ನವದೆಹಲಿ: ಮುಂಬೈಯ ವಾಂಖೇಡ ಕ್ರೀಡಾಂಗಣದಲ್ಲಿ ಇಂದು(ಮೇ. 27) ಚೆನ್ನೈ 7 ನೇ ಬಾರಿಗೆ ಫೈನಲ್ ನಲ್ಲಿ ಮುಖಾಮುಖಿಯಾಗಲು ಸಿದ್ದವಾಗಿದೆ. ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದೊಂದಿಗೆ ರೋಮಾಂಚಕ ಮೊದಲ ಅರ್ಹತಾ ಪಂದ್ಯದಲ್ಲಿ ಹೈದರಾಬಾದ್ ಅನ್ನು ಸೋಲಿಸಿದ ನಂತರ ಚೆನ್ನೈ ತಂಡ ಫೈನಲ್ ತಲುಪಿದರು. ಕೋಲ್ಕತ್ತಾವನ್ನು ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಸೋಲಿಸುವ ಮೂಲಕ ಹೈದರಾಬಾದ್ ಫೈನಲ್ನಲ್ಲಿ ಆಡಲು ಹಕ್ಕನ್ನು ಪಡೆದುಕೊಂಡರು. ಫೈನಲ್ಸ್ಗೆ ಮುನ್ನ, ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾಧ್ಯಮದೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಧೋನಿ ಪಂದ್ಯಾವಳಿಯ ಸಮಯದ ಕೆಲ ಭಾವನಾತ್ಮಕ ಅಂಶಗಳನ್ನು ಕುರಿತು ಮಾತನಾಡಿದರು.
ಎರಡು ವರ್ಷಗಳ ನಿಷೇಧದ ನಂತರ ಚೆನ್ನೈ ತಂಡವು ಐಪಿಎಲ್ ನಲ್ಲಿ ಹಿಂದಿರುಗಿತು. ಆದರೆ, ಕಾವೇರಿ ಜಲ ವಿವಾದದ ಕಾರಣ ತಂಡವು ಚೆನ್ನೈನಲ್ಲಿ ಆಡಲು ಸಾಧ್ಯವಾಗಲಿಲ್ಲ. ಹಾಗಾಗಿ ಮತ್ತೊಂದು ನೆಲೆಯನ್ನು ಆರಿಸಬೇಕಾಯಿತು. ಈ ಐಪಿಎಲ್ ಋತುವಿನಲ್ಲಿ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗನಾವು ಚೆನ್ನೈ ತಂಡದ ಎರಡನೇ ಮನೆಯಾಗಿದೆ.
ಅಂತಿಮ ಘರ್ಷಣೆಯ ಮೊದಲು, ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ಭಾವೋದ್ರಿಕ್ತವಾಗಿ ಕಾಣಿಸಿಕೊಂಡರು. "ಪಂದ್ಯಾವಳಿಯ ಪ್ರಾರಂಭವು ತುಂಬಾ ಭಾವನಾತ್ಮಕವಾಗಿದೆ, ಆದರೆ ನೀವು ಭಾವನಾತ್ಮಕಕ್ಕಿಂತ ವೃತ್ತಿಪರರಾಗಿರಬೇಕು. ಚೆನ್ನೈನಲ್ಲಿ ಪಂದ್ಯವನ್ನು ಆಡಲು ಅವಕಾಶ ಸಿಗದೆ ನಾವು ನಿರಾಶೆ ಹೊಂದಿದ್ದೇವೆ" ಎಂದು ಅವರು ಹೇಳಿದರು.
ಚೆನೈ ಹೋಮ್ ಮೈದಾನದಲ್ಲಿ ಕನಿಷ್ಠ ಕೆಲವು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿದ್ದರೂ ನಮಗೆ ಸಂತೋಷವಾಗುತ್ತಿತ್ತು. ಏಕೆಂದರೆ ನಮ್ಮ ಅಭಿಮಾನಿಗಳು ನಮ್ಮ ಪಂದ್ಯ ವೀಕ್ಷಣೆಗಾಗಿ ಕಾಯುತ್ತಿದ್ದರು ಎಂದು ಅವರು ಹೇಳಿದರು.
ಕಳೆದ ಎರಡು ವರ್ಷಗಳಿಂದ ನಾವು ಪಂದ್ಯಾವಳಿಯಲ್ಲಿ ಇರಲಿಲ್ಲ, ಆದರೆ ನಮ್ಮ ಅಭಿಮಾನಿ-ಬೆಂಬಲಿಗರು ನಿರಂತರವಾಗಿ ಬೆಳೆಯುತ್ತಿದ್ದಾರೆ. ನಾವು ಚೆನ್ನೈನಲ್ಲಿ ಆಡಲು ಸಾಧ್ಯವಾಗಲಿಲ್ಲ. ಅದು ದುರದೃಷ್ಟಕರವೆಂದು ಮಹೇಂದ್ರ ಸಿಂಗ್ ಧೋನಿ ಹೇಳಿದರು.
It was a bit emotional at the start, but once tournament starts you have to be professional than emotional. @ChennaiIPL fans have waited and wanted us to do well. @msdhoni #VIVOIPL #FInal #CSKvSRH pic.twitter.com/6MDZTcv5WP
— IndianPremierLeague (@IPL) May 26, 2018
ಭ್ರಷ್ಟಾಚಾರದ ಆರೋಪದಿಂದಾಗಿ ಎರಡು ವರ್ಷಗಳ ಕಾಲ ನಿಷೇಧಿಸಲ್ಪಟ್ಟ ಚೆನ್ನೈ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಚೆನ್ನೈ ಫೈನಲ್ನಲ್ಲಿ ಗೆದ್ದರೆ, ಮುಂಬೈ ನಂತರ ಮೂರು ಬಾರಿ ಪಂದ್ಯಾವಳಿಯನ್ನು ಗೆದ್ದ ತಂಡವೆನಿಸುತ್ತದೆ.