ಚಿತ್ರದುರ್ಗದಲ್ಲಿ ಮಳೆಯ ಆರ್ಭಟ ನಿಂತಿಲ್ಲ. ಎಲ್ಲೆಡೆ ಕೆರೆ ಕಟ್ಟೆಗಳು ಭರ್ತಿಯಾಗಿವೆ. ರಸ್ತೆಗಳೆನ್ನದೇ ಎಲ್ಲಾ ಕೆರೆಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಖಾನೆಹಳ್ಳದಲ್ಲಿ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆ ಹೊರಟಿದ್ದ ಕೊರ್ಲಕುಂಟೆ ಗ್ರಾಮದ ಇಬ್ಬರು ಯುವಕರು ನೀರಿನ ರಭಸಕ್ಕೆ ಕೊಚ್ಚಿಹೋಗಿ ಶವವಾಗಿ ಪತ್ತೆಯಾಗಿದ್ದಾರೆ.