ಮತ್ತೊಮ್ಮೆ ಸಂಕಷ್ಟದಲ್ಲಿ ಜನಾರ್ಧನ ರೆಡ್ಡಿ

                     

Last Updated : Nov 8, 2017, 01:47 PM IST
ಮತ್ತೊಮ್ಮೆ ಸಂಕಷ್ಟದಲ್ಲಿ ಜನಾರ್ಧನ ರೆಡ್ಡಿ title=

ಬಳ್ಳಾರಿ: ಗಣಿ-ಧಣಿ ಜನಾರ್ಧನ ರೆಡ್ಡಿ ಮಗಳು ಬ್ರಹ್ಮಿಣಿ ಮದುವೆ ಮುಗಿದು ಒಂದು ವರ್ಷವಾದರೂ, ಮದುವೆಗೆ ಖರ್ಚು ಮಾಡಿರುವ ನೂರಾರು ಕೋಟಿ ಹಣದ ವಿವಾದ ಮಾತ್ರ ಇನ್ನೂ ಮುಗಿದಿಲ್ಲ. ಇದೀಗ ರೆಡ್ಡಿ ತಮ್ಮ ಮಗಳ ವಿವಾಹಕ್ಕೆ ಖರ್ಚು ಮಾಡಿರುವ ಹಣದ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಜಾಗೃತ ಆಯೋಗದ (ಸಿವಿಸಿ) ಸೆಕ್ಷನ್ ಆಫೀಸರ್, ಸಿಬಿಐನ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.ಹೀಗಾಗಿ ರೆಡ್ಡಿ ಮತ್ತೊಮ್ಮೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ನವೆಂಬರ್ 17, 2016ರಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ದ್ವಿತೀಯ ಪುತ್ರಿ ಬ್ರಹ್ಮಿಣಿಯ ಮದುವೆ ಮಾಡಿದರು. ಅದ್ದೂರಿ ವಿವಾಹಕ್ಕಾಗಿ ನೂರಾರು ಕೋಟಿ ಹಣ ವೆಚ್ಚ ಮಾಡಿದ್ದರು. ಅಲ್ಲದೆ ವಿವಾಹದ ಖರ್ಚಿಗೆ ಓಬಳಾಪುರಂ ಮೈನಿಂಗ್ ಕಂಪನಿಯ ಅಂಗಸಂಸ್ಥೆಯಾದ ಟ್ಯುಬೂಲರ್ ರೆವಿಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆದಾಯವೇ ಮೂಲವೆಂದು ತಿಳಿಸಿದ್ದರು. 

ಆದರೆ, ಸಿಬಿಐ ಅಧಿಕಾರಿಗಳ ಪ್ರಕಾರ ಓಬಳಾಪುರಂ ಮೈನಿಂಗ್ ಕಂಪನಿ ಅಸ್ತಿತ್ವದಲ್ಲಿಲ್ಲ. ಜನಾರ್ಧನ ರೆಡ್ಡಿ ತಮ್ಮ ಮಗಳ ಮದುವೆಗೆ ಬೇನಾಮಿ ಹಣ ಖರ್ಚು ಮಾಡಿ ಆದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಗಣಿ ಉದ್ಯಮಿ ಟಪಾಲ್ ಗಣೇಶ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಸಿವಿಸಿ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಜನಾರ್ಧನ ರೆಡ್ಡಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

Trending News