ದೆಹಲಿ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಹೀನಾಯ ಸೋಲಿಗೆ ಕಾರಣವಾಗಿದ್ದೇ ಈ ಮಹಿಳೆ! ಅಂದು ಕೇಜ್ರಿವಾಲ್ ಮನೆಯಲ್ಲೇ ನಡೆದಿತ್ತು ಈಕೆ ಮೇಲೆ ಹಲ್ಲೆ!!

Delhi Assembly Elections: ಶನಿವಾರ ಮತ ಎಣಿಕೆಯ ಸಮಯದಲ್ಲಿ, ಆಮ್ ಆದ್ಮಿ ಪಕ್ಷವು ಹಿಂದುಳಿದಿರುವ ಸೂಚನೆಗಳು ಇದ್ದಾಗ, ಬೆಳಿಗ್ಗೆ 11:40 ರ ಸುಮಾರಿಗೆ, ಸ್ವಾತಿ ಮಲಿವಾಲ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹ್ಯಾಂಡಲ್‌ನಿಂದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

Written by - Bhavishya Shetty | Last Updated : Feb 8, 2025, 01:50 PM IST
    • ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ
    • ಭಾರತೀಯ ಜನತಾ ಪಕ್ಷವು ಬಹುಮತದತ್ತ ಸಾಗುತ್ತಿದೆ.
    • ಆಮ್ ಆದ್ಮಿ ಪಕ್ಷ ಹಿಂದುಳಿದಿರುವಂತೆ ಕಾಣುತ್ತಿದೆ.
ದೆಹಲಿ ಚುನಾವಣೆಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಹೀನಾಯ ಸೋಲಿಗೆ ಕಾರಣವಾಗಿದ್ದೇ ಈ ಮಹಿಳೆ! ಅಂದು ಕೇಜ್ರಿವಾಲ್ ಮನೆಯಲ್ಲೇ ನಡೆದಿತ್ತು ಈಕೆ ಮೇಲೆ ಹಲ್ಲೆ!! title=
Swati Maliwal- Arvind Kejriwal

Delhi Assembly Elections: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇಲ್ಲಿಯವರೆಗೆ ಬಂದಿರುವ ಟ್ರೆಂಡ್‌ಗಳ ಪ್ರಕಾರ, ಭಾರತೀಯ ಜನತಾ ಪಕ್ಷವು ಬಹುಮತದತ್ತ ಸಾಗುತ್ತಿದೆ. ಆಮ್ ಆದ್ಮಿ ಪಕ್ಷ ಹಿಂದುಳಿದಿರುವಂತೆ ಕಾಣುತ್ತಿದೆ. ಸುಮಾರು 19 ವರ್ಷಗಳ ನಂತರ ಬಿಜೆಪಿ ಅಧಿಕಾರದತ್ತ ಸಾಗುತ್ತಿರುವಂತೆ ಕಾಣುತ್ತಿದೆ. ಈ ಫಲಿತಾಂಶದಿಂದಾಗಿ ಒಂದೆಡೆ ಬಿಜೆಪಿ ಪಾಳಯದಲ್ಲಿ ಸಂತೋಷದ ಅಲೆಯಿದ್ದರೆ, ಮತ್ತೊಂದೆಡೆ ಆಮ್ ಆದ್ಮಿ ಪಕ್ಷದಲ್ಲಿ ನಿರಾಶೆ ಇದೆ. ಆದರೆ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಈ ಸಂಭವನೀಯ ಫಲಿತಾಂಶದಿಂದ ಸಂತೋಷಗೊಂಡಂತೆ ತೋರುತ್ತಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳೇ ಗುಡ್‌ ನ್ಯೂಸ್‌... ಫೆಬ್ರವರಿ 14 ರಂದು ಈ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ: ಕಾರಣವೇನು?

ಶನಿವಾರ ಮತ ಎಣಿಕೆಯ ಸಮಯದಲ್ಲಿ, ಆಮ್ ಆದ್ಮಿ ಪಕ್ಷವು ಹಿಂದುಳಿದಿರುವ ಸೂಚನೆಗಳು ಇದ್ದಾಗ, ಬೆಳಿಗ್ಗೆ 11:40 ರ ಸುಮಾರಿಗೆ, ಸ್ವಾತಿ ಮಲಿವಾಲ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹ್ಯಾಂಡಲ್‌ನಿಂದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಫೋಟೋದಲ್ಲಿ ಒಬ್ಬ ಮಹಿಳೆಯ ಬಟ್ಟೆ ಬಿಚ್ಚುತ್ತಿರುವುದು ಕಾಣಿಸುತ್ತಿದೆ. ಫೋಟೋ ನೋಡಿದಾಗ ಈ ಚಿತ್ರ ಕೌರವ ಸಭೆಯಿಂದ ಸ್ಫೂರ್ತಿ ಪಡೆದಿದೆ ಎಂದು ಊಹಿಸಲಾಗುತ್ತಿದೆ. ಅದು ದ್ರೌಪದಿಯ ವಸ್ತ್ರಾಪಹರಣದ ಚಿತ್ರದಂತೆ ಕಾಣುತ್ತದೆ.

ಇನ್ನು ಈ ಸಂದರ್ಭದಲ್ಲೇ ಸ್ವಾತಿ ಮಲಿವಾಲ್ ಈ ಚಿತ್ರವನ್ನು ಏಕೆ ಪೋಸ್ಟ್ ಮಾಡಿದರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಸ್ವಾತಿ ಮಲಿವಾಲ್ ಏನನ್ನೂ ಬರೆದಿಲ್ಲ, ಆದರೆ ಇದು ಹಿಂದೊಮ್ಮೆ ನಡೆದಿದ್ದ ಘಟನೆಗೆ ಹೋಲಿಕೆಯಾದಂತಿದೆ. ಅರವಿಂದ್ ಕೇಜ್ರಿವಾಲ್ ಅವರ ಮುಖ್ಯಮಂತ್ರಿ ನಿವಾಸದಲ್ಲಿ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ಹಲ್ಲೆ ಆರೋಪ ಮಾಡಿದ್ದರು.

ದೆಹಲಿ ವಿಧಾನಸಭಾ ಚುನಾವಣೆಯ ಸದ್ದು ಕಡಿಮೆಯಾದ ನಂತರ, ಇಂದು ಮತ ಎಣಿಕೆ ನಡೆಯುತ್ತಿದೆ. ಇಲ್ಲಿಯವರೆಗೆ ಹೊರಹೊಮ್ಮಿರುವ ಟ್ರೆಂಡ್‌ಗಳಲ್ಲಿ, ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಎಎಪಿ ತುಂಬಾ ಹಿಂದುಳಿದಿದೆ. ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಆ್ಯಂಕರ್ ಅನುಶ್ರೀ ಜೀವನದಲ್ಲಿ ಭೀಕರ ದುರಂತ! ಆಗಿದ್ದಾದರೂ ಏನು?

ಇದರ ಜೊತೆಗೆ ಸ್ವಾತಿ ಮಲಿವಾಲ್ ಮತ್ತೊಂದು ಪೋಸ್ಟ್‌ ಮಾಡಿದ್ದು, "ಅಹಂಕಾರ ರಾವಣನನ್ನೂ ಬಿಟ್ಟಿಲ್ಲ" ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಆರಂಭವಾಗಿದೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News