Shani Mangal Yuti Effect - ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ 2 ಗ್ರಹಗಳು ಸಂಯೋಜನೆ, ಎಲ್ಲಾ 12 ರಾಶಿಗಳ (Astrology) ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಈ ಸಂಯೋಜನೆ ಒಂದು ವೇಳೆ 2 ಶುಭ ಗ್ರಹಗಳ ನಡುವೆ ಇದ್ದರೆ, ಧನಾತ್ಮಕ ಪರಿಣಾಮವು ದ್ವಿಗುಣಗೊಳ್ಳುತ್ತದೆ. ಈ ಸಂಯೋಜನೆಯಲ್ಲಿ ಎರಡೂ ಅಥವಾ ಯಾವುದೇ ಒಂದು ಗ್ರಹವು ಪಾಪ ಅಥವಾ ಕ್ರೂರ ಗ್ರಹವಾಗಿದ್ದರೆ, ಪ್ರತಿಯೊಬ್ಬರೂ ಅದರ ನಕಾರಾತ್ಮಕ ಭಾರವನ್ನು ಹೊರಬೇಕಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಫೆಬ್ರವರಿ 26 ರಂದು ಮಕರ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಜನೆ ನೆರವೇರಿದೆ. ಶನಿ ಮತ್ತು ಮಂಗಳ ಗ್ರಹಗಳನ್ನು ಯಾವಾಗಲು ಕ್ರೂರ ಗ್ರಹಗಳ ವರ್ಗದಲ್ಲಿ ಇರಿಸಲಾಗುತ್ತದೆ. ಈ ಎರಡು ಗ್ರಹಗಳ ಸಂಯೋಜನೆ ಏಪ್ರಿಲ್ 7 ರವರೆಗೆ ಇರಲಿದೆ. ಇಂತಹ ಪರಿಸ್ಥಿತಿಯಲ್ಲಿ, ಶನಿ-ಮಂಗಳ ಸಂಯೋಜನೆ ಯಾವ ರಾಶಿಯ (Shani Mangal Yuti Effect On Zodiac) ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಕರ್ಕ ರಾಶಿ
ಶನಿ-ಮಂಗಳ ಸಂಯೋಜನೆ ಕರ್ಕ ರಾಶಿಯವರಿಗೆ ಜೀವನದಲ್ಲಿ ತೊಂದರೆ ಉಂಟುಮಾಡಲಿದೆ. ಏಪ್ರಿಲ್ 7 ರವರೆಗೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ವ್ಯಾಪಾರ ಪಾರ್ಟ್ನರ್ ಜೊತೆಗೆ ವೈಮನಸ್ಯ ಉಂಟಾಗಬಹುದು. ನೀವು ಪಾರ್ಟನರ್ಷಿಪ್ ನಲ್ಲಿ ಯಾವುದೇ ಉದ್ಯೋಗವನ್ನು ಪ್ರಾರಂಭಿಸಲು ಬಯಸಿದರೆ, ಅದನ್ನು ಸದ್ಯಕ್ಕೆ ಮುಂದೂಡಿ. ಇದಲ್ಲದೆ, ನೀವು ವೈಯಕ್ತಿಕ ಜೀವನದಲ್ಲಿ ತಾಳ್ಮೆಯಿಂದಿರಬೇಕು.
ಇದನ್ನೂ ಓದಿ-Hair loss: ಇದೇ ಕಾರಣಕ್ಕೆ ಪುರುಷರ ಕೂದಲು ಉದುರುತ್ತವೆ..!
ಧನು ರಾಶಿ
ಶನಿ-ಮಂಗಳ ಸಂಯೋಗವು ಧನು ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗುವುದಿಲ್ಲ. ಜಾತಕದ ಹಣದ ಮನೆಯಲ್ಲಿ ಶನಿ ಮತ್ತು ಮಂಗಳನ ಸಂಯೋಜನೆಯಿಂದಾಗಿ ಆರ್ಥಿಕ ನಷ್ಟವನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ನಿಮ್ಮ ಮಾತಿನ ಮೇಲೆ ನೀವು ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು. ಅನಗತ್ಯ ಸುಳ್ಳುಗಳನ್ನು ಹೇಳಲು ನೀವು ಪ್ರಾರಂಭಿಸಬಹುದು. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಇದಲ್ಲದೆ, ಯಾವುದೇ ಪ್ರಮುಖ ದಾಖಲೆಗಳಿಗೆ ಸಹಿ ಮಾಡುವುದನ್ನು ತಪ್ಪಿಸಿ. ಸಂಬಂಧಗಳು ಕಹಿಯಾಗಬಹುದು.
ಇದನ್ನೂ ಓದಿ-Health Tips: ಪುರುಷರ ಈ ಸಮಸ್ಯೆಗಳಿಗೆ ಅರಿಶಿನ ಮತ್ತು ಜೇನುತುಪ್ಪ ರಾಮಬಾಣ
ಕನ್ಯಾರಾಶಿ
ಈ ಎರಡು ಕ್ರೂರ ಗ್ರಹಗಳ ಸಂಯೋಜನೆಯು ಕನ್ಯಾ ರಾಶಿಯವರಿಗೆ ತೊಂದರೆ ನೀಡಲಿದೆ. ಈ ಅವಧಿಯಲ್ಲಿ, ನೀವು ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಅಡೆತಡೆಗಳು ಉಂಟಾಗಬಹುದು. ಇದಲ್ಲದೇ ಪ್ರೇಮ ಜೀವನದಲ್ಲಿ ಪರಸ್ಪರ ವೈಮನಸ್ಸು ಇರಲಿದೆ.
ಇದನ್ನೂ ಓದಿ-ಪೊರಕೆ ಜೊತೆ ಎಂದಿಗೂ ಈ ರೀತಿ ಮಾಡಬೇಡಿ, ಮನೆಯಿಂದ ನಿರ್ಗಮಿಸುತ್ತಾಳೆ ಲಕ್ಷ್ಮೀ
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.