Viral Video : ಒಬ್ಬ ವ್ಯಕ್ತಿಯು ತನ್ನ ಕಠಿಣ ಪರಿಶ್ರಮದಿಂದ ದುಡಿಯಲು ಪ್ರಾರಂಭಿಸಿದರೆ, ಅವನಿಗೆ ಜೀವನದಲ್ಲಿ ಬೇರೆಯವರ ಮುಂದೆ ಭಿಕ್ಷೆ ಬೇಡುವ ಅಗತ್ಯವಿಲ್ಲ. ಈ ವಿಷಯವನ್ನು ಅರ್ಥಮಾಡಿಕೊಂಡವರು, ತಮ್ಮ ಕಠಿಣ ಪರಿಶ್ರಮದಿಂದ ಜಗತ್ತನ್ನು ತಲೆಬಾಗಿಸುವ ಶಕ್ತಿಯನ್ನು ಹೊಂದಿದ್ದಾರೆ. ಅಂತಹ ಜನರ ಹಿಂದೆ ಒಬ್ಬ ಉತ್ತಮ ಸ್ನೇಹಿತ ಇರ್ತಾನೆ ಎನ್ನುವುದು ಸತ್ಯ..
ಇತ್ತೀಚಿನ ದಿನಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ.. ಒಬ್ಬ ಅಂಧ ವ್ಯಕ್ತಿಗೆ ಅವನ ಸ್ನೇಹಿತ ಬೆಂಬಲ ನೀಡಿ ಸ್ವಂತ ಕಾಲಮೇಲೆ ನಿಲ್ಲುವಂತೆ ಮಾಡಿರುವ ಈ ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:"ಕೋಳಿ" ಪ್ರಾಣಿಯೋ ಅಥವಾ ಪಕ್ಷಿಯೋ..? ಕೊನೆಗೂ ಈ ಕುರಿತು ತೀರ್ಪು ನೀಡಿದ ಹೈಕೋರ್ಟ್
ಸಧ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ.. ಒಬ್ಬ ವ್ಯಕ್ತಿ ತನ್ನ ಸ್ನೇಹಿತನ ಸಹಾಯದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿರುವ ದೃಶ್ಯವಿದೆ. ಅಚ್ಚರಿ ವಿಚಾರ ಅಂದ್ರೆ.. ಆತ ಕುರುಡ.. ಜೀವನೋಪಾಯಕ್ಕಾಗಿ ಸ್ವಾಭಿಮಾನದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ಈತನ ಪ್ರತಿ ಹೆಜ್ಜೆಯಲ್ಲೂ ಅವನ ಆತ್ಮೀಯ ಸ್ನೇಹಿತ ಅವನ ಪಕ್ಕದಲ್ಲೇ ಇದ್ದು ಕೈ ಹಿಡಿದು ತಾನೂ ಕೆಲಸ ಮಾಡುವ ಜೊತೆ ಅವನಿಗೂ ಆಸೆಯಾಗಿದ್ದಾನೆ.
ವೀಡಿಯೊದಲ್ಲಿ ಇಬ್ಬರು ಯುವಕರು ಟ್ರಕ್ನಲ್ಲಿ ಕಿತ್ತಳೆ ಹಣ್ಣುಗಳನ್ನು ಲೋಡ್ ಮಾಡುವುದನ್ನು ನೀವು ನೋಡಬಹುದು. ಆಶ್ಚರ್ಯಕರ ಸಂಗತಿಯೆಂದರೆ ಅವರಲ್ಲಿ ಒಬ್ಬ ಕುರುಡ. ಆ ಅಂಧ ವ್ಯಕ್ತಿ ತನ್ನ ಸ್ನೇಹಿತನ ಸಹಾಯದಿಂದ ಕಿತ್ತಳೆ ಹಣ್ಣಿನ ಬುಟ್ಟಿ ಹೊತ್ತು ಟ್ರಕ್ಗೆ ಹಾಕುವ ದೃಶ್ಯವಿದೆ.. ಈ ಭಾವನಾತ್ಮಕ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ..
ಇದನ್ನೂ ಓದಿ:ಮಹಿಳೆಯ ಜೊತೆ ರೂಮ್ನಲ್ಲಿ ಖ್ಯಾತ ರಾಜಕಾರಣಿ..! ವಿಡಿಯೋ ಲೀಕ್, ಸಾಮಾಜಿಕ ಜಾಲತಾಣದಲ್ಲಿ ವೈರಲ್..
ಈ ವೀಡಿಯೊವನ್ನು shaukat_31 ಹೆಸರಿನ ಖಾತೆಯಿಂದ Insta ನಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿದ ನೆಟ್ಟಿಗರು ಇಂತಹ ಒಬ್ಬ ಸ್ನೇಹಿತ ಜೊತೆ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಅಂತ ಕಾಮೆಂಟ್ ಮಾಡುತ್ತಿದ್ದಾರೆ.. ಅಲ್ಲದೇ ಅಂಧನಾಗಿದ್ದರೂ ದುಡಿದು ತಿನ್ನುತ್ತಿರುವ ವ್ಯಕ್ತಿಯ ವ್ಯಕ್ತಿತ್ವವನ್ನು ಕೊಂಡಾಡುತ್ತಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.