ಹೊಲಾಂಡ್ ಪ್ರಧಾನಿ ಮೋದಿಯನ್ನು'ಕಳ್ಳ'ನೆಂದಿದ್ದಾರೆ, ಆದರೆ ಮೋದಿಯಿಂದ ಒಂದಕ್ಷರವೂ ಹೊರಬಂದಿಲ್ಲ-ರಾಹುಲ್ ಗಾಂಧಿ

ಪ್ರಧಾನಿ ಮೋದಿ ವಿರುದ್ದ ಕಟು ಟೀಕೆ ಮುಂದುವರೆಸಿರುವ ರಾಹುಲ್ ಗಾಂಧಿ "ಫ್ರೆಂಚ್ ಮಾಜಿ ಅಧ್ಯಕ್ಷ  ಭಾರತದ ಪ್ರಧಾನಿಯನ್ನು ಕಳ್ಳನೆಂದು ಕರೆದಿದ್ದಾರೆ.ಆದರೆ ಪ್ರಧಾನಿ  ಇನ್ನು ಮೌನವಾಗಿದ್ದಾರೆ ಇದುವರೆಗೂ ಕೂಡ  ಒಂದೇ ಒಂದು ಅಕ್ಷರವು ಸಹಿತ ಪ್ರಧಾನಿಯಿಂದ  ಹೊರಬಂದಿಲ್ಲ  ಎಂದು  ಪತ್ರಿಕಾಗೋಷ್ಠಿಯಲ್ಲಿ ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.

Last Updated : Sep 22, 2018, 05:03 PM IST
ಹೊಲಾಂಡ್ ಪ್ರಧಾನಿ ಮೋದಿಯನ್ನು'ಕಳ್ಳ'ನೆಂದಿದ್ದಾರೆ, ಆದರೆ ಮೋದಿಯಿಂದ ಒಂದಕ್ಷರವೂ ಹೊರಬಂದಿಲ್ಲ-ರಾಹುಲ್ ಗಾಂಧಿ   title=
Photo:ANI

ನವದೆಹಲಿ: ಪ್ರಧಾನಿ ಮೋದಿ ವಿರುದ್ದ ಕಟು ಟೀಕೆ ಮುಂದುವರೆಸಿರುವ ರಾಹುಲ್ ಗಾಂಧಿ "ಫ್ರೆಂಚ್ ಮಾಜಿ ಅಧ್ಯಕ್ಷ  ಭಾರತದ ಪ್ರಧಾನಿಯನ್ನು ಕಳ್ಳನೆಂದು ಕರೆದಿದ್ದಾರೆ.ಆದರೆ ಪ್ರಧಾನಿ  ಇನ್ನು ಮೌನವಾಗಿದ್ದಾರೆ ಇದುವರೆಗೂ ಕೂಡ  ಒಂದೇ ಒಂದು ಅಕ್ಷರವು ಸಹಿತ ಪ್ರಧಾನಿಯಿಂದ  ಹೊರಬಂದಿಲ್ಲ  ಎಂದು  ಪತ್ರಿಕಾಗೋಷ್ಠಿಯಲ್ಲಿ ಮೋದಿ ವಿರುದ್ದ ಟೀಕಾ ಪ್ರಹಾರ ನಡೆಸಿದರು.

ಇನ್ನು ಮುಂದುವರೆದು "ಈಗ  ಪ್ರಧಾನಿ ಹೊಲಾಂಡ್ ಅವರ ಹೇಳಿಕೆಯನ್ನು ಸ್ವೀಕರಿಸಬೇಕು ಅಥವಾ ಹೊಲಾಂಡ್ ಸುಳ್ಳು ಹೇಳುತ್ತಿದ್ದರೆ ಯಾವುದು ಸತ್ಯವೆಂದು ತಿಳಿಸಬೇಕು ಎಂದು ರಾಹುಲ್ ತಿಳಿಸಿದ್ದಾರೆ.ಸ್ವತಃ ಪ್ರಧಾನಿ ಮೋದಿಯವರು  ಅನಿಲ್ ಅಂಬಾನಿಯವರಿಗೆ 30 ಸಾವಿರ ಕೋಟಿ ರೂಪಾಯಿಗಳ ಕಾಂಟ್ರಾಕ್ಟ್ ನ್ನು ನೀಡಿದ್ದಾರೆ ಅಲ್ಲದೆ 45 ಸಾವಿರ ಕೋಟಿ ಸಾಲವಿರುವ ಅಂಬಾನಿಯನ್ನು ಮುಕ್ತವಾಗಿ ಬಿಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಈ ಸರ್ಕಾರದ ಹಲವು ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ  ಏಕೆಂದರೆ ಅವರು ಮೋದಿಯವರನ್ನು ರಕ್ಷಿಸಬೇಕಾಗಿದೆ ಎಂದು ತಿಳಿಸಿದರು.ಜಂಟಿ ಸಂಸಧೀಯ ಕಮಿಟಿ ಮೂಲಕ ಈ ಒಪ್ಪಂದವನ್ನು ತನಿಖೆಗೆ ಒಳಪಡಿಸಬೇಕು ಮತ್ತು ತನಿಖೆವೇಳೆ ಹೊಲಾಂಡ್ ಅವರನ್ನು ಸಹ ಕರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

  

Trending News