Shiva Mythology: ಶಿವನು ಸ್ಮಶಾನವನ್ನು ಏಕೆ ಕಾಯುತ್ತಿದ್ದಾನೆಂದು ನಿಮಗೆ ಗೊತ್ತಾ? ಪಾರ್ವತಿ ದೇವಿಗೂ ಅದೇ ಪ್ರಶ್ನೆ ಉದ್ಭವಿಸಿತು. ಪಾರ್ವತಿ ಶಿವನನ್ನು ಕೇಳಿದಳು, "ಈ ಭೂಮಿಯ ಮೇಲೆ ಇಷ್ಟೊಂದು ಜಾಗವಿದ್ದರೂ ನೀವು ಈ ಸ್ಮಶಾನದಲ್ಲಿ ಉಳಿಯಲು ಕಾರಣವೇನು?" ಅದಕ್ಕೆ ಶಿವ ಕೊಟ್ಟ ಉತ್ತರ ಕೇಳಿ, ಪಾರ್ವತಿ ಕೂಡ ಮೂಕವಿಸ್ಮಿತಳಾಗಿದ್ದಳು.
ಅದಕ್ಕೆ ಶಿವನು, ಮರಣಾನಂತರ ಎಲ್ಲಾ ಮಾನವರು ಹೋಗಬಹುದಾದ ಏಕೈಕ ಸ್ಥಳವೆಂದರೆ ಸ್ಮಶಾನ ಎಂದು ಹೇಳುತ್ತಾನೆ. ಯಾರೂ ಜೀವಂತವಾಗಿರುವಾಗ ದೇವರ ಬಳಿಗೆ ಬಂದು ನಿಜವಾದ ಪ್ರೀತಿಯಿಂದ ಪ್ರಾರ್ಥಿಸುವುದಿಲ್ಲ.
ಅವರು ನನಗೆ ಇದನ್ನ ಕೊಡು ಅಂತ ಕೇಳ್ತಾರೆ ಅಷ್ಟೇ. ಅವರ ಮರಣದ ನಂತರ, ಅವರ ಸಂಬಂಧಿಕರು ಸ್ವಲ್ಪ ಸಮಯದವರೆಗೆ ಅವರ ಬಗ್ಗೆ ಚಿಂತೆ ಮಾಡುತ್ತಾರೆ. ನಂತರ ಅವರು ಆ ವ್ಯಕ್ತಿಯು ಸಂಗ್ರಹಿಸಿರುವ ಸಂಪತ್ತು ಮತ್ತು ಸೌಕರ್ಯಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ.
ಆಗ ಮಾತ್ರ ಆ ಆತ್ಮಕ್ಕೆ ಅರಿವಾಗುತ್ತದೆ, ನಾವು ನಮ್ಮ ಇಡೀ ಜೀವನವನ್ನು ಸಂಪತ್ತಿನ ಕಡೆಗೆ ಓಡುತ್ತಾ ವ್ಯರ್ಥ ಮಾಡಿದ್ದೇವೆ ಎಂದು. ಆ ಆತ್ಮವು ಮೋಕ್ಷಕ್ಕಾಗಿ ಪುಣ್ಯ ಫಲವನ್ನು ಸಂಗ್ರಹಿಸದೆ ಬಿಟ್ಟಿದ್ದಕ್ಕಾಗಿ ತೊಂದರೆಗೊಳಗಾಗುತ್ತದೆ. ಆದರೆ ನಾನು ಆ ಆತ್ಮವನ್ನು ಒಂಟಿಯಾಗಿ ಬಿಡುವುದಿಲ್ಲ.
ಸಮಾಧಿಯಲ್ಲಿರುವ ಆ ಆತ್ಮಕ್ಕೆ ನಾನು ಸಂಗಾತಿಯಾಗುತ್ತೇನೆ. ಈ ವಿಶ್ವದಲ್ಲಿರುವ ಪ್ರತಿಯೊಂದು ಜೀವಿಗೂ ನಾನು ತಂದೆ. ಹಾಗಾಗಿ ಗಾಯಗೊಂಡು ನೋವಿನಿಂದ ಬಳಲುತ್ತಿರುವ ಮಗುವಿಗೆ ನನ್ನನ್ನು ತಲುಪಲು ಸಹಾಯ ಮಾಡುವುದು ನನ್ನ ಕರ್ತವ್ಯ. ಅದಕ್ಕಾಗಿಯೇ ನಾನು ರುದ್ರಭೂಮಿಯಲ್ಲಿಯೇ ಉಳಿದು ಅಲ್ಲಿನ ದುಃಖಿತ ಆತ್ಮಗಳಿಗೆ ಮಾರ್ಗದರ್ಶಕನಾಗಿದ್ದೇನೆ.
ಈ ವಿಚಾರವನ್ನು ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ನೀಡಿರುವ ಮಾಹಿತಿ ಶಿವ ಪರಮಾತ್ಮನು ತನ್ನ ಭಕ್ತರಿಗಾಗಿ ಮಾಡಿದ ಕೆಲಸವನ್ನು ಎತ್ತಿ ತೋರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಡಿತಿಯೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ ̤
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ