ದುಬಾರಿ ಸೂರ್ಯ! ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ ಈ ಫೋಟೋ ಬೆಲೆ ಎಷ್ಟುಗೊತ್ತೆ?

Image of the Sun: ಈ ಚಿತ್ರಕ್ಕೆ  "ಫೈರ್ ಅಂಡ್ ಫ್ಯೂಷನ್" (Fire and Fusion) ಎಂದು ಹೆಸರಿಸಲಾಗಿದೆ ಮತ್ತು $50 (ಸುಮಾರು ₹ 3,766) ಗೆ ಲಭ್ಯವಿದೆ.

Edited by - Zee Kannada News Desk | Last Updated : Dec 8, 2021, 10:12 AM IST
  • ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸಿ ಸೂರ್ಯನ ಮೇಲ್ಮೈ ಸೆರೆ ಹಿಡಿದ ಛಾಯಾಗ್ರಾಹಕ
  • ಖ್ಯಾತ ಫೋಟೋಗ್ರಾಫರ್‌ ಆಂಡ್ರ್ಯೂ ಮೆಕಾರ್ಥಿ ತೆಗೆದಿರುವ ಸೂರ್ಯನ ಫೋಟೋ
  • 3,766 ರೂಪಾಯಿ ಪಾವತಿಸಿ ಈ ಫೋಟೋ ಡೌನ್‌ಲೋಡ್‌ ಮಾಡಿಕೊಳ್ಳಬಹುದು
ದುಬಾರಿ ಸೂರ್ಯ! ಇನ್‌ಸ್ಟಾಗ್ರಾಮ್‌ನಲ್ಲಿ ಹವಾ ಎಬ್ಬಿಸಿದ ಈ ಫೋಟೋ ಬೆಲೆ ಎಷ್ಟುಗೊತ್ತೆ? title=
ಸೂರ್ಯನ ಮೇಲ್ಮೈ ಸೆರೆ ಹಿಡಿದ ಛಾಯಾಗ್ರಾಹಕ

ನವದೆಹಲಿ: ಛಾಯಾಗ್ರಾಹಕರೊಬ್ಬರು ಸೂರ್ಯನ (Image of the Sun) ಬೆರಗುಗೊಳಿಸುವ ಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅತ್ಯಾಧುನಿಕ ಟೆಲಿಸ್ಕೋಪ್‌ ಬಳಸಿ ಸೂರ್ಯನ ಮೇಲ್ಮೈಯನ್ನು ಸೆರೆ ಹಿಡಿಯಲಾಗಿದೆ. 

ಫೋಟೋದಲ್ಲಿ, ಸೌರವ್ಯೂಹದ ಅತಿದೊಡ್ಡ ನಕ್ಷತ್ರವನ್ನು ಸುತ್ತುವರೆದಿರುವ ಶಾಖದ ಅದ್ಭುತ ವಿವರಗಳನ್ನು ನಾವು ನೋಡಬಹುದು. ಖ್ಯಾತ ಫೋಟೋಗ್ರಾಫರ್‌ ಆಂಡ್ರ್ಯೂ ಮೆಕಾರ್ಥಿ(Andrew McCarthy) ತೆಗೆದಿರುವ ಸೂರ್ಯನ ಫೋಟೋ ಇದಾಗಿದೆ.

ನವೆಂಬರ್‌ 29ರ ಮಧ್ಯಾಹ್ನ 2 ಗಂಟೆಗೆ ಸೂರ್ಯನು ಹೇಗೆ ಗೋಚರಿಸಿದ್ದ ಎಂಬುದು ಈ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದು ಆ್ಯಂಡ್ರ್ಯೂ ಹೇಳಿದ್ದಾರೆ. ಆಂಡ್ರ್ಯೂ ಮೆಕಾರ್ಥಿ ಅವರು ಇನ್ಸ್ಟಾಗ್ರಾಮ್‌ನಲ್ಲಿ @cosmic-background ಹೆಸರಿನ ಖಾತೆಯನ್ನು ಹೊಂದಿದ್ದಾರೆ. ಅಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ.

300 ಮೆಗಾಫಿಕ್ಸೆಲ್‌ಗಳಿಂದ ಕೂಡಿದ್ದು, ಇದಕ್ಕೆ ಫೈರ್‌ ಅಂಡ್‌ ಫ್ಯೂಷನ್‌(Fire and Fusion) ಎಂದು ಟೈಟಲ್‌ ನೀಡಲಾಗಿದೆ. 3,766 ರೂಪಾಯಿ ಪಾವತಿಸಿ ಈ ಫೋಟೋ  ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.  

 

 

"ಸೂರ್ಯನ ಇಂತಹ ಚಿತ್ರಗಳನ್ನು (Sun Images) ಸೆರೆಹಿಡಿಯಲು ನಾನು ಯಾವಾಗಲೂ ತುಂಬಾ ಉತ್ಸುಕನಾಗಿದ್ದೇನೆ" ಎಂದು ಆಂಡ್ರ್ಯೂ ಮೆಕಾರ್ಥಿ ಹೇಳಿಕೊಂಡಿದ್ದಾರೆ. ಸೂರ್ಯನ ಸ್ಪಷ್ಟವಾದ ಚಿತ್ರ ಪಡೆಯುವ ನಿಟ್ಟಿನಲ್ಲಿ 1,50,000ಕ್ಕೂ ಹೆಚ್ಚು ಫೋಟೋಗಳನ್ನು ತಾನು ತೆಗೆದಿರುವುದಾಗಿ ಆಂಡ್ರ್ಯೂ ಹೇಳಿದ್ದಾರೆ. 

Trending News