ಚಿನ್ನ ಎಷ್ಟೇ ದುಬಾರಿಯಾದ್ರೂ ಡೋಂಟ್‌ ಕೇರ್;‌ ಜನವರಿಯಲ್ಲಿ ಶೇ.41ರಷ್ಟು ಆಮದು ಹೆಚ್ಚಳ!!

ಷೇರು ಮಾರುಕಟ್ಟೆಯ ನಿರಂತರ ಕುಸಿತ, ಜಾಗತಿಕ ಅನಿಶ್ಚಿತತೆ, ಬ್ಯಾಂಕುಗಳಿಂದ ಬೇಡಿಕೆ ಮತ್ತು ಕಸ್ಟಮ್ಸ್ ಸುಂಕದಲ್ಲಿನ ಕಡಿತದಿಂದಾಗಿ ಹೂಡಿಕೆಗಳ ವೈವಿಧ್ಯತೆಯಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ ಶೇ.11ರಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂಗೆ 88,200 ರೂ.ಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಹೆಚ್ಚಾಗಿ $45.54 ಬಿಲಿಯನ್‌ಗೆ ತಲುಪಿದೆ.

Written by - Puttaraj K Alur | Last Updated : Feb 18, 2025, 08:45 AM IST
  • ಭಾರತದಲ್ಲಿ ಚಿನ್ನದ ಬೆಲೆ ಆಕಾಶದೆತ್ತರಕ್ಕೆ ತಲುಪಿದೆ
  • ಚಿನ್ನ ಎಷ್ಟೇ ದುಬಾರಿಯಾದ್ರೂ ಡೋಂಟ್‌ ಕೇರ್
  • ಜನವರಿಯಲ್ಲಿ ಶೇ.41ರಷ್ಟು ಚಿನ್ನದ ಆಮದು ಹೆಚ್ಚಳ!!
ಚಿನ್ನ ಎಷ್ಟೇ ದುಬಾರಿಯಾದ್ರೂ ಡೋಂಟ್‌ ಕೇರ್;‌ ಜನವರಿಯಲ್ಲಿ ಶೇ.41ರಷ್ಟು ಆಮದು ಹೆಚ್ಚಳ!! title=
ಆಕಾಶದೆತ್ತರಕ್ಕೆ ಚಿನ್ನದ ಬೆಲೆ!

Gold and silver rate in India: ಭಾರತದಲ್ಲಿ ಚಿನ್ನದ ಬೆಲೆ ಆಕಾಶದೆತ್ತರಕ್ಕೆ ತಲುಪಿದೆ. ಆದರೆ ಇದರಿಂದ ಭಾರತೀಯರ ಮೇಲೆ ಯಾವುದೇ ಮಹತ್ವದ ಪರಿಣಾಮ ಕಂಡುಬಂದಿಲ್ಲ. ಹೌದು, ಜನವರಿಯಲ್ಲಿ ದೇಶದಲ್ಲಿ ಚಿನ್ನದ ಆಮದು ಶೇ.40.79ರಷ್ಟು ಹೆಚ್ಚಾಗಿದ್ದು, 2.68 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಚಿನ್ನ ಎಷ್ಟೇ ದುಬಾರಿಯಾದ್ರೂ ಭಾರತೀಯರು ಡೋಂಟ್‌ ಕೇರ್ ಎನ್ನುತ್ತಿದ್ದು, ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ. 

ದೇಶೀಯ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ಆಮದು ಹೆಚ್ಚಾಗಿದೆ. ಈ ಮಾಹಿತಿಯನ್ನು ವಾಣಿಜ್ಯ ಸಚಿವಾಲಯದ ದತ್ತಾಂಶದಿಂದ ಪಡೆಯಲಾಗಿದೆ. ಒಂದು ವರ್ಷದ ಹಿಂದೆ ಜನವರಿ 2024ರಲ್ಲಿ, ಚಿನ್ನದ ಆಮದು $1.9 ಬಿಲಿಯನ್ ಆಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜನವರಿ ಅವಧಿಯಲ್ಲಿ, ಚಿನ್ನದ ಆಮದು ಶೇ.32ರಷ್ಟು ಹೆಚ್ಚಾಗಿ 50 ಬಿಲಿಯನ್ ಡಾಲರ್‌ಗಳಿಗೆ ತಲುಪಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಇದು 37.85 ಬಿಲಿಯನ್ ಡಾಲರ್‌ಗಳಷ್ಟಿತ್ತು. ಚಿನ್ನದ ಆಮದು ಹೆಚ್ಚಳವು ಹೂಡಿಕೆದಾರರು ಅಮೂಲ್ಯ ಹಳದಿ ಲೋಹವನ್ನು ಸುರಕ್ಷಿತ ಆಸ್ತಿಯಾಗಿ ನಂಬುತ್ತಿರುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ₹5,00,000 ಠೇವಣಿ ಇರಿಸಿ ₹5,00,000 ಸ್ಥಿರ ಬಡ್ಡಿ ಪಡೆಯಿರಿ; ಈ ಸರ್ಕಾರಿ ಯೋಜನೆಯ ಬಗ್ಗೆ ತಿಳಿಯಿರಿ

ಈ ವರ್ಷ ದೆಹಲಿಯಲ್ಲಿ ಚಿನ್ನದ ಬೆಲೆ ಶೇ.11ರಷ್ಟು ಹೆಚ್ಚಳ

ಷೇರು ಮಾರುಕಟ್ಟೆಯ ನಿರಂತರ ಕುಸಿತ, ಜಾಗತಿಕ ಅನಿಶ್ಚಿತತೆ, ಬ್ಯಾಂಕುಗಳಿಂದ ಬೇಡಿಕೆ ಮತ್ತು ಕಸ್ಟಮ್ ಸುಂಕದಲ್ಲಿನ ಕಡಿತದಿಂದಾಗಿ ಹೂಡಿಕೆಗಳನ್ನು ವೈವಿಧ್ಯಗೊಳಿಸಲು ಚಿನ್ನದಲ್ಲಿನ ಹೂಡಿಕೆ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ ಶೇ.11ರಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂಗೆ 88,200 ರೂ.ಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಹೆಚ್ಚಾಗಿ $45.54 ಬಿಲಿಯನ್‌ಗೆ ತಲುಪಿದೆ. ಚಿನ್ನದ ಆಮದು ದೇಶದ ಚಾಲ್ತಿ ಖಾತೆ ಕೊರತೆ (CAD) ಮೇಲೆ ಪರಿಣಾಮ ಬೀರುತ್ತದೆ. ಸ್ವಿಟ್ಜರ್ಲೆಂಡ್ ಚಿನ್ನದ ಆಮದುಗಳಲ್ಲಿ ಅತಿದೊಡ್ಡ ಮೂಲವಾಗಿದೆ. ಇದರ ಪಾಲು ಸುಮಾರು ಶೇ.40ರಷ್ಟಿದೆ. ಇದರ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಶೇ.16ಕ್ಕಿಂತ ಹೆಚ್ಚು) ಮತ್ತು ದಕ್ಷಿಣ ಆಫ್ರಿಕಾ (ಸುಮಾರು 10 ಪ್ರತಿಶತ) ಇವೆ.

ಬೆಳ್ಳಿಯ ಆಮದು ಪ್ರಮಾಣದಲ್ಲೂ ಏರಿಕೆ  

ಚಿನ್ನದ ಆಮದಿನ ಹೆಚ್ಚಳದ ಜೊತೆಗೆ ದೇಶದಲ್ಲಿ ಬೆಳ್ಳಿಯ ಆಮದು ಪ್ರಮಾಣದಲ್ಲೂ ಏರಿಕೆ ಕಂಡಿದೆ. ಈ ಅಮೂಲ್ಯ ಲೋಹವು ದೇಶದ ಒಟ್ಟು ಆಮದಿನ ಶೇ.5ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಚಿನ್ನದ ಆಮದು ಏರಿಕೆಯಿಂದಾಗಿ ಜನವರಿಯಲ್ಲಿ ದೇಶದ ವ್ಯಾಪಾರ ಕೊರತೆ (ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ) 23 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಚೀನಾ ನಂತರ ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಚಿನ್ನದ ಗ್ರಾಹಕ ರಾಷ್ಟ್ರವಾಗಿದೆ. ಆಮದುಗಳು ಮುಖ್ಯವಾಗಿ ಆಭರಣ ಉದ್ಯಮದ ಅಗತ್ಯಗಳಿಗಾಗಿವೆ. ರತ್ನಗಳು ಮತ್ತು ಆಭರಣಗಳ ರಫ್ತು ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ ಶೇ.15.95ರಷ್ಟು ಹೆಚ್ಚಾಗಿ ಸುಮಾರು 3 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಜನವರಿಯಲ್ಲಿ ದೇಶದಲ್ಲಿ ಬೆಳ್ಳಿ ಆಮದು ಶೇ.82.84ರಷ್ಟು ಏರಿಕೆಯಾಗಿ 883.2 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ.

ಇದನ್ನೂ ಓದಿ: Gruha Lakshmi Scheme: ರಾಜ್ಯದ ʼಗೃಹಲಕ್ಷ್ಮಿʼಯರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News