ಹೊಸ ಕ್ಯಾಮೆರಾ ವಿನ್ಯಾಸದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A36 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ!!

Samsung Galaxy A36 5G: ಈ Samsung ಫೋನ್ ಐಫೋನ್ 16ನಂತಹ ಬಾಕ್ಸ್ ತರಹದ ಲಂಬವಾಗಿ ಜೋಡಿಸಲಾದ ಟ್ರಿಪಲ್ ಕ್ಯಾಮೆರಾ ಸೆಟಪ್ ಪಡೆಯಬಹುದು. ಕಳೆದ ವರ್ಷ ಬಿಡುಗಡೆಯಾದ Galaxy A35 5Gಗಿಂತ ಇದರ ಕ್ಯಾಮೆರಾ ವಿನ್ಯಾಸ ವಿಶಿಷ್ಟವಾಗಿರುತ್ತದೆ. ಫೋನ್‌ನಲ್ಲಿ 50MP ಮುಖ್ಯ OIS ಕ್ಯಾಮೆರಾವನ್ನು ಒದಗಿಸಬಹುದು.

Written by - Puttaraj K Alur | Last Updated : Feb 9, 2025, 06:43 PM IST
  • ಶೀಘ್ರವೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A36 5G ಬಿಡುಗಡೆ
  • Samsung Galaxy A36 5Gನಲ್ಲಿ 120Hz ಹೆಚ್ಚಿನ ರಿಫ್ರೆಶ್ ರೇಟ್‌ನೊಂದಿಗೆ AMOLED ಡಿಸ್ಪ್ಲೇ
  • Samsung Galaxy A36 5Gಯಲ್ಲಿ ವಿಶಿಷ್ಟ ಕ್ಯಾಮೆರಾ ವಿನ್ಯಾಸವನ್ನು ನೀಡಬಹುದು ಎಂದು ಹೇಳಲಾಗಿದೆ
ಹೊಸ ಕ್ಯಾಮೆರಾ ವಿನ್ಯಾಸದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ A36 5G ಶೀಘ್ರದಲ್ಲೇ ಬಿಡುಗಡೆಯಾಗಲಿದೆ!! title=
Samsung Galaxy A36 5G

Samsung Galaxy A36 5G: ಸ್ಯಾಮ್‌ಸಂಗ್ ಗ್ಯಾಲಕ್ಸಿ A36 5G ಶೀಘ್ರದಲ್ಲೇ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಸ್ಯಾಮ್‌ಸಂಗ್‌ನ ಈ ಮಧ್ಯಮ-ಬಜೆಟ್ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಮಾಹಿತಿ ಸೋರಿಕೆಯಾಗಿದ್ದು, ಕೆಲವು ವೈಶಿಷ್ಟ್ಯಗಳು ಬಹಿರಂಗವಾಗಿವೆ. ಗ್ಯಾಲಕ್ಸಿ A36 ಜೊತೆಗೆ ಗ್ಯಾಲಕ್ಸಿ A56 ಅನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.. ಈ ಫೋನ್ ಡ್ಯುಯಲ್ ಸಿಮ್ ಕಾರ್ಡ್‌ನೊಂದಿಗೆ ಬರುತ್ತದೆ. ಇದಲ್ಲದೆ 5G ಸಂಪರ್ಕ, ಬ್ಲೂಟೂತ್ ಮತ್ತು ವೈ-ಫೈಗಾಗಿ ಪ್ರಮಾಣೀಕರಣ ಪಡೆದುಕೊಂಡಿದೆ. ಈ Samsung ಫೋನ್ 25W ಚಾರ್ಜರ್ ಅನ್ನು ಬೆಂಬಲಿಸುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 3 ಅಥವಾ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 ಎಸ್ ಜೆನ್ 2 ಪ್ರೊಸೆಸರ್ ಅಳವಡಿಸಬಹುದಾಗಿದೆ. ಈ ಮಧ್ಯಮ ಬಜೆಟ್ ಫೋನ್ 6GB ಮತ್ತು 8GB RAM ಬೆಂಬಲವನ್ನು ಪಡೆಯಬಹುದು. ಇದರೊಂದಿಗೆ 128GB / 256GB ವರೆಗಿನ ಆಂತರಿಕ ಸ್ಟೋರೇಜ್ ಬೆಂಬಲ ಲಭ್ಯವಿರುತ್ತದೆ. ಈ ಬಾರಿ ಕಂಪನಿಯು Samsung Galaxy A36 5Gಯಲ್ಲಿ ವಿಶಿಷ್ಟ ಕ್ಯಾಮೆರಾ ವಿನ್ಯಾಸವನ್ನು ನೀಡಬಹುದು ಎಂದು ಹೇಳಲಾಗಿದೆ. ಈ Samsung ಫೋನ್ ಐಫೋನ್ 16ನಂತಹ ಬಾಕ್ಸ್ ತರಹದ ಲಂಬವಾಗಿ ಜೋಡಿಸಲಾದ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಪಡೆಯಬಹುದು.

ಇದನ್ನೂ ಓದಿ: ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ.. ಇದುವರೆಗಿನ ಅತಿ ದೊಡ್ಡ ಹೈಕ್ ಇದು! ಭರ್ಜರಿ ಮೊತ್ತ ಕೈಸೇರೋದು ಯಾವಾಗ?

ಕಳೆದ ವರ್ಷ ಬಿಡುಗಡೆಯಾದ Galaxy A35 5Gಗಿಂತ ಇದರ ಕ್ಯಾಮೆರಾ ವಿನ್ಯಾಸ ವಿಶಿಷ್ಟವಾಗಿರುತ್ತದೆ. ಫೋನ್‌ನಲ್ಲಿ 50MP ಮುಖ್ಯ OIS ಕ್ಯಾಮೆರಾವನ್ನು ಒದಗಿಸಬಹುದು. ಇದಲ್ಲದೆ ಈ ಫೋನ್ ಇನ್ನೂ ಎರಡು ಕ್ಯಾಮೆರಾಗಳೊಂದಿಗೆ ಬರಲಿದೆ ಎಂದು ಹೇಳಲಾಗಿದೆ.Samsung Galaxy A36 5G 120Hz ಹೆಚ್ಚಿನ ರಿಫ್ರೆಶ್ ರೇಟ್‌ನೊಂದಿಗೆ AMOLED ಡಿಸ್ಪ್ಲೇಯನ್ನು ಹೊಂದಬಹುದು.

ಈ ಸ್ಯಾಮ್‌ಸಂಗ್ ಫೋನ್ ಅನ್ನು ನೀರು ಮತ್ತು ಧೂಳು ನಿರೋಧಕ ರೇಟಿಂಗ್‌ನೊಂದಿಗೆ ಬಿಡುಗಡೆ ಮಾಡಬಹುದು. ಈ ಫೋನಿಗೆ IP68 ರೇಟಿಂಗ್ ನೀಡಬಹುದು. ಡಿಸ್ಪ್ಲೇ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಲಭ್ಯವಿದೆ. ಕಂಪನಿಯು Samsung Galaxy A36 5Gಯಲ್ಲಿ 5,000mAh ನ ಶಕ್ತಿಶಾಲಿ ಬ್ಯಾಟರಿಯನ್ನು ಒದಗಿಸಬಹುದು. ಸ್ಯಾಮ್‌ಸಂಗ್‌ನ ಈ ಮಧ್ಯಮ-ಬಜೆಟ್ ಫೋನ್ ಆಂಡ್ರಾಯ್ಡ್ 15 ಆಧಾರಿತ OneUI 7ನೊಂದಿಗೆ ಬಿಡುಗಡೆಯಾಗಲಿದೆ. ಹೆಚ್ಚುವರಿಯಾಗಿ ಗ್ಯಾಲಕ್ಸಿ AI ವೈಶಿಷ್ಟ್ಯಗಳನ್ನು ಸಹ ಇದರಲ್ಲಿ ಕಾಣಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಜೆಟ್‌ ಘೋಷಣೆಯಾದ ಒಂದೇ ವಾರಕ್ಕೆ ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌... ಕಸ್ಟಮ್‌ ಸುಂಕ ಕಡಿತಗೊಂಡ ಬೆನ್ನಲ್ಲೇ ಬಂಗಾರದ ಬೆಲೆ 10 ಗ್ರಾಂಗೆ ರೂ.50,000!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News