ಕೆನಡಾ: 331 ಜನರ ಸಾವಿಗೆ ಕಾರಣವಾಗಿದ್ದ 1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ರಿಪುದಮನ್ ಸಿಂಗ್ ಮಲಿಕ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ರಿಪುದಮನ್ ಸಿಂಗ್ ಹತ್ಯೆ ಮಾಡಲಾಗಿದೆ ಎಂದು ಕೆನಡಾದ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡಿವೆ.
ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನ್ ಚಳವಳಿಯ ಒಂದು ಕಾಲದ ಬೆಂಬಲಿಗ ರಿಪುದಮನ್ ಸಿಂಗ್, 2005ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಂಡಿದ್ದ. ಗುರುವಾರ ಸ್ಥಳೀಯ ಕಾಲಮಾನ ಬೆಳಗ್ಗೆ 9.30ರ ವೇಳೆ ರಿಪುದಮನ್ ಕುತ್ತಿಗೆಯ ಭಾಗಕ್ಕೆ 3 ಗುಂಡುಗಳನ್ನು ಹಾರಿಸಲಾಗಿದೆ. ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್ ಪ್ರದೇಶದಲ್ಲಿ ಬಟ್ಟೆ ವ್ಯಾಪಾರದಲ್ಲಿ ತೊಡಗಿದ್ದ ವೇಳೆ ಗುಂಡು ಹಾರಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆರ್ಡರ್ ಕ್ಯಾನ್ಸಲ್ ಮಾಡಿದಕ್ಕೆ ಕೋಪ: ಮೆಕ್ ಡೊನಾಲ್ಡ್ಸ್ಗೆ ನುಗ್ಗಿ ತಾನೇ ಕುಕ್ ಮಾಡಿದ ಯುವತಿ
ಗುಂಡಿನ ದಾಳಿ ನಡೆಸಿದ ವ್ಯಕ್ತಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಇದು ಉದ್ದೇಶಿತ ಗುಂಡಿ ದಾಳಿಯಾಗಿದೆ ಎಂದು ಶಂಕಿಸಲಾಗಿದೆ. ವಾಹನದಲ್ಲಿ ಬಂದ ಶೂಟರ್ಗಳು ಕೆಲವು ಕಿ.ಮೀ ದೂರದಿಂದ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಆರೋಪಿಗಳಿಗಾಗಿ ಹುಟುಕಾಟ ನಡೆಸಲಾಗುತ್ತಿದೆ ಎಂದು ಕಾನ್ಸ್ಟೆಬಲ್ ಸರ್ಬ್ಜಿತ್ ಸಂಘ ಹೇಳಿದ್ದಾರೆ.
1985ರಲ್ಲಿ ಏರ್ ಇಂಡಿಯಾದ ಫ್ಲೈಟ್ 182 ಕನಿಷ್ಕಾ ಬಾಂಬ್ ಸ್ಫೋಟದಲ್ಲಿ 331 ಜನರನ್ನು ಕೊಂದ ಶಂಕಿತರ ಪೈಕಿ ರಿಪುದಮನ್ ಸಿಂಗ್ ಸಹ ಒಬ್ಬರು. 1985ರ ಜೂನ್ 23ರಂದು ಮಾಂಟ್ರಿಯಲ್ನಿಂದ ದೆಹಲಿಗೆ ಹೊರಟಿದ್ದ ಬೋಯಿಂಗ್ 747 ಕನಿಷ್ಕ ಏರ್ ಇಂಡಿಯಾ ವಿಮಾನ 182ರ ಸ್ಫೋಟ ಪ್ರಕರಣದಲ್ಲಿ ರಿಪುದಮನ್ ಸಿಂಗ್, ಇಂದರ್ಜೀತ್ ಸಿಂಗ್ ರಿಯಾತ್ ಮತ್ತು ಅಜೈಬ್ ಸಿಂಗ್ ಬಗ್ರಿ ಮೂವರು ಪ್ರಮುಖ ಆರೋಪಿಗಳಾಗಿದ್ದರು.
ಇದನ್ನೂ ಓದಿ: ವಿಶ್ವದ ಅತ್ಯಂತ ಭಯಾನಕ ಜೈಲು: ದಯಾಮರಣಕ್ಕೆ ಬೇಡಿಕೆ ಇಡ್ತಾನೆ ಇಲ್ಲಿನ ಸೆರೆವಾಸಿ!
ರಿಪುದಮನ್ ಸಿಂಗ್ ಮತ್ತು ಅಜೈಬ್ ಸಿಂಗ್ ವಿರುದ್ಧ ಕೊಲೆಯ ಆರೋಪ ಹೊರಿಸಲಾಗಿತ್ತು. ಆದರೆ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಮಾಡಿದ ರಿಯಾತ್ ಘಟನೆಯ ವಿವರ ಮತ್ತು ಪ್ರಕರಣದಲ್ಲಿ ಭಾಗಿಯಾದವರ ಹೆಸರುಗಳು ನೆನಪಿಲ್ಲವೆಂದು ಹೇಳಿದ ನಂತರ ಅವರನ್ನು ಖುಲಾಸೆಗೊಳಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.