗ್ರಾಂ