ಸಂಸದನ ಮಗನ ಕೈ ಹಿಡಿಯಲಿದ್ದಾಳೆ "ಸೈರಾಟ್‌" ಬೆಡಗಿ..!? ಶೀಘ್ರದಲ್ಲೇ ನಟಿ ರಿಂಕು ಮದುವೆ.. ಫೋಟೋ ವೈರಲ್‌

Rinku Rajguru marriage : ಸೈರಾಟ್‌ ಸಿನಿಮಾದ ಮೂಲಕ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಹೆಸರು ಗಳಿಸಿದ್ದ ನಟಿ ರಿಂಕು ರಾಜಗುರು.. ಕಳೆದ ಎರಡು ದಿನಗಳಿಂದ ಮದುವೆ ವಿಚಾರವಾಗಿ ಈ ನಟಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅಲ್ಲದೆ, ರಿಂಕು ಹೆಸರು ಸಂಸದ ಧನಂಜಯ್ ಮಹಾದಿಕ್ ಅವರ ಮಗನ ಜೊತೆ ತಳುಕು ಹಾಕಿಕೊಂಡಿದೆ.
 

1 /7

ನಟಿ ರಿಂಕು ರಾಜಗುರು ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸಂಸದ ಧನಂಜಯ್ ಮಹಾದಿಕ್ ಅವರ ಮಗನ ಜೊತೆಗಿರುವ ಫೋಟೋ ವೈರಲ್‌ ಆದ ಬೆನ್ನಲ್ಲೆ ಹೊಸ ವದಂತಿ ಶುರುವಾಗಿದೆ.  

2 /7

ಕೃಷ್ಣರಾಜ್ ಮಹಾದಿಕ್ ಅವರು ರಿಂಕು ರಾಜಗುರು ಜೊತೆ ಕೊಲ್ಲಾಪುರ ಮಹಾಲಕ್ಷ್ಮಿ ದರ್ಶನ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  

3 /7

ಕೊಲ್ಹಾಪುರ ಮಹಾಲಕ್ಷ್ಮಿ ದರ್ಶನ ನಂತರ ಪರಸ್ಪರ ಇಬ್ಬರು ಜೊತೆಗೆ ನಿಂತು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ಇದನ್ನು ನೋಡಿದ ನೆಟ್ಟಿಗರು.. ರಿಂಕು ಮಹಾದಿಕಾ ಅವರ ಮೂರನೇ ಸೊಸೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ.  

4 /7

ರಿಂಕು ಮತ್ತು ಕೃಷ್ಣರಾಜ್ ಅವರ ಫೋಟೋ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಟಿ ಕುಟುಂಬವು ಮೌನ ಮುರಿದಿದೆ. ಅಲ್ಲದೆ, ಅವರಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ.. ಅಂಬಾಬಾಯಿಯ ದರ್ಶನದ ಸಂದರ್ಭದಲ್ಲಿ ಕೊಲ್ಲಾಪುರದಲ್ಲಿ ಭೇಟಿಯಾಗಿದ್ದರು ಅಷ್ಟೇ ಅಂತ ಸ್ಪಷ್ಟ ಪಡಿಸಿದ್ದಾರೆ.   

5 /7

ರಿಂಕು ಜೊತೆಗಿನ ಫೋಟೋಗೆ ಮೊದಲು ಪ್ರತಿಕ್ರಿಯಿಸಿದವರು ಕೃಷ್ಣರಾಜ್ ಮಹಾದಿಕ್.. "ಫೋಟೋ ನೋಡಿ ದಾರಿ ತಪ್ಪಬೇಡಿ". ರಿಂಕು ನನ್ನ ಒಳ್ಳೆಯ ಸ್ನೇಹಿತೆ ಅಷ್ಟೇ. ಒಂದು ಕಾರ್ಯಕ್ರಮಕ್ಕಾಗಿ ಕೊಲ್ಲಾಪುರಕ್ಕೆ ಬಂದಿದ್ದಳು. ಆ ಸಂದರ್ಭದಲ್ಲಿ ನಾನು ಮತ್ತು ರಿಂಕು ಭೇಟಿಯಾದೆವು. ಹಾಗಾಗಿ ಮಹಾಲಕ್ಷ್ಮಿ ದೇಗುಲಕ್ಕೆ ಒಟ್ಟಿಗೆ ಹೋದೆವು, ಒಟ್ಟಿಗೆ ಫೋಟೋ ತೆಗೆದುಕೊಂಡೆವು, ಅಷ್ಟೇ ಅಂತ ಸ್ಪಷ್ಟನೆ ನೀಡಿದ್ದಾರೆ.  

6 /7

ಆದ್ದರಿಂದ ದಯವಿಟ್ಟು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಆ ಫೋಟೋವನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ನಾವು ಕೇವಲ ಒಳ್ಳೆಯ ಸ್ನೇಹಿತರು. ಅದನ್ನು ಮೀರಿ ನಮ್ಮ ನಡುವೆ ಏನೂ ಇಲ್ಲ ಎಂದು ಕೃಷ್ಣರಾಜ್‌ ಅವರು ತಿಳಿಸಿದ್ದಾರೆ.  

7 /7

ಇನ್ನು ಸಾಮಾಜಿಕ ಮಾಧ್ಯಮದಲ್ಲೂ ತುಂಬಾ ಸಕ್ರಿಯರಾಗಿರುವ ರಿಂಕು.. ಆಗಾಗ ಅಭಿಮಾನಿಗಳಿಗಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..