ಪಾಕಿಸ್ತಾನದ 58 ವರ್ಷದ ಧರ್ಮಗುರು ಜೊತೆ ಭಾರತೀಯ ಸ್ಟಾರ್‌ ನಟಿ 3ನೇ ಮದುವೆ..!? ಫ್ಯಾನ್ಸ್‌ ಶಾಕ್‌..

Rakhi Sawant marriage : ಚಿತ್ರರಂಗದಲ್ಲಿ ಡಿವೋರ್ಸ್‌, ಲವ್‌, ಡೇಟಿಂಗ್‌, ಬ್ರೇಕಪ್‌ ಸುದ್ದಿಗಳು ಇತ್ತೀಚಿಗೆ ಹೆಚ್ಚಾಗಿವೆ.. ವಿಚ್ಛೇದನ ನೀಡುವುದು ಮತ್ತೊಂದು ಮದುವೆಯಾಗುವುದು ಕಾಮನ್‌ ಆಗಿಬಿಟ್ಟಿದೆ.. ಇದೀಗ ಸ್ಟಾರ್‌ ನಟಿಯೊಬ್ಬಳು ಪಾಕಿಸ್ತಾನದ ಸೊಸೆಯಾಗಲು ಸಿದ್ಧಳಾಗಿದ್ದಾಳೆ ಎನ್ನುವ ವಿಚಾರ ಮನ್ನೆಲೆಗೆ ಬಂದಿದೆ.. ಅಷ್ಟಕ್ಕೂ ಯಾರು ಆ ನಟಿ..? ಬನ್ನಿ ನೋಡೋಣ..

1 /7

ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕಾರಣದಿಂದಾಗಿ ನಿರಂತರವಾಗಿ ಸುದ್ದಿಯಲ್ಲಿರುವ ರಾಖಿ ಸಾವಂತ್ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದಾರೆ.. ರಾಖಿ ಮೂರನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಎನ್ನವ ವದಂತಿಗಳು ಪ್ರಸ್ತುತ ಹೆಚ್ಚುತ್ತಿವೆ.  

2 /7

ಕಳೆದ ಕೆಲವು ದಿನಗಳಿಂದ ರಾಖಿ ಸಾವಂತ್ ತಮ್ಮ ಮೂರನೇ ಮದುವೆಯ ಬಗ್ಗೆ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ರಾಖಿ ಸಂದರ್ಶನವೊಂದರಲ್ಲಿ ತಾನು ಮದುವೆಗೆ ಸಿದ್ಧ ಎಂದು ಹೇಳಿದ್ದರು.  

3 /7

ರಾಖಿಗೆ ಪಾಕಿಸ್ತಾನದಿಂದ ಮದುವೆ ಪ್ರಸ್ತಾಪಗಳು ಬರುತ್ತಿವೆ. ದೋಡಿ ಖಾನ್ ಮೊದಲು ಅವಳನ್ನು ಮದುವೆಯಾಗುವಂತೆ ಕೇಳಿದನು. ಈಗ ಆಕೆಗೆ ಪಾಕಿಸ್ತಾನಿ ಧರ್ಮಗುರು ಅಬ್ದುಲ್ ಕ್ವಾವಿ ಪ್ರಪೋಸ್ ಮಾಡಿದ್ದಾರೆ.  

4 /7

ಪಾಕಿಸ್ತಾನಿ ಧರ್ಮಗುರು ಅಬ್ದುಲ್ ಕ್ವಾವಿ ಅವರನ್ನು ಮದುವೆಯಾಗಲು ರಾಖಿ ಒಪ್ಪಿಕೊಂಡಿದ್ದಾರೆ. ಆದರೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ. ತನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಮದುವೆಯಾಗುವುದಾಗಿ ರಾಖಿ ಹೇಳಿದ್ದಾಳೆ..  

5 /7

ನಾನು 7-8 ಕೋಟಿ ಸಾಲ ಮಾಡಿದ್ದೇನೆ.. ಯಾವುದೇ ಷರತ್ತುಗಳಿಲ್ಲದೆ ಈ ಸಾಲವನ್ನು ತೀರಿಸಿದರೆ ಮದುವೆಗೆ ಸಿದ್ಧ ಅಂತ ರಾಖಿ ಒಪ್ಪಿಕೊಂಡಿದ್ದಾಳೆ.. ಮುಫ್ತಿ ಅಬ್ದುಲ್ ಅವರನ್ನು ವಯಸ್ಸಿನ ಬಗ್ಗೆಯೂ ಪ್ರಶ್ನೆ ಮಾಡಿದ್ದಾಳೆ.  

6 /7

ಅಬ್ದುಲ್ ಅವರಿಗೆ 58 ವರ್ಷ ವಯಸ್ಸು. ಅವರು ವಿವಾಹಿತರು ಮತ್ತು ಅಜ್ಜ ಕೂಡ. "ಮನುಷ್ಯ ಮತ್ತು ಕುದುರೆ ಎಂದಿಗೂ ವಯಸ್ಸಾಗುವುದಿಲ್ಲ" ಎಂದು ರಾಖಿ ಹೇಳಿದ್ದಾಳೆ.. ಈಗ ನಟಿಯ ಮದುವೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.  

7 /7

ಈಗಾಗಲೇ ರಾಖಿ ಸಾವಂತ್ ಎರಡು ಬಾರಿ ವಿವಾಹವಾಗಿದ್ದಾರೆ. ಎರಡೂ ವಿವಾಹ ಸಂಬಂಧಗಳು ಹೆಚ್ಚು ಕಾಲ ಉಳಿಯಲಿಲ್ಲ. ಪ್ರಸ್ತುತ ಒಂಟಿ ಜೀವನ ನಡೆಸುತ್ತಿರುವ ನಟಿ ಮೂರನೇ ಮದುವೆಗೆ ರೆಡಿಯಾಗಿದ್ದಾಳೆ..