UPI Payment: ಈ ತಂತ್ರಜ್ಞಾನ ಯುಗದಲ್ಲಿ ಯುಪಿಐ ಪಾವತಿಯು ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಯುಪಿಐ ಪಾವತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ನಗದು ವಹಿವಾಟು ಕಡಿಮೆಯಾಗಿದೆ. ಇದೀಗ ಫೆಬ್ರವರಿ 01, 2025ರಿಂದ ಯುಪಿಐ ಐಡಿಯಲ್ಲಿ ಹೊಸ ಮಾನದಂಡವನ್ನು ಪರಿಚಯಿಸಲಾಗಿದೆ. ಇದನ್ನು ನಿರ್ಲಕ್ಷಿಸಿದರೆ ಯುಪಿಐ ಪಾವತಿ ಕಷ್ಟವಾಗಬಹುದು.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ವಹಿವಾಟುಗಳ ಭದ್ರತೆಯನ್ನು ಹೆಚ್ಚಿಸಲು ಫೆಬ್ರವರಿ 01, 2025ರಿಂದ ಹೊಸ ಮಾನದಂಡವನ್ನು ಜಾರಿಗೆ ತಂದಿದೆ. ಎನ್‌ಪಿಸಿಐ ತಾಂತ್ರಿಕ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳುತ್ತಿದ್ದು, ಇದರಿಂದ ಒಟ್ಟಾರೆ ಡಿಜಿಟಲ್ ಪಾವತಿ ವೇದಿಕೆಯ ಭದ್ರತೆ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ- Motorola Razr 50 Ultra: Motorola ದಿಂದ foldable ಫೋನ್! ಅತ್ಯಂತ ಕಡಿಮೆ ಬೆಲೆಗೆ ಲಭ್ಯ
ಏನದು ಯುಪಿಐ ಹೊಸ ನಿಯಮ:
ವಾಸ್ತವವಾಗಿ, ಜನವರಿ 09, 2025ರಂದು ಎನ್‌ಪಿಸಿಐ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಇದರ ಪ್ರಕಾರ ಎಲ್ಲಾ ಯುಪಿಐ ಐಡಿಗಳು ಸಂಖ್ಯೆಗಳು ಮತ್ತು ಅಕ್ಷರಗಳನ್ನು ಮಾತ್ರ ಹೊಂದಿರಬೇಕು.
ಇದನ್ನೂ ಓದಿ- ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿ ಈ 5 ಕೆಲಸ ಮಾಡಿದ್ರೂ Jail ಸೇರಬೇಕಾಗುತ್ತೆ..! ಹುಷಾರ್
ಫೆಬ್ರವರಿ 01ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ, ಯುಪಿಐ ಐದಿಯಲ್ಲಿ ಸಂಖ್ಯೆಗಳು, ಅಕ್ಷರಗಳನ್ನು ಹೊರತುಪಡಿಸಿ ವಿಶೇಷ ಚಿಹ್ನೆಗಳಾದ @, ! ಅಥವಾ # ಗಳನ್ನು ಹೊಂದಿರುವ ಯುಪಿಐ ಐಡಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗಾಗಿ ಯುಪಿಐ ಪಾವತಿಯಲ್ಲಿ ಯಾವುದೇ ರೀತಿಯ ತೊಡಕುಗಳನ್ನು ತಪ್ಪಿಸಲು, ಸುಗಮ ಡಿಜಿಟಲ್ ಪಾವತಿ ಮುಂದುವರೆಸಲು ಕೂಡಲೇ ನಿಮ್ಮ ಯುಪಿಐ ಪಾವತಿ ಸೆಟ್ಟಿಂಗ್‌ಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.