Zee Kannada News Achievers Awards 2025: ʼಜೀ ಕನ್ನಡ ನ್ಯೂಸ್ʼನ ಮೂರನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದಿರುವ 46 ಮಂದಿ ಸಾಧಕರನ್ನು ಗುರುತಿಸಿ ʼಜೀ ಅಚೀವರ್ಸ್ ಅವಾರ್ಡ್-2025ʼ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್ ಕಾರ್ಲ್ಟ್ರನ್ ಹೋಟೆಲ್ನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಘನ ಉಪಸ್ಥಿತಿ ವಹಿಸಿದ್ದರು. ರಾಜ್ಯದ ವಿವಿಧ ಸಾಧಕರಿಗೆ ಡಿ.ಕೆ.ಶಿವಕುಮಾರ್ ಅವರು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.
ಇದೇ ವೇಳೆ ಮಾತಾಡಿದ ಅವರು, ʼಜೀ ಕನ್ನಡ ನ್ಯೂಸ್ʼ ಗುರುತಿಸಿರುವ ಸಾಧಕರು ನಿಜಕ್ಕೂ ಸಮಾಜದ ಆಸ್ತಿ. ನಾಡು ಮತ್ತು ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸನ್ಮಾನ ಮತ್ತು ಪ್ರಶಸ್ತಿಗಳು ಸೇವೆಗೆ ಕೊನೆಯೆಂದು ಭಾವಿಸಬಾರದು. ಮತ್ತಷ್ಟು ಪ್ರೇರಣೆ ಮತ್ತು ಹುಮ್ಮಸ್ಸು ಎಂದು ತಿಳಿಯಬೇಕುʼ ಎಂದು ಹೇಳಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ವೇಳೆ ಜೀ ಕನ್ನಡ ನ್ಯೂಸ್ʼ ಸಂಪಾದಕರಾದ ರವಿ ಅವರು ಸ್ವಾಗತ ಭಾಷಣದಲ್ಲಿ ಸಾಧಕರ ಸೇವೆ ಮತ್ತು ಕೈಂಕರ್ಯಗಳನ್ನು ಗುಣಗಾನ ಮಾಡಿದರು. ಅಲ್ಲದೆ ʼಜೀ ಕನ್ನಡ ನ್ಯೂಸ್ʼ ಮೂರನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಸಮಸ್ತ ವೀಕ್ಷಕರ ಸಹಕಾರಕ್ಕೆ ಧನ್ಯವಾದಗಳನ್ನ ತಿಳಿಸಿದರು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಸಚಿವರಾದ ರಾಮಲಿಂಗಾರೆಡ್ಡಿ, ಚಿತ್ರತಾರೆಯರಾದ ಧೃವ ಸರ್ಜಾ ಮತ್ತು ಪ್ರಿಯಾಂಕಾ ಉಪೇಂದ್ರ ಕೂಡ ವೇದಿಕೆಯಲ್ಲಿ ಆಸೀನರಾಗಿದ್ದರು. ಜೊತೆಗೆ ಡಾ.ರಾಜಕುಮಾರ್ ಪುತ್ರಿಯರಾದ ಪೂರ್ಣಿಮಾ ರಾಮ್ಕುಮಾರ್ ಹಾಗೂ ಲಕ್ಷ್ಮಿ ಗೋವಿಂದರಾಜು ಹಾಜರಿದ್ದು, ಸಾಧಕರನ್ನು ಸನ್ಮಾನಿಸಿದರು. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ 46 ಸಾಧಕರನ್ನು ಅಭಿನಂದಿಸಿರೋ ವಿಡಿಯೋ ಪ್ಲೇ ಮಾಡಲಾಯಿತು. ʼಜೀ ಕನ್ನಡ ನ್ಯೂಸ್ʼ ಗುರುತಿಸಿರುವ ಸಾಧಕರು ನಾಡು-ನುಡಿ, ನೆಲ-ಜಲ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಎಲೆಮರೆಯ ಕಾಯಿಯಂತಿರೋ ವ್ಯಕ್ತಿಗಳಿಗೆ ಮುಖ್ಯವಾಹಿನಿ ಕಲ್ಪಿಸಿಕೊಟ್ಟು ಗೌರವಿಸಿರೋದು ಉತ್ತಮ ಕಾರ್ಯವೆಂದು ಸಿಎಂ ಸಿದ್ದರಾಮಯ್ಯನವರು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮಲಿಂಗಾರೆಡ್ಡಿ: ಸದ್ದಿಲ್ಲದೆ ಸ್ವಂತಕ್ಕೆ ಏನನ್ನೂ ಗಳಿಸಿಕೊಳ್ಳದ ನಿಸ್ವಾರ್ಥ ಜನರು ನಾಡಿನ ಉದ್ದಗಲಕ್ಕೂ ಜೀವಿಸುತ್ತಿದ್ದಾರೆ. ಸದಾ ಸಮಾಜ, ರಾಜ್ಯಕ್ಕೆ ಮಿಡಿಯುವ ಸ್ಪಂದಿಸುವ ಮಂದಿಗೆ ಪ್ರೋತ್ಸಾಹ ಸಿಕ್ಕಾಗ ಮತ್ತಷ್ಟು ರಾಜ್ಯವು ಅಭಿವೃದ್ಧಿಯಾಗಲಿದೆ. ಸಮೂಹ ಮಾಧ್ಯಮಗಳು ಎಲೆಮರೆ ಕಾಯಿಯಂತಿರೋ ಮಂದಿಗೆ ಕೈ ಕೊಟ್ಟು ಮುಖ್ಯವಾಹಿನಿಗೆ ತಂದು ಬಿಟ್ಟರೆ ಉಪಯೋಗ ಹೆಚ್ಚಾಗಲಿದೆ.
ಡಿ.ವಿ.ಸದಾನಂದಗೌಡ: ರಾಜ್ಯದ ಉದ್ದಗಲದ ಸಾಧಕರನ್ನು ಗುರುತಿಸಿ ವೇದಿಕೆ ಕಲ್ಪಿಸಿಕೊಟ್ಟದ್ದೀರಿ. ಬದಲಾದ ಮಾಧ್ಯಮಗಳ ಸಂರಚನೆಯಾದ ಸೋಷಿಯಲ್ ಮೀಡಿಯಾ, AI ರೀತಿಯ ಸಮೂಹ ಮಾಧ್ಯಮ ಜನರನ್ನ ಕ್ಷಣಾರ್ಧದಲ್ಲಿ ಆಕರ್ಷಿಸುತ್ತಿದೆ. ಮುಂದಿನ ದಾರಿದೀಪ ಹೆಜ್ಜೆಗುರುತು ಸೃಷ್ಟಿಸುವ ʼಜೀ ಕನ್ನಡ ನ್ಯೂಸ್ʼ ಕಾರ್ಯ ಮರೆಯೋ ಹಾಗಿಲ್ಲ. ನಿಜವಾದ ಸಾಧಕರಿಗೆ ಸನ್ಮಾನ ದೊರೆತಿರುವುದು ಅಭಿನಂದನೀಯ.
ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ: ವಸ್ತುನಿಷ್ಠ ಸುದ್ದಿ ಪ್ರಸಾರದಿಂದ ʼಜೀ ಕನ್ನಡ ನ್ಯೂಸ್ʼ ರಾಜ್ಯದ ಜನರ ಮನಸಿಗೆ ಮುಟ್ಟಿದೆ. ಮೂರನೆ ವರ್ಷದ ವಾರ್ಷಿಕೋತ್ಸವ ಸಂಭ್ರದಲ್ಲಿ ವಿವಿಧ ಕ್ಷೇತ್ರಗಳ ಸಾಧನೆ ಮಾಡಿರೋ ಗಣ್ಯರನ್ನು ಗುರುತಿಸಿ ಗೌರವ ಸಲ್ಲಿಸಿರುವುದು ಅಭಿನಂದನೆಗೆ ಅರ್ಹವಾದುದು. ಕಾಲ ಕಾಲಕ್ಕೆ ಬದಲಾವಣೆ ಅಗತ್ಯವಿರುವ ಹಾಗೆ ಗಣ್ಯರ ಸಾಧನೆ ವಿಭಿನ್ನವಾಗಿದ್ದು, ಗುರ್ತಿಸುವಿಕೆ ಕೂಡ ಅಗಾಧ ಪ್ರಕ್ರಿಯೆ. ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕರ ಸನ್ಮಾನ ಮತ್ತೊಂದು ಸಾಧನೆಗೆ ಮೆಟ್ಟಿಲಾಗಲಿ, ಸ್ಪೂರ್ತಿಯಾಗಲಿ.
ಜೀ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್ 2025 ಪ್ರಶಸ್ತಿ ಪುರಸ್ಕೃತರು
1. ಸತ್ಯನಾರಾಯಣ, ರಾಷ್ಟ್ರೀಯ ಪ್ಯಾರಾಲಿಂಪಿಕ್ ಕೋಚ್
2. ಸಂಜಯ್ ಬೈದ್, ಉದ್ಯಮಿ
3. ಬಿ.ಸಿ.ಜಯಪ್ರಸಾದ್, ಸಾವಯವ ಕೃಷಿಕ
4. ಗೋಪಿ ಕೃಷ್ಣ, ಸಮಾಜ ಸೇವಕ
5. ಶಶಿಕುಮಾರ್ ತಿಮ್ಮಯ್ಯ, ಉದ್ಯಮಿ
6. ಕೆ.ಎಂ.ಸಂದೇಶ್, ಸಮಾಜ ಸೇವಕ
7. ಸುಂದರ್ ರಾಜ್ಪತ್ತಿ, ಉದ್ಯಮಿ
8. ಡಾ.ಎ.ಎಸ್.ಬಾಲಸುಬ್ರಮಣ್ಯ, ಶಿಕ್ಷಣ ತಜ್ಞರು
9. ನವೀನ್ ಕೆ, ಉದ್ಯಮಿ
10. ನಿರ್ಮಲಾ ಹೆಚ್ ಸುರಪುರ, ಸಮಾಜ ಸೇವಕರು
11. ನರಸಿಂಹಮೂರ್ತಿ ಮದ್ಯಸ್ತ, ಹೋಟೆಲ್ ಉದ್ಯಮಿ
12. ಜೆ.ವೆಂಕಟೇಶ್, ಸಮಾಜ ಸೇವಕ
13. ಡಾ.ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು
14. ಡಾ.ಎನ್.ಕೀರ್ತಿರಾಜ್, ಜ್ಯೋತಿಷಿ
15. ಎಂ.ಶಿವರಾಜ್, ಬಿಬಿಎಂಪಿ ಮಾಜಿ ಕಾರ್ಪೊರೇಟರ್
16. ರಾಘವೇಂದ್ರ ಕುಲಕರ್ಣಿ, ಜ್ಯೋತಿಷಿ
17. ಡಾ.ಸುಪ್ರೀತ್, ಆಧ್ಯಾತ್ಮಿಕ ಚಿಂತಕರು
18. ಮಲ್ಲಿಕಾರ್ಜುನ ಗಂಗಾಂಬಿಕೆ, ಸಮಾಜ ಸೇವೆ
19. ಡಾ.ದ್ಯಾನೇಶ್ವರ್, ವೈದ್ಯರು
20. ಗಂಗಾಧರ ರಾಜು, ಸಮಾಜ ಸೇವೆ
21. ಡಾ.ಜಿ.ಎಸ್.ರವಿ, ಶಿಕ್ಷಣ ತಜ್ಞರು
22. ಎ.ಅಮೃತರಾಜ್, ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ
23. ಬಸವರಾಜ ಆರ್.ಕಬಾಡೆ, BSWML BBMP ಮುಖ್ಯ ಎಂಜಿನಿಯರ್
24. ಡಾ.ಕೆ.ಮುನಿಯಪ್ಪ ಓದೇನಹಳ್ಳಿ, ಸಮಾಜ ಸೇವಕ-ಬಿಜೆಪಿ ನಾಯಕ
25. ವೇಲು ನಾಯ್ಕರ್, ಬಿಬಿಎಂಪಿ ಮಾಜಿ ಕಾರ್ಪೊರೇಟರ್
26. ಎನ್.ರೀನಾ ಸುವರ್ಣ, ACP-ವೈಟ್ಫೀಲ್ಡ್
27. ಡಾ.ಜಿ.ಎಸ್.ಶ್ರೀಧರ್, ಸಮಾಜ ಸೇವಕರು
28. ಪ್ರೊ.ಎಂ.ವಿ.ಪ್ರಕಾಶ್, ಶಿಕ್ಷಣ ತಜ್ಞರು
29. ಅಲಗಣಿ ಕಿರಣ್ಕುಮಾರ್, ಸಮಾಜ ಸೇವಕರು
30. ಜಿ.ಎಸ್.ಶಶಿಕುಮಾರ್, ಸಮಾಜ ಸೇವಕರು
31. ಡಿ.ಎಸ್.ರಾಮಲಿಂಗೇಗೌಡ, ಸಮಾಜ ಸೇವಕರು
32. ಟಿ.ಜಿ.ವಿಶ್ವಾಸ್, ಉದ್ಯಮಿ
33. ಡಾ.ಜಿ.ಎಸ್.ಲತಾ ಜೈಪ್ರಕಾಶ್, ಸಮಾಜ ಸೇವಕ-ಉದ್ಯಮಿ
34. ಎಸ್.ಕುಮಾರ್, ಸಮಾಜ ಸೇವಕರು
35. ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ-ರಕ್ಷಣಾ ತಜ್ಞರು
36. ಡಾ.ಶ್ರೀಮಂತ್ ಕುಂಬಾರ್, ವೈದ್ಯರು
37. ಡಾ.ಫಾರೂಕ್ ಅಹ್ಮದ್ ಮಣೂರ್, ವೈದ್ಯರು
38. ಅರುಣಕುಮಾರ್ ಎಸ್.ಪಾಟೀಲ್, ಸಮಾಜ ಸೇವಕರು
39. ಯು.ಜೆ.ಮಲ್ಲಿಕಾರ್ಜುನ್, ಕನ್ನಡ ಹೋರಾಟಗಾರ-ಸಮಾಜ ಸೇವಕರು
40. ಕೃಷ್ಣಮೂರ್ತಿ ಸಿ.ಎನ್, ಸಮಾಜ ಸೇವಕರು
41. ಡಾ.ಪಂಡಿತ ಸಿದ್ದಾಂತ ಅರಣ್ ಶರ್ಮಾ, ಜ್ಯೋತಿಷಿ-ವಾಸ್ತು ಸಲಹೆಗಾರರು
42. ಸಿಎಂ ಶಾಬಾಜ್ ಖಾನ್, ಸಮಾಜ ಸೇವಕರು
43. ಅನಿಲ್ ಕುಮಾರ್ ಜಿ.ಆರ್, ಶಿಕ್ಷಣ ತಜ್ಞರು
44. ಡಾ.ಆಶಿಕ್ ಬಿಜಿ, ವೈದ್ಯರು
45. ಸುರೇಶ್ ಶಂಕರ್ ಜತ್ತಿ, ಶಿಕ್ಷಣ ತಜ್ಞರು
46. ಎಂ.ಬಿ.ಜೋಷಿ, ಜ್ಯೋತಿಷಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.