ತಿರುವನಂತಪುರಂ: ಶಬರಿಮಲೈದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ತಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರನ್ನು ಪ್ರವೇಶಿಸಲು ಮತ್ತು ಆರಾಧಿಸಲು ಅರ್ಹ ಎಂದು ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಕೇರಳ ಸರ್ಕಾರ ಪ್ರಶ್ನಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಬದಲಾಗಿ ಮಹಿಳಾ ಭಕ್ತರು ದೇವಾಲಯಕ್ಕೆ ಪ್ರವೇಶಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರಕಾರ ಭರವಸೆ ನೀಡಿದೆ.
ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿರುವ ಕೇರಳ ಮುಖ್ಯಮಂತ್ರಿ ಪಿನಾರೈ ವಿಜಯನ್ ಅವರು 'ಶಬರಿಮಲೆ ತೀರ್ಪಿನ ಕುರಿತು ಕೇರಳ ಸರಕಾರವು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದಿಲ್ಲ. ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮಹಿಳಾ ಭಕ್ತರಿಗೆ ನಾವು ಸೌಲಭ್ಯಗಳನ್ನು ಮತ್ತು ರಕ್ಷಣೆಯನ್ನು ನೀಡುತ್ತೇವೆ ಎಂದು ತಿಳಿಸಿದರು.
Kerala government will not file review petition on Sabarimala verdict. Will ensure facilities and protection to women devotees visiting Sabarimala: Kerala CM Pinarayi Vijayan (file pic) pic.twitter.com/lEn0ZcuGYD
— ANI (@ANI) October 3, 2018
ದೇವಾಲಯದ ಆವರಣದಲ್ಲಿ ಮತ್ತು ಸುತ್ತಮುತ್ತಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಮತ್ತು ನೆರೆಯ ರಾಜ್ಯಗಳ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಶಬರಿಮಲೈಗೆ ಹೋಗಲು ಬಯಸುವ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ತಡೆಯೊಡ್ಡಲು ಸಾಧ್ಯವಿಲ್ಲ 'ಎಂದು ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದರು.
ಅಕ್ಟೋಬರ್ 28 ರಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನಪೀಠವು ಮಹಿಳೆಯರಿಗೆ ಇರುವ ನಿಷೇದವನ್ನು ಹಿಂತೆಗೆದುಕೊಂಡಿತು ಈ ನಿರ್ಧಾರವನ್ನು ಬಹುತೇಕ ಮಹಿಳಾ ಸಂಘಟನೆಗಳು ಸ್ವಾಗತಿಸಿದ್ದವು.