Assembly elections 2021: ಇಂದು ಪಂಚರಾಜ್ಯಗಳಲ್ಲಿ ಮತದಾನ! ಎಲ್ಲಿ ಹೇಗಿದೆ ವ್ಯವಸ್ಥೆ?

ತಮಿಳುನಾಡು ಎಂ ಕರುಣಾನಿಧಿ ಮತ್ತು ಜಯಲಲಿತಾ ಈ ಇಬ್ಬರು ನಾಯಕರಿಲ್ಲದೆ ಇದೆ  ಮೊದಲ ವಿಧಾನಸಭಾ ಚುನಾವಣೆಗೆ ಎದುರಿಸುತ್ತಿದೆ

Written by - Channabasava A Kashinakunti | Last Updated : Apr 6, 2021, 10:55 AM IST
  • ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳಿಗೆ ಇಂದು ಮತದಾನ ಪ್ರಾರಂಭವಾಗಿದೆ.
  • ತಮಿಳುನಾಡು ಎಂ ಕರುಣಾನಿಧಿ ಮತ್ತು ಜಯಲಲಿತಾ ಈ ಇಬ್ಬರು ನಾಯಕರಿಲ್ಲದೆ ಇದೆ ಮೊದಲ ವಿಧಾನಸಭಾ ಚುನಾವಣೆಗೆ ಎದುರಿಸುತ್ತಿದೆ
  • ಪಶ್ಚಿಮ ಬಂಗಾಳ ವಿಧಾನಸಭೆಯು ನಿರ್ಣಾಯಕ ಮೂರನೇ ಹಂತದ ಮತದಾನ ಶುರುವಾಗಿದೆ.
Assembly elections 2021: ಇಂದು ಪಂಚರಾಜ್ಯಗಳಲ್ಲಿ ಮತದಾನ! ಎಲ್ಲಿ ಹೇಗಿದೆ ವ್ಯವಸ್ಥೆ? title=
DNA news

ಬಿಗಿ ಭದ್ರತೆ ಮತ್ತು ಕೋವಿಡ್ -19 ಮಾರ್ಗಸೂಚಿಗಳ ಮಧ್ಯೆ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳಿಗೆ ಇಂದು ಮತದಾನ ಪ್ರಾರಂಭವಾಗಿದೆ. ಬೆಳಿಗ್ಗೆ 7 ಗಂಟೆಗೆ, ಅಸ್ಸಾಂನಲ್ಲಿ ಅಂತಿಮ ಹಂತ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಪ್ರಾರಂಭವಾಗಿದೆ. ಕೇರಳ, ಪುದುಚೇರಿ ಮತ್ತು ತಮಿಳುನಾಡಿನ ಒಂದೇ ಹಂತದ ಮತದಾನ ಪ್ರಾರಂಭವಾಗಿದೆ. 

ತಮಿಳುನಾಡು ವಿಧಾನಸಭಾ ಚುನಾವಣೆ 2021: ತಮಿಳುನಾಡು ರಾಜ್ಯದಲ್ಲಿ ಬಿಗಿ ಭದ್ರತೆಯ ಮಧ್ಯೆ ಇಂದು ವಿಧಾನಸಭಾ ಚುನಾವಣೆ(Assembly Elections)ಗೆ ಮತದಾನ ಶುರುವಾಗಿದೆ. ತಮಿಳುನಾಡಿನಲ್ಲಿ  38 ಜಿಲ್ಲೆಗಳಲ್ಲಿ 234 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಒಟ್ಟು 3,998 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಕೋವಿಡ್ ದೃಷ್ಟಿಯಿಂದ, ಮತಗಟ್ಟೆಗಳ ಸಂಖ್ಯೆಯನ್ನು 88,937 ಕ್ಕೆ ಹೆಚ್ಚಿಸಲಾಗಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ. 

ಇದನ್ನೂ ಓದಿ :Assembly Elections 2021: ಅಸ್ಸಾಂ-ಬಂಗಾಳದಲ್ಲಿ ಇಂದು ಮೂರನೇ ಹಂತದ ಮತದಾನ, ಕೇರಳ-ತಮಿಳುನಾಡು, ಪುದುಚೇರಿಯಲ್ಲಿ ಮತದಾನಕ್ಕೆ ಭಾರೀ ಬಿಗಿ ಭದ್ರತೆ

ಮೂರು ದಶಕಗಳ ಕಾಲ ಡಿಎಂಕೆ ನಾಯಕ ಎಂ ಕರುಣಾನಿಧಿ ಮತ್ತು ಜಯಲಲಿತಾ ಪ್ರತಿನಿಧಿಸುತ್ತಿದ್ದ ಎಐಎಡಿಎಂಕೆ(AIDMK) ನಡುವಿನ ಈ ಎರಡು ಪಕ್ಷಗಳು ಚುನಾವಣಾ ಕದನಗಳಿಗೆ ಸಾಕ್ಷಿಯಾದ್ದವು. ತಮಿಳುನಾಡು ಎಂ ಕರುಣಾನಿಧಿ ಮತ್ತು ಜಯಲಲಿತಾ ಈ ಇಬ್ಬರು ನಾಯಕರಿಲ್ಲದೆ ಇದೆ  ಮೊದಲ ವಿಧಾನಸಭಾ ಚುನಾವಣೆಗೆ ಎದುರಿಸುತ್ತಿದೆ. 

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳು 2021: ಪಶ್ಚಿಮ ಬಂಗಾಳ ವಿಧಾನಸಭೆ(West Bengal Assembly Elections)ಯು ನಿರ್ಣಾಯಕ ಮೂರನೇ ಹಂತದ ಮತದಾನ ಶುರುವಾಗಿದೆ. ಇಲ್ಲಿ  ಮೂರು ಜಿಲ್ಲೆಗಳಲ್ಲಿ 31 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧರವಾಗಲಿದೆ. ಈ 31 ಸ್ಥಾನಗಳ ಸೂಕ್ಷ್ಮತೆಯನ್ನು ಗಮನಿಸಿದರೆ ಚುನಾವಣಾ ಆಯೋಗವು ಎಲ್ಲಾ 10,871 ಬೂತ್‌ಗಳನ್ನು ಸೂಕ್ಷ್ಮವೆಂದು ಘೋಷಿಸಿರುವುದಲ್ಲದೆ, ಯಾವುದೇ ರೀತಿಯ ಅಹಿತಕರ ನಡೆಯದಂತೆ ವ್ಯಾಪಕವಾದ ಬಿಗಿ ಭದ್ರತೆಗೆ ಸಂಬಂಧಿಸಿದಂತೆ ವ್ಯವಸ್ಥೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ :ಕೊರೊನಾ ಪ್ರಕರಣ ಹೆಚ್ಚಳ: ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಎಪ್ರಿಲ್ 8 ಕ್ಕೆ ಸಭೆ

31 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳಲ್ಲಿ ದಕ್ಷಿಣದ 24 ಪರಗಣಗಳು ಅಂದ್ರೆ ಹೌರಾ ಮತ್ತು ಹೂಗ್ಲಿಗಳಲ್ಲಿ ಮತ ಕ್ಷೇತ್ರಗಳು ಟಿಎಂಸಿ ಮತ್ತು ಬಿಜೆಪಿಗೆ ನಿರ್ಣಾಯಕ ಕ್ಷೇತ್ರಗಳಾಗಿವೆ.

ಅಸ್ಸಾಂ ವಿಧಾನಸಭಾ ಚುನಾವಣೆಗಳು 2021: ಅಸ್ಸಾಂ ವಿಧಾನಸಭಾ ಚುನಾವಣೆ(Assam Assembly Elections)ಯ ಮೂರನೇ ಮತ್ತು ಅಂತಿಮ ಹಂತದ ಮತದಾನ ಇಂದು ಬೆಳಿಗ್ಗೆಯಿಂದಲೇ ಆರಂಭವಾಗಿದೆ. 12 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ  ಕೋವಿಡ್ -19 ಪ್ರೋಟೋಕಾಲ್ ಮತ್ತು ಭದ್ರತಾ ಕ್ರಮಗಳಿಗೆ ಸಂಬಂಧಿಸಿದಂತೆ ಅಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದೆ.

ಇದನ್ನೂ ಓದಿ :"ಕೊರೊನಾ ತಡೆಗೆ ಮಿನಿ ಲಾಕ್‌ಡೌನ್‌, ತ್ವರಿತ ಪ್ರಕ್ರಿಯೆ ಅಗತ್ಯ"

ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. ರಾಜ್ಯದ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿದ್ದು ಅದರಲ್ಲಿ 40 ಕ್ಷೇತ್ರಗಳಲ್ಲಿ ಇದೆ ಮೊದಲ ಬಾರಿಗೆ ಪುರುಷರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಕೇಂದ್ರಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆ 2021: ಕೇರಳದಲ್ಲಿ ಇಂದು 140 ವಿಧಾನಸಭಾ ಕ್ಷೇತ್ರಗಳಿಗೆ   ನಾಟದನ ಆರಂಭವಾಗಿದೆ. ಕೇರಳ(Kerala)ದಲ್ಲಿ ಈಗ  ಎಲ್‌ಡಿಎಫ್ ಮೂರು ಭಾಗವಾಗಿ ಹೊಡೆದು ಹೋಗಿದೆ. ಸಧ್ಯ ಮೂರೂ ಭಾಗವು ಚುನಾವಣಾ ಕಣದಲ್ಲಿವೆ. ಅಲ್ಲದೆ, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕಣದಲ್ಲಿದೆ. 

ಇದನ್ನೂ ಓದಿ :ಸಿಕ್ಕಿಂ ನ ಗ್ಯಾಂಗ್ ಟ್ಯಾಕ್ ನಲ್ಲಿ 5.4 ತೀವ್ರತೆಯ ಭೂಕಂಪ

ಕೇರಳದಲ್ಲಿ ಒಟ್ಟು 2.74 ಕೋಟಿ ಮತದಾರರು(Voters) ಚುನಾವಣಾ ಅಖಾಡದಲ್ಲಿರುವ 957 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಮತದಾನವು ಇಂದು ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಪುದುಚೇರಿ ವಿಧಾನಸಭಾ ಚುನಾವಣೆಗಳು 2021: ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿದೆ ಇಲ್ಲಿ ಕೇವಲ 10 ಲಕ್ಷ ಮತದಾರರಿದ್ದಾರೆ. 30  ವಿಧಾನಸಭಾ ಕ್ಷೇತ್ರ(Assembly Constituency)ಗಳಿಗೆ ಮತದಾನ ಶುರುವಾಗಿದೆ.  ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಜೊತೆ  ಕಾಂಗ್ರೆಸ್ (14 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ), ಡಿಎಂಕೆ (13), ಸಿಪಿಐ, ವಿಸಿಕೆ ( ತಲಾ ಒಂದು ಕ್ಷೇತ್ರ) ಮತ್ತು ಒಂದು ಪಕ್ಷೇತರ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ :"ಏಕಾಂಗಿ ಮಹಿಳೆಯಾಗಿ ಮಮತಾ ಬ್ಯಾನರ್ಜೀ ಹೋರಾಡುತ್ತಿದ್ದಾರೆ"

ಪ್ರತಿಸ್ಪರ್ಧಿ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಅಖಿಲ ಭಾರತ ಎನ್.ಆರ್. ಕಾಂಗ್ರೆಸ್ 16 ಕ್ಷೇತ್ರ)ಗಳಲ್ಲಿ, ಬಿಜೆಪಿ 9  ಕ್ಷೇತ್ರ)ಗಳಲ್ಲಿ ಮತ್ತು ಎಐಎಡಿಎಂಕೆ 5 ಕ್ಷೇತ್ರ)ಗಳಲ್ಲಿ ಸ್ಪರ್ಧಿಸುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News