ನವದೆಹಲಿ: ಆಧಾರ್ ಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಸುಪ್ರೀಂಕೋರ್ಟ್ ತನ್ನ ಮಹತ್ವದ ತೀರ್ಪು ಪ್ರಕಟಿಸಿದ್ದು 'ಆಧಾರ್'ಗೆ ಸಾಂವಿಧಾನಿಕ ಮಾನ್ಯತೆ ನೀಡಿದೆ.
ವ್ಯಕ್ತಿಯೊಬ್ಬನಿಗೆ ನೀಡಲಾದ ಆಧಾರ್ ಸಂಖ್ಯೆ ವಿಶಿಷ್ಟವಾಗಿರುತ್ತದೆ. ಇದನ್ನು ಮತ್ತೊಬ್ಬರಿಗೆ ನೀಡಲು ಸಾಧ್ಯವಿಲ್ಲ. ಆಧಾರ್ ಅಂಕಿ ಅಂಶಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ಆಧಾರ್ ಗೆ ಕನಿಷ್ಠ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಜಾತಿ, ಧರ್ಮ ಅಥವಾ ವೈದ್ಯಕೀಯ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಆಧಾರ್ ಮಾಹಿತಿ ಮೇಲೆ ಕೇಂದ್ರ ಸರ್ಕಾರದ ಕಣ್ಗಾವಲು ಇಲ್ಲ. ಆಧಾರ್ ಪ್ರಾಧಿಕಾರದಿಂದಲೂ ಮಾಹಿತಿ ಗೌಪ್ಯತೆಯ ಭರವಸೆ ಸಿಕ್ಕಿದೆ. ಮಾಹಿತಿ ರಕ್ಷಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆಧಾರ್ ಕಾನೂನಿಗೆ ಕೆಲವೊಂದು ತಿದ್ದುಪಡಿಗಳಾಗಬೇಕು ಎಂದು ತೀರ್ಪು ಓದುತ್ತಿರುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ತಿಳಿಸಿದರು.
ವಿವಿಧ ಸಮಾಜ ಕಲ್ಯಾಣ ಯೋಜನೆಗಳು, ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಫೋನ್ ಗೆ ಆಧಾರ್ ಸಂಖ್ಯೆ ಜೋಡಿಸುವುದು ಅಗತ್ಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆಧಾರ್ ಸಿಂಧುತ್ವ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ ಸೇರಿದಂತೆ 24 ಮಂದಿ ಅರ್ಜಿ ಸಲ್ಲಿಸಿದ್ದರು. ಆಧಾರ್ ಕಾರ್ಡ್ ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಅಂತಿಮ ವಿಚಾರಣೆಯನ್ನು ಜನವರಿ 17ರಂದು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆಯ ಬಳಿಕ ಇಂದು ತನ್ನ ತೀರ್ಪು ಪ್ರಕಟಿಸಿದೆ.
ಸಿಜೆಐ ದೀಪಕ್ ಮಿಶ್ರಾ, ನ್ಯಾ. ಎ.ಕೆ. ಸಿಕ್ರಿ, ನ್ಯಾ. ಎ.ಎಂ. ಖನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಅಶೋಕ್ ಭೂಷಣ್ ಇರುವ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಿಂದ ತೀರ್ಪು ಪ್ರಕಟವಾಗಿದೆ.
4 ತಿಂಗಳಲ್ಲಿ 38 ದಿನಗಳ ವಿಚಾರಣೆ:
ಆಧಾರ್ನ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯದಲ್ಲಿ ಗೌಪ್ಯತೆಗೆ ಮೂಲಭೂತ ಹಕ್ಕನ್ನು ಹೊಂದುವ ವಿಷಯವು ಉದ್ಭವವಾಯಿತು, ಅದರ ನಂತರ ನ್ಯಾಯಾಲಯವು ಅಪೆಕ್ಸ್ನ ವಿಚಾರಣೆಯನ್ನು ನಿಲ್ಲಿಸಿತು ಮತ್ತು ಸಂವಿಧಾನದ ಬೆಂಚ್ ಗೌಪ್ಯತೆ ಮೂಲಭೂತ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿತು. ಇದರ ನಂತರ, ಐದು ನ್ಯಾಯಾಧೀಶರು ಆಧಾರ್ ನ ಕಾನೂನುಬದ್ಧತೆಯನ್ನು ಕೇಳಲು ಆರಂಭಿಸಿದರು. 38 ದಿನಗಳ ಆಧಾರ್ ಮೇಲೆ ಒಟ್ಟು ನಾಲ್ಕು ತಿಂಗಳುಗಳ ಕಾಲ 38 ದಿನಗಳ ವಿಚಾರಣೆ ನಡೆದಿದೆ.