ಉತ್ತರದ ಕಡೆಗೆ ಶುಕ್ರ ಸಂಚಾರ: ಈ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಭರ್ಜರಿ ಲಾಭ, ಹಠಾತ್‌ ಧನಲಾಭ!!

Venus Transit 2025: ಶುಕ್ರ ಗ್ರಹವು ಉತ್ತರ ದಿಕ್ಕಿಗೆ ಚಲಿಸುವುದರಿಂದ ಉಂಟಾಗುವ ಜ್ಯೋತಿಷ್ಯ ಶಾಸ್ತ್ರದ ಮಹತ್ವವೇನು? ಅದು ಉದ್ಯೋಗ, ವ್ಯವಹಾರ ಮತ್ತು ಪ್ರೇಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.

Venus Transit Towards North 2025: ನವಗ್ರಹಗಳು ತಮ್ಮ ಸಂಚಾರದ ವೇಳೆ ರಾಶಿ ಹಾಗೂ ಕಕ್ಷೆಯನ್ನು ಬದಲಾಯಿಸುತ್ತವೆ. ಇದು 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಅಂದಹಾಗೆ ಜನವರಿ 17ರಂದು ಅಂದರೆ ನಾಳೆ ರಾತ್ರಿ 1.19ಕ್ಕೆ ಶುಕ್ರ ಗ್ರಹವು ಸೂರ್ಯನ ಸುತ್ತ ತನ್ನ ಕಕ್ಷೆಯನ್ನು ಬದಲಾಯಿಸುವುದು. ಶುಕ್ರವಾರ ಶುಕ್ರನು ಉತ್ತರದ ಕಡೆಗೆ ಚಲಿಸುತ್ತಾನೆ. ಅಂದರೆ ಅದು ಉತ್ತರದ ಕಡೆಗೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಶುಕ್ರನ ಉತ್ತರ ದಿಕ್ಕಿನ ಚಲನೆ ರಾಶಿಗಳ ಸಕಾರಾತ್ಮಕ ಶಕ್ತಿಯನ್ನ ಹೆಚ್ಚಿಸುತ್ತದೆ. ಇದು ಕೆಲ ರಾಶಿಯವರಿಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಮತ್ತು ಅದೃಷ್ಟವನ್ನು ಒದಗಿಸುವುದು. ಹಾಗಾದರೆ ಶುಕ್ರ ಗ್ರಹ ಉತ್ತರ ದಿಕ್ಕಿಗೆ ಚಲಿಸುವುದರಿಂದ ಉಂಟಾಗುವ ಜ್ಯೋತಿಷ್ಯ ಶಾಸ್ತ್ರದ ಮಹತ್ವವೇನು? ಅದು ಉದ್ಯೋಗ, ವ್ಯವಹಾರ ಮತ್ತು ಪ್ರೇಮ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.

2 /6

ಜ್ಯೋತಿಷ್ಯದಲ್ಲಿ ಶುಕ್ರನ ಉತ್ತರ ದಿಕ್ಕಿನ ಚಲನೆ ಒಂದು ಪ್ರಮುಖ ಘಟನೆಯಾಗಿದೆ. ಉತ್ತರ ದಿಕ್ಕು ಸಂಪತ್ತಿನ ದಿಕ್ಕು ಆಗಿದೆ. ಈ ದಿಕ್ಕಿನ ಅಧಿಪತಿ ಕುಬೇರ. ಶುಕ್ರ ಸ್ವಾಭಾವಿಕವಾಗಿ ಉತ್ತರ ದಿಕ್ಕಿನೊಂದಿಗೆ ಸಂಬಂಧ ಹೊಂದಿದೆ. ವೈದಿಕ ಜ್ಯೋತಿಷ್ಯದಲ್ಲಿ ಅತ್ಯಂತ ಶುಭ ಗ್ರಹಗಳಲ್ಲಿ ಒಂದಾದ ಶುಕ್ರ ಗ್ರಹ ಸಂಪತ್ತು, ಸಮೃದ್ಧಿ ಮತ್ತು ಶ್ರೇಷ್ಠತೆಯ ಅಧಿಪತಿ ಮತ್ತು ನಿಯಂತ್ರಕವಾಗಿದೆ. ಶುಕ್ರ ಈ ದಿಕ್ಕಿನಲ್ಲಿ ಚಲಿಸಿದಾಗ ಅದು ತನ್ನ ಫಲಿತಾಂಶಗಳನ್ನು ನೀಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದು ಜ್ಯೋತಿಷ್ಯ ನಂಬಿಕೆ.

3 /6

ವಾಸ್ತವವಾಗಿ ಉತ್ತರಕ್ಕೆ ಚಲಿಸುವ ಶುಕ್ರನು ತನ್ನ ಬಲವನ್ನು ಹೆಚ್ಚಿಸುತ್ತಾನೆ. ಜೊತೆಗೆ ರಾಶಿಗಳಿಗೆ ಸಂಪತ್ತು, ಆಸ್ತಿ ಮತ್ತು ಸಮೃದ್ಧಿ ಗಳಿಸಲು ಉತ್ತಮ ಅವಕಾಶ ನೀಡುತ್ತಾನೆ. ಜ್ಯೋತಿಷ್ಯದ ದೃಷ್ಟಿಕೋನದಿಂದ ಈ ಸಮಯ ಜೀವನವನ್ನು ಸಮತೋಲಿತ ಮತ್ತು ಸಮೃದ್ಧವಾಗಿಸಲು ಹೆಚ್ಚು ಅನುಕೂಲಕರವೆಂದು ಪರಿಗಣಿಸಲಾಗಿದೆ. ಹಾಗಾದರೆ ಯಾವ ರಾಶಿಯವರಿಗೆ ಶುಕ್ರನ ಈ ಸಂಚಾರ ಉತ್ತಮವಾಗಿದೆ ಎಂದು ತಿಳಿಯಿರಿ...

4 /6

ಶುಕ್ರನ ಉತ್ತರ ದಿಕ್ಕಿನ ಚಲನೆ ಮೇಷ ರಾಶಿಯವರಿಗೆ ಉತ್ತಮ ಫಲ ನೀಡಲಿದೆ. ಇದು ಮೇಷ ರಾಶಿಯವರ ಆರ್ಥಿಕ ಜೀವನವನ್ನ ಬದಲಾಯಿಸಲಿದೆ. ಕಲೆ, ಫ್ಯಾಷನ್, ವಿನ್ಯಾಸ, ಮಾಧ್ಯಮ, ಮನರಂಜನೆ, ಸಂಗೀತ, ಚಲನಚಿತ್ರ & ಸೃಜನಶೀಲ ಕೈಗಾರಿಕೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮೇಷ ರಾಶಿಯ ಜನರು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಶುಕ್ರ ಉತ್ತರದತ್ತ ಚಲನೆಯಿಂದ ಈ ರಾಶಿಯವರ ಸಂಬಳ ಹೆಚ್ಚಳ, ಬೋನಸ್ ಅಥವಾ ಆರ್ಥಿಕ ಲಾಭದ ಸಾಧ್ಯತೆಗಳಿವೆ. ಮೇಷ ರಾಶಿಯ ಜನರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ಪ್ರದರ್ಶಿಸಲು ಇದು ಸೂಕ್ತ ಸಮಯ. ಈ ಸಮಯವು ಕೆಲಸದ ಸ್ಥಳದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಸಲಿದೆ.

5 /6

ಶುಕ್ರನು ಸಂಪತ್ತು & ಸಮೃದ್ಧಿಯ ಅಂಶ. ಇದು ಉತ್ತರ ದಿಕ್ಕಿನಲ್ಲಿರುವುದರಿಂದ ವೃಷಭ ರಾಶಿಯವರ ವ್ಯಾಪಾರದಲ್ಲಿ ಆರ್ಥಿಕ ಲಾಭದ ಸಾಧ್ಯತೆ ಹೆಚ್ಚಾಗಲಿದೆ. ಶುಕ್ರನ ಉತ್ತರ ದಿಕ್ಕಿನ ಚಲನೆಯು ವೃಷಭ ರಾಶಿಯವರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನ ಬಲಪಡಿಸುತ್ತದೆ. ವ್ಯವಹಾರ ವಿಸ್ತರಣೆ & ಹೊಸ ಹೂಡಿಕೆ ಸಂಬಂಧಿತ ನಿರ್ಧಾರ ತೆಗೆದುಕೊಳ್ಳಲು ಈ ಸಮಯ ಅನುಕೂಲಕರವಾಗಿದೆ. ಪಾಲುದಾರಿಕೆಯಲ್ಲೂ ಉತ್ತಮ ಲಾಭ ಪಡೆಯುವ ಸಾಧ್ಯತೆಗಳಿವೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈ ಸಮಯ ಶುಭವಾಗಿದೆ. ಹಣದ ವಹಿವಾಟು ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ಕಾರ್ಯಗಳು ಈ ಸಮಯದಲ್ಲಿ ಯಶಸ್ವಿಯಾಗಬಹುದು.

6 /6

ಸಿಂಹ ರಾಶಿಯವರಿಗೆ ಶುಕ್ರನ ಉತ್ತರ ದಿಕ್ಕಿನ ಸಂಚಾರ ಶುಭ ಫಲ ನೀಡುತ್ತದೆ. ಪ್ರೀತಿ & ಸಂಬಂಧಗಳ ದೃಷ್ಟಿಕೋನದಿಂದ ಶುಕ್ರನ ಉತ್ತರ ದಿಕ್ಕಿನ ಚಲನೆಯನ್ನ ಅತ್ಯಂತ ಶುಭವಾಗಿದೆ. ಶುಕ್ರನು ಪ್ರೀತಿ, ಸಂಬಂಧಗಳು, ಆಕರ್ಷಣೆ & ಭಾವನಾತ್ಮಕ ಸಮತೋಲನವನ್ನ ಪ್ರತಿನಿಧಿಸುತ್ತಾನೆ. ಹೀಗಾಗಿ ಶುಕ್ರನ ಉತ್ತರದತ್ತ ಚಲನೆಯು ಪ್ರೇಮ ಜೀವನ & ಸಂಬಂಧಗಳಲ್ಲಿ ಸ್ಥಿರತೆ, ಸಕಾರಾತ್ಮಕತೆ ತರುತ್ತದೆ. ಪ್ರೇಮ ಸಂಬಂಧಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆ, ತಪ್ಪು ತಿಳುವಳಿಕೆ & ಭಿನ್ನಾಭಿಪ್ರಾಯ ಕೊನೆಗೊಳ್ಳುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಮುರಿದು ಬಿದ್ದ ಸಂಬಂಧಗಳು ಮತ್ತೆ ಬಲಗೊಳ್ಳಬಹುದು. ಕುಟುಂಬ ಸಂಬಂಧಗಳಲ್ಲಿ ಪ್ರೀತಿ ಮತ್ತು ಸಹಕಾರ ಹೆಚ್ಚಾಗಲಿದೆ.