ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್‌ ಆಗದ ಆಟಗಾರ ಯಾರು ಗೊತ್ತೇ? ಇವರು ಟೀಂ ಇಂಡಿಯಾದ ದಿಗ್ಗಜನೇ... ಧೋನಿಯ ನಕಲು ಎಂದೇ ಖ್ಯಾತಿ ಪಡೆದಾತ

cricketers who have never been out in ODI: ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಏಕದಿನ ವೃತ್ತಿಜೀವನದಲ್ಲಿ ಎಂದಿಗೂ ಔಟ್ ಆಗಿಲ್ಲ. ಆ ಆಟಗಾರರ ಬಗ್ಗೆ ಇಲ್ಲಿ ತಿಳಿಯೋಣ.

Written by - Bhavishya Shetty | Last Updated : Feb 8, 2025, 08:18 PM IST
    • ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಒಮ್ಮೆಯೂ ಔಟ್‌ ಆಗದ ಕ್ರಿಕೆಟಿಗ
    • ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಏಕದಿನ ವೃತ್ತಿಜೀವನದಲ್ಲಿ ಎಂದಿಗೂ ಔಟ್ ಆಗಿಲ್ಲ.
    • ಆ ಆಟಗಾರರ ಬಗ್ಗೆ ಇಲ್ಲಿ ತಿಳಿಯೋಣ
ಕ್ರಿಕೆಟ್‌ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್‌ ಆಗದ ಆಟಗಾರ ಯಾರು ಗೊತ್ತೇ? ಇವರು ಟೀಂ ಇಂಡಿಯಾದ ದಿಗ್ಗಜನೇ... ಧೋನಿಯ ನಕಲು ಎಂದೇ ಖ್ಯಾತಿ ಪಡೆದಾತ title=

cricketers who have never been out in ODI: ಕ್ರಿಕೆಟ್‌ ಚರಿತ್ರೆಯನ್ನು ಗಮನಿಸಿದರೆ ಒಂದಲ್ಲ, ಎರಡಲ್ಲ... ಅದೆಷ್ಟೋ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಕ್ರಿಕೆಟ್‌ ಜಗತ್ತನ್ನು ಆಳಿದ್ದಾರೆ, ಇನ್ನೂ ಕೆಲವರು ಇಂದಿಗೂ ಆಳುತ್ತಿದ್ದಾರೆ. ಅಂತಹ ದಿಗ್ಗಜರಲ್ಲಿ ಎಂತೆಂಥಹದ್ದೋ ದಾಖಲೆಗಳನ್ನು ಬರೆದವರೂ ಇದ್ದಾರೆ. ಆದರೆ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಒಮ್ಮೆಯೂ ಔಟ್‌ ಆಗದ ಕ್ರಿಕೆಟಿಗರ ಬಗ್ಗೆ ನಿಮಗೆ ತಿಳಿದಿದೆಯೇ?

ಇದನ್ನೂ ಓದಿ:  ಈ ತರಕಾರಿಯ ಸಿಪ್ಪೆಯನ್ನು ರುಬ್ಬಿ ರಸವನ್ನು ತಲೆಗೆ ಹಚ್ಚಿದರೆ ಸಾಕು..ಬೇರಿನಿಂದಲೇ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿ ಕೂದಲು

ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ತಮ್ಮ ಏಕದಿನ ವೃತ್ತಿಜೀವನದಲ್ಲಿ ಎಂದಿಗೂ ಔಟ್ ಆಗಿಲ್ಲ. ಆ ಆಟಗಾರರ ಬಗ್ಗೆ ಇಲ್ಲಿ ತಿಳಿಯೋಣ.

ಸೌರಭ್ ತಿವಾರಿ: ಸೌರಭ್ ತಿವಾರಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ, ಅವರ ಉದ್ದನೆಯ ಕೂದಲಿನ ಕಾರಣದಿಂದಾಗಿ ಅವರನ್ನು ಧೋನಿಯ ನಕಲು ಎಂದು ಕರೆಯಲಾಗುತ್ತಿತ್ತು. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನದಿಂದಾಗಿ ತಿವಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರು. ಇನ್ನು ಸೌರಭ್ ತಿವಾರಿ ಟೀಮ್ ಇಂಡಿಯಾ ಪರ ಆಡಿದ್ದು ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಎರಡು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದಷ್ಟೇ ಅಲ್ಲದೆ, ಈ ಎರಡೂ ಇನ್ನಿಂಗ್ಸ್‌ಗಳಲ್ಲಿ ನಾಟ್ ಔಟ್ ಆಗಿದ್ದರು.

ಫೈಜ್ ಫಜಲ್: ಫೈಜ್ ಫಜಲ್ ತಮ್ಮ ದೇಶೀಯ ಕ್ರಿಕೆಟ್ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಇದು ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ತಂದುಕೊಟ್ಟಿತು. ಆದರೆ ರಾಷ್ಟ್ರೀಯ ತಂಡಕ್ಕಾಗಿ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದರು. 2016 ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಫೈಜ್ ಫಜಲ್ ಅಜೇಯ 55 ರನ್ ಗಳಿಸಿದರು. ಆದರೆ ಈ ಅದ್ಭುತ ಅರ್ಧಶತಕದ ಹೊರತಾಗಿಯೂ, ಅವರನ್ನು ತಂಡದಿಂದ ಕೈಬಿಡಲಾಯಿತು, ಇದು ಅವರ ಏಕದಿನ ವೃತ್ತಿಜೀವನದ ನಾಟೌಟ್ ಬ್ಯಾಟರ್ ಆಗಿ ಅಂತ್ಯಗೊಂಡಿತು.

ಇದನ್ನೂ ಓದಿ:  ಪಿಎಫ್ ಸದಸ್ಯರಿಗೆ ಬಂಪರ್ !ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ ಮಾಡಿ ಸರ್ಕಾರದ ಬಹು ದೊಡ್ಡ ನಿರ್ಧಾರ

ಭರತ್ ರೆಡ್ಡಿ: ಭರತ್ ರೆಡ್ಡಿ ಇಂದಿನ ಯುವಕರಲ್ಲಿ ಹೆಚ್ಚು ಪ್ರಸಿದ್ಧರಾಗಿಲ್ಲದಿರಬಹುದು. ಆದರೆ ಅವರು ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡುವ ಅವಕಾಶವನ್ನು ಪಡೆದರು. ಜೊತೆಗೆ ವಿಕೆಟ್ ಕೀಪರ್-ಬ್ಯಾಟರ್ ಆಗಿದ್ದರು. ಭರತ್ ರೆಡ್ಡಿ 1978 ಮತ್ತು 1981 ರ ನಡುವೆ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದರು. ಎರಡು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಎರಡೂ ಬಾರಿಯೂ ಔಟಾಗದೆ ಉಳಿದರು. ಅದರ ನಂತರ, ಅವರನ್ನು ತಂಡದಿಂದ ಕೈಬಿಡಲಾಯಿತು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News