Expensive Cow : ಭಾರತದಲ್ಲಿ ಹಸುವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಅಲ್ಲದೆ, ಗೋವನ್ನು ತಾಯಿ ಅಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ವಿದೇಶಗಳಲ್ಲಿ ಕೆಲವು ಬಗೆಯ ಹಸುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇತ್ತೀಚೆಗೆ ಬ್ರೆಜಿಲ್ನಲ್ಲಿ ಸುಂದರವಾದ, ಶಕ್ತಿಶಾಲಿ ಬಿಳಿ ಹಸುವನ್ನು ಮಾರಾಟ ಮಾಡಲಾಯಿತು. ಅದರ ಬೆಲೆ ಕೇಳಿದ್ರೆ ನೀವು ತಲೆ ತಿರುಗಿ ಬೀಳ್ತಿರಾ..
ಇದು ನೆಲ್ಲೂರ್ ತಳಿಯ ಹಸು.. ಈ ಗೋವು ತುಂಬಾ ದೃಢ ಮತ್ತು ಬಲಶಾಲಿಯಾಗಿರುತ್ತದೆ. ವಿಶೇಷ ಅಂದ್ರೆ ಹೆಚ್ಚಿನ ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ..
ಈ ಹಸುವಿನ ಚರ್ಮವು ಶಾಖವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ..
ಈ ಹಸು ತನ್ನ ತೂಕ, ಬಲವಾದ ಸ್ನಾಯುಗಳು, ಸೌಂದರ್ಯ ಮತ್ತು ಚರ್ಮದಿಂದಾಗಿ ಬಹಳ ಜನಪ್ರಿಯವಾಗಿದೆ.
ಬ್ರೆಜಿಲ್ನ ಈ ಹಸುವಿನ ಹೆಸರು ವಿಯಾಟಿನಾ 19. ಇದು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಅತ್ಯಂತ ದುಬಾರಿ ಹಸು ಎಂದು ಗುರುತಿಸಲ್ಪಟ್ಟಿದೆ.
ಈ ನೆಲ್ಲೂರು ಹಸು 1101 ಕೆಜಿ ತೂಗುತ್ತದೆ. ಉಳಿದ ಹಸುಗಳಿಗಿಂತ 2 ಪಟ್ಟು ಹೆಚ್ಚು ತೂಕ. ಈ ಹಸು ನೋಡಲು ತುಂಬಾ ಸುಂದರವಾಗಿದೆ.
ಇತ್ತೀಚೆಗೆ, ಬ್ರೆಜಿಲ್ನ ಮಿನಾಸ್ ಗೆರೈಸ್ ರಾಜ್ಯದ ನೆಲ್ಲೂರು ತಳಿಯ ಹಸು ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿದೆ. ಈ ಹಸು 31 ಕೋಟಿಗೆ ಮಾರಾಟವಾಯಿತು!