Uttar pradesh Gang Rape: ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ 21 ವರ್ಷದ ಯುವತಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ ತನ್ನ ಸೊಸೆಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲು ಇಬ್ಬರು ಹಂತಕರನ್ನು ನೇಮಿಸಿಕೊಳ್ಳಲು ಬ್ಯಾಂಕಿನಿಂದ 40,000 ರೂ. ಸಾಲ ಪಡೆದಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಹಂತಕರು ತಲೆಮರೆಸಿಕೊಂಡಿದ್ದಾರೆ.
ಜನವರಿ 21ರಂದು ಮೀರತ್‌ನ ನಾನು ಕಾಲುವೆ (Nanu canal) ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಆಶಿಶ್ ತನ್ನ ಸಹಚರರಾದ ಶುಭಂ ಮತ್ತು ದೀಪಕ್ ಜೊತೆಗೂಡಿ ಸೊಸೆಯನ್ನ ಮನೆಯಿಂದ ಹೊರಗೆ ಕರೆದುಕೊಂಡಿದ್ದ. ಬಳಿಕ ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಂದಿದ್ದಾನೆ. ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ ಆರೋಪಿಗಳು ಆಕೆಯ ದೇಹವನ್ನ ಸುಟ್ಟುಹಾಕಿದ್ದಾರೆ. ಸದ್ಯ ಆಶಿಶ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಇಬ್ಬರು ಸಹಚರರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ಖಾಕಿಪಡೆ ಬಲೆ ಬಿಸಿದೆ.
ಇದನ್ನೂ ಓದಿ: ಟಾಕೀಸ್ ನಲ್ಲಿ ಮಹಾತ್ಮ ಗಾಂಧೀಜಿ ನೋಡಿದ ಏಕೈಕ ಸಿನಿಮಾ ಯಾವುದು ಗೊತ್ತಾ..?
ಈ ಬಗ್ಗೆ ಮುಜಫರ್‌ನಗರ ಎಸ್ಪಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಮಾಹಿತಿ ನೀಡಿದ್ದು, ʼಆಶಿಶ್ ತನ್ನ ಸೊಸೆಯನ್ನು ಕೊನೆಯ ಬಾರಿಗೆ ಜನವರಿ 21ರಂದು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಆಶಿಶ್ ಎರಡು ವರ್ಷಗಳಿಂದ ತನ್ನ ಪತ್ನಿಯ ತಂಗಿಯೊಂದಿಗೆ ಸಂಬಂಧ ಹೊಂದಿದ್ದದ್ದನಂತೆʼ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಜೊತೆಗೆ ಏಕಾಂತದಲ್ಲಿರುವ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಆಕೆ ತನ್ನನ್ನ ಬ್ಲ್ಯಾಕ್‌ಮೇಲೆ ಮಾಡುತ್ತಿದ್ದಳು. ತಮ್ಮಿಬ್ಬರ ಅಕ್ರಮ ಸಂಬಂಧ ಎಲ್ಲಿ ತನ್ನ ಹೆಂಡತಿಗೆ ಗೊತ್ತಾಗುತ್ತದೋ ಅಂತಾ ಹೆದರಿ ಆಕೆಯನ್ನು ಕೊಲ್ಲಲು ಪ್ಲ್ಯಾನ್ ಮಾಡಿದೆ. ಹೀಗಾಗಿ ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕೊಲ್ಲಲು ನಿರ್ಧರಿಸಿದೆ. ಬ್ಯಾಂಕಿನಿಂದ 40,000 ರೂ. ಸಾಲ ಪಡೆದು ಸ್ನೇಹಿತರಿಗೆ ಮುಂಗಡವಾಗಿ 10,000 ರೂ. ನೀಡಿದ್ದೆ. ಕೊಲೆಯ ನಂತರ 20,000 ರೂ. ನೀಡುವುದಾಗಿ ಭರವಸೆ ನೀಡಿದ್ದೆ ಅಂತಾ ಆಶಿಶ್ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ಮೊದಲು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ನಂತರ ದುಪಟ್ಟಾದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ದೇಹವನ್ನು ಸುಟ್ಟು ಹಾಕಿದ್ದಾರೆ. ಆಕೆಯ ಒಳ ಉಡುಪು ಹಾಗೆಯೇ ಇದ್ದು, ಇತರ ಬಟ್ಟೆಗಳು ಸುಟ್ಟು ಹೋಗಿರುವುದು ಲೈಂಗಿಕ ದೌರ್ಜನ್ಯದ ಅನುಮಾನ ಹುಟ್ಟುಹಾಕಿತ್ತು. ಇದೇ ವೇಳೆ ಎರಡು ಕಾಂಡೋಮ್ ಪ್ಯಾಕೆಟ್‌ಗಳು ಸಹ ಪತ್ತೆಯಾಗಿದ್ದವು. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ. ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಮೌನಿ ಬಾಬಾ ಜೀವಂತ ಸಮಾಧಿ..! ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಕೇಳಿದ್ರೆ ಶಾಕ್ ಆಗ್ತಿರಾ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.