Vimi tragic life story: ನಟಿ ವಿಮಿ ಚಿತ್ರರಂಗದಲ್ಲಿ ಅಲ್ಪಾವಧಿಯಲ್ಲಿಯೇ ಖ್ಯಾತಿ, ಸಂಪತ್ತು ಮತ್ತು ಯಶಸ್ಸನ್ನು ಗಳಿಸಿದ ಹೀರೋಯಿನ್. ಆದರೆ ಅವರು ಎತ್ತರಕ್ಕೆ ತಲುಪಿದಷ್ಟೇ ವೇಗವಾಗಿ ಕಣ್ಮರೆಯಾದರು. ಒಂದು ಕಾಲದಲ್ಲಿ ನಟಿ ವಿಮಿ ಬಾಲಿವುಡ್‌ನಲ್ಲಿ ತುಂಬಾ ಜನಪ್ರಿಯರಾಗಿದ್ದರು. ಎಲ್ಲರೂ ಅವಳನ್ನು ಒಂದು ಬಾರಿ ನೋಡಲು ಹಾತೊರೆಯುತ್ತಿದ್ದರು.
ದಿ ಜರ್ನಿ ಆಫ್ ವಿಮಿ
ನಟಿ ವಿಮಿ ರಾತ್ರೋರಾತ್ರಿ ಬಾಲಿವುಡ್ ಸೂಪರ್ ಸ್ಟಾರ್ ಆದರು. ಬಾಲಿವುಡ್‌ನ ಬೇಡಿಕೆಯ ನಾಯಕಿಯರಲ್ಲಿ ಒಬ್ಬರಾಗಿದ್ದ ಕಾಲವೊಂದಿತ್ತು. ವಿಮಿ ಆ ಕಾಲದ ಸೂಪರ್‌ಸ್ಟಾರ್‌ಗಳಾದ ಸುನಿಲ್ ದತ್, ಶಶಿ ಕಪೂರ್ ಮತ್ತು ರಾಜ್‌ಕುಮಾರ್ ಅವರೊಂದಿಗೆ ಕೆಲಸ ಮಾಡಿದರು. ಬಿ.ಆರ್. ಚೋಪ್ರಾ ಅವರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಹಮ್ರಾಜ್ ಸೂಪರ್ ಡೂಪರ್ ಹಿಟ್ ಪಡೆದದ್ದೇ ತಡ ನಟಿ ವಿಮಿ ರಾತ್ರೋ ರಾತ್ರಿ ಸ್ಟಾರ್ ಆದಳು. ಈ ಚಿತ್ರದಲ್ಲಿ ವಿಮಿ ಎದುರು ಆ ಕಾಲದ ಸೂಪರ್‌ಸ್ಟಾರ್‌ಗಳಾದ ಸುನಿಲ್ ದತ್, ರಾಜ್ ಕುಮಾರ್ ಮತ್ತು ಬಲರಾಜ್ ಸಾಹ್ನಿ ನಟಿಸಿದ್ದರು. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈ ಚಿತ್ರವು ರಾಷ್ಟ್ರೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಹಮ್ರಾಜ್ ಚಿತ್ರಕ್ಕಾಗಿ ಬಿ.ಆರ್. ಚೋಪ್ರಾ ಸಂಪೂರ್ಣವಾಗಿ ವಿಶಿಷ್ಟ ಮತ್ತು ಆಕರ್ಷಕವಾಗಿರುವ ಹೊಸ ಮುಖವನ್ನು ಯೋಜಿಸುತ್ತಿದ್ದರು. ತಮ್ಮ ಚಿತ್ರದಲ್ಲಿ ಹೊಸಬರನ್ನು ಆಯ್ಕೆ ಮಾಡಲು ಬಯಸಿದ್ದರು ಮತ್ತು ಇದಕ್ಕಾಗಿ ಅವರು ಅನೇಕ ಹುಡುಗಿಯರ ಆಡಿಷನ್‌ಗಳನ್ನು ಸಹ ತೆಗೆದುಕೊಂಡರು. ವಿಮಿ ಕೊನೆಗೇ ಈ ಸಿನಿಮಾಗೆ ಸೆಲೆಕ್ಟ್ ಆದರು. ಅಚ್ಚರಿಯ ವಿಷಯವೆಂದರೆ ವಿಮಿಯನ್ನು ಭೇಟಿಯಾದ ನಂತರ, ಚೋಪ್ರಾ ಮೊದಲ ನೋಟದಲ್ಲೇ ಅವಳನ್ನು ತಮ್ಮ ಚಿತ್ರದಲ್ಲಿನ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡರು. ಯಾವುದೇ ವಿಳಂಬವಿಲ್ಲದೆ ಅವರು ಹಮ್ರಾಜ್ ಚಿತ್ರಕ್ಕಾಗಿ ವಿಮಿ ಬಳಿ ಸಹಿ ಹಾಕಿಸಿದರು. ಹಮ್ರಾಜ್ ಚಿತ್ರ ವಿಮಿಯ ವೃತ್ತಿಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತಾಯಿತು. ಅವರು ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು.
ವಿಮಿಯ ತಾರಾಪಟ್ಟ
ಹಮ್ರಾಜ್ ಚಿತ್ರದ ನಂತರ ಜನರು ಎಲ್ಲೆಡೆ ವಿಮಿಯ ಬಗ್ಗೆ ಮಾತ್ರ ಚರ್ಚಿಸಲು ಪ್ರಾರಂಭಿಸಿದರು. ಪರಿಸ್ಥಿತಿ ಹೇಗಿತ್ತೆಂದರೆ ಪ್ರತಿ ಪತ್ರಿಕೆಯ ಮುಖಪುಟದಲ್ಲಿ ವಿಮಿ ಫೋಟೋ ಕಾಣಿಸಿಕೊಂಡಿತ್ತು. ಆ ಕಾಲದಲ್ಲಿ ಚಲನಚಿತ್ರ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಳ್ಳುವುದೇ ದೊಡ್ಡ ವಿಷಯವೆಂದು ಪರಿಗಣಿಸಲಾಗುತ್ತಿತ್ತು. ಪತ್ರಿಕೆಯ ಮುಖಪುಟದಲ್ಲಿ ವಿಮಿ ಕಾಣಿಸಿಕೊಂಡದ್ದು ಅವಳು ದೊಡ್ಡ ತಾರೆಯಾಗಿದ್ದಾಳೆ ಎಂಬುದರ ಸೂಚನೆಯಾಗಿತ್ತು. ರಾತ್ರೋರಾತ್ರಿ ಸ್ಟೈಲ್ ಐಕಾನ್ ಎಂದು ಪರಿಗಣಿಸಲ್ಪಟ್ಟರು.
ವಿಮಿಯ ಪತನ
ಹಮ್ರಾಜ್ ಚಿತ್ರದ ಮೂಲಕ ವಿಮಿ ಒಂದೇ ದಿನದಲ್ಲಿ ತಾರಾಪಟ್ಟ ಗಳಿಸಿದಷ್ಟೇ ಬೇಗ ಪತನವನ್ನು ಎದುರಿಸಬೇಕಾಯಿತು. ವಿಮಿ ಕೇವಲ ಒಂದು ಚಿತ್ರಕ್ಕಾಗಿ ಬಾಲಿವುಡ್‌ಗೆ ಬಂದು ನಂತರ ಶಾಶ್ವತವಾಗಿ ಅಜ್ಞಾತದ ಕತ್ತಲೆಯಲ್ಲಿ ಕಳೆದುಹೋದಳು ಎಂದು ಹೇಳಬಹುದು. ಹಮ್ರಾಜ್ ಚಿತ್ರದ ನಂತರ ಅವರು ಕೆಲಸ ಮಾಡಲಿಲ್ಲ ಎಂದಲ್ಲ. ಹಮ್ರಾಜ್ ಚಿತ್ರದ ನಂತರ ಆಬ್ರೂ, ವಚನ್ ಮತ್ತು ಪತಂಗ ಸೇರಿದಂತೆ ಮೂರು ಚಿತ್ರಗಳನ್ನು ಮಾಡಿದರು. ಆದರೆ ಎಲ್ಲಾ ಚಿತ್ರಗಳು ಸೋಲಾಗಿ ಪರಿಣಮಿಸಿದವು. ಹೊಸಬ ದೀಪಕ್ ಕುಮಾರ್ ಆಬ್ರೂ ಚಿತ್ರದಲ್ಲಿ ಇದ್ದರು, ಆದರೆ ಆ ಚಿತ್ರ ಚೆನ್ನಾಗಿ ಕೆಲಸ ಮಾಡಲಿಲ್ಲ. ಇದಾದ ನಂತರ, ವಿಮಿ ಶಶಿ ಕಪೂರ್ ಜೊತೆ ಎರಡು ಚಿತ್ರಗಳನ್ನು ಮಾಡಿದರು, ಒಂದು ಪತಂಗ ಮತ್ತು ಇನ್ನೊಂದು ವಚನ್. ಈ ಎರಡೂ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಲಿಲ್ಲ.
ವಿಮಿಯ ವೃತ್ತಿಜೀವನ ಹೇಗೆ ಕೊನೆಗೊಂಡಿತು?
ವಿಮಿಯ ಚಿತ್ರಗಳು ಸೋಲಲು ಪ್ರಾರಂಭಿಸಿದ ತಕ್ಷಣ, ಅವಳಿಗೆ ಸಿನಿಮಾ ಆಫರ್ ಬರುವುದು ನಿಂತು ಹೋಯಿತು. ಬಿ.ಆರ್. ಚೋಪ್ರಾ ಕೂಡ ಅವರಿಗೆ ತಮ್ಮ ಯಾವುದೇ ಚಿತ್ರಗಳಲ್ಲಿ ಅವಕಾಶ ನೀಡಲಿಲ್ಲ. ವಿಮಿಯ ಕರಿಯರ್ ಕೆಟ್ಟ ಸ್ಥಿತಿ ತಲುಪಿದ್ದಾಗಲೇ ತನ್ನ ಪತಿ ಶಿವ್ ಅಗರ್ವಾಲ್ ಅವರಿಂದ ಬೇರ್ಪಟ್ಟಳು.
ವಿಮಿಯ ಜೀವನದ ಅತಿ ದೊಡ್ಡ ತಪ್ಪು
ಶಿವ್ ಕಲ್ಕತ್ತಾದ ಉದ್ಯಮಿಯಾಗಿದ್ದರು. ಪತಿ ಶಿವ್ ನಿಂದ ಬೇರ್ಪಟ್ಟ ನಂತರ ವಿಮಿ ಜಾಲಿ ಎಂಬ ವ್ಯಕ್ತಿಯೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಜಾಲಿ ಒಬ್ಬ ದಲ್ಲಾಳಿಯಾಗಿದ್ದ ಎಂದು ಹೇಳಲಾಗುತ್ತದೆ. ತನ್ನ ಗಂಡನನ್ನು ಬಿಟ್ಟು ಜಾಲಿ ಜೊತೆ ಹೋಗಿದ್ದು ವಿಮಿ ಮಾಡಿದ ದೊಡ್ಡ ತಪ್ಪು.
ಇದನ್ನೂ ಓದಿ: 15 ನೇ ವಯಸ್ಸಿಗೆ ಮದುವೆ, 17 ವರ್ಷಕ್ಕೆ ತಾಯಿ.. ಆದರೂ ಆಲಿಯಾ, ರಶ್ಮಿಕಾಗಿಂತಲೂ ಫೇಮಸ್ ಈ ಸ್ಟಾರ್ ನಟಿ !
ವಿಮಿ ಜೀವನದಲ್ಲಿ ಜಾಲಿಯ ಆಗಮನವು ದೊಡ್ಡ ಬದಲಾವಣೆಯಾಗಿ ಪರಿಣಮಿಸಿತು. ಜಾಲಿ ವಿಮಿಯನ್ನು ಎಷ್ಟರ ಮಟ್ಟಿಗೆ ಹಾಳು ಮಾಡಿದನೆಂದರೆ ಅವಳು ಮತ್ತೆಂದೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಜಾಲಿಯಿಂದಾಗಿ ವ್ಯವಹಾರ ಮತ್ತು ಆಸ್ತಿಯ ಜೊತೆಗೆ ಉದ್ಯಮವನ್ನು ಸಹ ಮುಚ್ಚಬೇಕಾಯಿತು. ಪರಿಸ್ಥಿತಿ ಎಷ್ಟು ಹದಗೆಟ್ಟಿತು ಎಂದರೆ ಜೀವನ ನಿಭಾಯಿಸಲು ತೋಚದೇ, ಮಾನಸಿಕವಾಗಿ ಕುಗ್ಗಿದ ವಿಮಿ ಮದ್ಯಪಾನವನ್ನು ಆಶ್ರಯಿಸಿದಳು. ವಿಮಿ ಹಣವಿಲ್ಲದೇ ಪರದಾಡುತ್ತ ಮೈ ಮಾರಿಕೊಳ್ಳುವ ಹಂತ ತಲುಪಿದಳು ಎಂದು ಕೆಲವರು ಹೇಳುತ್ತಾರೆ. ಆದರೆ ಇದರ ಸತ್ಯಾಸತ್ಯತೆ ತಿಳಿದಿಲ್ಲ.
34 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದಳು
ಮದ್ಯದ ಚಟದಿಂದ ವಿಮಿ ಆರೋಗ್ಯ ಹದಗೆಟ್ಟಿತು. 1943 ರಲ್ಲಿ ಪಂಜಾಬಿ ಕುಟುಂಬದಲ್ಲಿ ಜನಿಸಿದ ವಿಮಿ ಕೇವಲ 34 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಪರಿಸ್ಥಿತಿ ಹೇಗಿತ್ತೆಂದರೆ ಅವಳು ಸಾಯುವ ಸಮಯದಲ್ಲಿ ಅವಳೊಂದಿಗೆ ಸ್ವಂತವರು ಯಾರೂ ಇರಲಿಲ್ಲ. ಗಂಡನಾಗಲಿ ಮಕ್ಕಳಾಗಲಿ ಇರಲಿಲ್ಲ. ಮೃತ ದೇಹವನ್ನು ಬಂಡಿಯಲ್ಲಿ ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಏಕಾಏಕಿ ಆಸ್ಪತ್ರೆಗೆ ದಾಖಲು!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.