Neha Gowda: ನಟಿ ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಎಂಬ ಪಾತ್ರದಿಂದ ಖ್ಯಾತಿಯಾಗಿದ್ದರು. 2018ರಲ್ಲಿ ಚಂದನ್ ಗೌಡ ಅವರನ್ನ ಮದುವೆಯಾಗಿ 6 ವರ್ಷಗಳ ಬಳಿಕ ಕಳೆದ ಅಕ್ಟೋಬರ್ 29ರಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಸದ್ಯಕ್ಕೆ ಮಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. ನಟನೆಯಿಂದ ದೂರ ಉಳಿದು ತಮ್ಮ ಸಮಯವನ್ನು ತಮ್ಮ ಮಗು ಮತ್ತು ಫ್ಯಾಮಿಲಿಗಾಗಿ ಮೀಸಲಿಟ್ಟಿದ್ದಾರೆ. ಇದೀಗ ನಟಿ ತಮ್ಮ ಜೀವನದ ಹಲವಾರು ವಿಷಯಗಳ ಬಗ್ಗೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
ಹಲವು ಹೆಣ್ಣುಮಕ್ಕಳು ಬಾಲ್ಯದಲ್ಲಿ ಎದುರಿಸುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡುತ್ತಲೇ ನಟಿ ನೇಹಾ ತಮ್ಮ ಬದುಕಿನಲ್ಲಾದ ಅಂಥದ್ದೆ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲಿರುವ ಕಾಮುಕ ರಾಕ್ಷಸರಿಂದ ಎಷ್ಟೋ ಮಕ್ಕಳು ಇದೇ ರೀತಿ ತೊಂದರೆಗಳು ಆಗುತ್ತಿದ್ದರೂ, ಹಲವು ಬಾರಿ ಆ ಕಂದಮ್ಮಗಳಿಗೆ ತಮ್ಮ ಮೇಲೆ ಏನು ಆಗಿದೆ ಎನ್ನುವುದೇ ತಿಳಿಯುತ್ತಿಲ್ಲ. ಇನ್ನೊಂದಡೆ ಕೆಲವು ಮಕ್ಕಳು ಹೆದರಿ ಮನೆಯಲ್ಲಿ ಬಾಯಿ ಬಿಡುವುದೇ ಇಲ್ಲ, ಇನ್ನು ಕೆಲವೊಮ್ಮೆ ತಿಳಿದರೂ ಅವರ ಮುಂದಿನ ಜೀವನ ಹಾಳಾಗುತ್ತದೆಂದು ಅದನ್ನು ಗುಟ್ಟಾಗಿಡುತ್ತಾರೆ. ಕೆಲವೊಂದು ಬಾರಿ ಪೋಷಕರೇ ಅದನ್ನು ಮಯಾ೯ದೆ ವಿಷಯಕ್ಕೆ ಮುಚ್ಚಿಹಾಕಲು ನೋಡುತ್ತಾರೆ. ಇದೇ ಕಾರಣಕ್ಕೆ ಇಂಥ ರಾಕ್ಷಸರು ನಿರಾತಂಕವಾಗಿ ಮತ್ತಷ್ಟು ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿದ್ದಾರೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿಯೂ ಕೂಡ ಇಂಥ ದುರುಳರಿಗೆ ಸರಿಯಾದ ಶಿಕ್ಷೆ ಆಗದೇ ಇರುವುದು ಕೂಡ ವಿಷಾದದ ಸಂಗತಿ.
ಇದನ್ನೂ ಓದಿ : ಗಗನಕ್ಕೇರುತ್ತಿರುವ ಬಂಗಾರದ ಬೆಲೆಯನ್ನು ಇಳಿಸಲು ಮಹತ್ವದ ನಿರ್ಧಾರ ! ದಿಟ್ಟ ತೀರ್ಮಾನದಿಂದ ಭರ್ಜರಿಯಾಗಿಯೇ ಕುಸಿಯುವುದು ಚಿನ್ನದ ಬೆಲೆ
ಈ ಬಗ್ಗೆ ಹಿಂದೆ ಎಂದಿಗೂ ಮಾತನಾಡಿಲ್ಲ ಎಂದಿರುವ ನೇಹಾ ಗೌಡ, ಹೆಣ್ಣು ಮಕ್ಕಳ ಮೇಲೆ ನಡೆಯುವ ಈ ಭಯಾನಕ ಘಟನೆಗಳ ಬಗ್ಗೆ ನೊಂದು ನುಡಿದಿದ್ದಾರೆ. ನಾನಾಗ ನಾಲ್ಕನೆಯ ಕ್ಲಾಸ್ನಲ್ಲಿದೆ. ಅಂದು ನನ್ನ ಅಮ್ಮ ಮನೆಯಲ್ಲಿ ಇರಲಿಲ್ಲ. ನನ್ನನ್ನು ಮಲಗಿಸಿ ಹೋಗಿದ್ದರು. ಅಜ್ಜಿ ಇದ್ದರು. ನನಗೆ ಎಚ್ಚರವಾದಾಗ ಅಮ್ಮ ಇರಲಿಲ್ಲ. ಅವಳನ್ನು ಹುಡುಕುತ್ತಾ ಹೊರಗೆ ಹೋಗಿಬಿಟ್ಟೆ. ಪಕ್ಕದ ಬೀದಿಯಲ್ಲಿ ಒಬ್ಬ ನಿನ್ನಪ್ಪ ನನಗೆ ಗೊತ್ತು, ವಾಚ್ ಕೊಡುತ್ತೇನೆ ಎಂದ. ಅದನ್ನ ನಾನು ಮೊದಲಿಗೆ ನಂಬಲಿಲ್ಲ, ನನ್ನ ಅಪ್ಪನ ಹೆಸರೇನು ಕೇಳಿದೆ. ಆತ ಏನೋ ತಡಬಡಿಸಿದ, ಆದರೆ ಅವನಿಗಿಂತ ಮೊದಲೇ ರಾಮಕೃಷ್ಣ ಗೊತ್ತಾ ಎಂದುಬಿಟ್ಟೆ. ಆತ ಹೌದೌದು ಅಂದ. ನಾನು ಅವನನ್ನ ನಂಬಿ ಹಿಂದೆ ಹೋದೆ.
ಇದನ್ನೂ ಓದಿ : ಗಗನಕ್ಕೇರುತ್ತಿರುವ ಬಂಗಾರದ ಬೆಲೆಯನ್ನು ಇಳಿಸಲು ಮಹತ್ವದ ನಿರ್ಧಾರ ! ದಿಟ್ಟ ತೀರ್ಮಾನದಿಂದ ಭರ್ಜರಿಯಾಗಿಯೇ ಕುಸಿಯುವುದು ಚಿನ್ನದ ಬೆಲೆ
ಎಲ್ಲೆಲ್ಲಿಯೋ ಕರೆದುಕೊಂಡು ಹೋದ ಆತ ವಾಚ್ ಅಂಗಡಿಯೊಂದಕ್ಕೆ ಹೋಗಿ ಸಡನ್ನಾಗಿ ಬಾಗಿಲು ಹಾಕಿದ. ತೀರಾ ಕೆಟ್ಟದಾಗಿ ನಡೆದುಕೊಳ್ಳಲು ಶುರು ಮಾಡಿದ. ಆ ಸಮಯದಲ್ಲಿ ನನಗೆ ಏನಾಗುತ್ತಿದೆ ಎಂಬುವುದು ಸಹ ನನಗೆ ಗೊತ್ತಿರಲಿಲ್ಲ, ಆಗ ಜೋರಾಗಿ ಅಳಲು ಶುರು ಮಾಡಿದೆ. ಆಗ ಅವನು ಚಾಕು ತೋರಿಸಿ ಅಳದಂತೆ ಹೇಳಿದ. ಚೆನ್ನಾಗಿ ಹೊಡೆದ. ಆಮೇಲೆ ಆತನಿಂದ ಹೇಗೋ ತಪ್ಪಿಸಿಕೊಂಡು ಬಂದೆ. ಎಲ್ಲಿಗೆ ಓಡಿ ಬಂದೆನೋ ಗೊತ್ತಿಲ್ಲ. ಅಷ್ಟರಲ್ಲಿಯೇ ನಮ್ಮ ಮನೆಯಲ್ಲಿ ಎಲ್ಲರೂ ನನ್ನನ್ನು ಹುಡುಕುತ್ತಿದ್ದರು. ನಾನು ಅಳುವುದನ್ನು ನೋಡಿ ಅಲ್ಲಿದ್ದವರು ಅಪ್ಪನ ಹೆಸರು ಕೇಳಿದರು. ಆದರೆ ಶಾಕ್ನಲ್ಲಿದ್ದ ನನಗೆ ಯಾರ ಹೆಸರೂ ನೆನಪಿಗೆ ಬರುತ್ತಿರಲಿಲ್ಲ. ಅಂತೂ ಕೊನೆಗೆ ನನ್ನ ಸಂಬಂಧಿಕರೊಬ್ಬರು ನನ್ನನ್ನು ನೋಡಿ ಮನೆಗೆ ಕರೆದುಕೊಂಡು ಹೋದರು ಎಂದು ಹೇಳಿದ್ದಾರೆ ನೇಹಾ.
ಮನೆಯಲ್ಲಿ ಆತ ಹೊಡೆದದ್ದು ಹೇಳಿದೆ ಬಿಟ್ಟರೆ ಬೇರೇನೂ ಹೇಳಿರಲಿಲ್ಲ. ಏಕೆಂದರೆ ನನಗೆ ಏನಾಗಿದೆ ಎಂದೇ ಗೊತ್ತಿರಲಿಲ್ಲ. ಕೆಲವು ವರ್ಷ ಬಳಿಕ ಟೀಚರ್ ಒಬ್ಬರು ಗುಡ್ಟಚ್, ಬ್ಯಾಡ್ಟಚ್ ಬಗ್ಗೆ ಹೇಳುವಾಗಲೇ ನನಗೆ ಗೊತ್ತಾಗಿದ್ದು, ನನಗೂ ಇದೇ ರೀತಿ ಆಗಿತ್ತು ಎಂದು. ಅಲ್ಲಿಯೇ ಜೋರಾಗಿ ಅತ್ತುಬಿಟ್ಟೆ. ಆಗ ಆ ಟೀಚರ್ಗೆ ಅನುಮಾನ ಬಂದು ನನ್ನನ್ನು ಸಮಾಧಾನಪಡಿಸಿ, ಏನೂ ನಡೆದಿಲ್ಲ ಎಂದು, ನನ್ನೊಳಗಿದ್ದ ಭಯವನ್ನು ಹೊರಕ್ಕೆ ಹಾಕಿದರು. ಆ ಬಳಿಕ ನನ್ನ ಅಪ್ಪ-ಅಮ್ಮನಿಗೂ ವಿಷಯ ಗೊತ್ತಾಯಿತು. ನನ್ನಪ್ಪ ತುಂಬಾ ಚೆನ್ನಾಗಿ ಸಿಚುವೇಷನ್ ಹ್ಯಾಂಡಲ್ ಮಾಡಿ ನನಗೆ ಧೈರ್ಯ ತುಂಬಿದರು. ಆ ಕರಾಳ ದಿನ ನೆನಪಿಸಿಕೊಂಡರೆ ಇಂದಿಗೂ ಭಯವಾಗುತ್ತದೆ ಎಂದಿದ್ದಾರೆ ನೇಹಾ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.