Daily GK Quiz: ಕರ್ನಾಟಕದ ಚಿರಾಪುಂಜಿ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ? ಯೋಚಿಸಿ ಉತ್ತರಿಸಿ

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.  

Written by - Puttaraj K Alur | Last Updated : Jan 28, 2025, 04:15 PM IST
  • ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಎಲ್ಲಿದೆ?
  • ಮಂಗಳೂರು ಬಂದರು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
  • ಗಡಿ ಜಿಲ್ಲೆ ಚಾಮರಾಜನಗರ ಯಾವುದಕ್ಕೆ ಪ್ರಸಿದ್ಧವಾಗಿದೆ?
Daily GK Quiz: ಕರ್ನಾಟಕದ ಚಿರಾಪುಂಜಿ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ? ಯೋಚಿಸಿ ಉತ್ತರಿಸಿ title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ.  ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.‌

ಪ್ರಶ್ನೆ 1: ಗಡಿ ಜಿಲ್ಲೆ ಚಾಮರಾಜನಗರ ಯಾವುದಕ್ಕೆ ಪ್ರಸಿದ್ಧವಾಗಿದೆ?

ಉತ್ತರ: ರೇಷ್ಮೆ ಕೃಷಿ

ಪ್ರಶ್ನೆ 2: ಮಂಗಳೂರು ಬಂದರು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?

ಉತ್ತರ: ದಕ್ಷಿಣ ಕನ್ನಡ

ಪ್ರಶ್ನೆ 3: ಕರ್ನಾಟಕದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಎಲ್ಲಿದೆ?

ಉತ್ತರ: ಕೈಗಾ

ಪ್ರಶ್ನೆ 4: 1934ರಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಟಾಕಿ ಚಿತ್ರ ಯಾವುದು?

ಉತ್ತರ: ಸತಿ ಸುಲೋಚನಾ

ಪ್ರಶ್ನೆ 5: ಶ್ರವಣಬೆಳಗೊಳ ಪಟ್ಟಣವು ಯಾವ ಧರ್ಮದ ಪ್ರಮುಖ ಯಾತ್ರಾ ಕೇಂದ್ರವಾಗಿದೆ?

ಉತ್ತರ: ಜೈನರು

ಇದನ್ನೂ ಓದಿ: ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು?

ಪ್ರಶ್ನೆ 6: ಕರ್ನಾಟಕದ ಯಾವ ಸ್ಥಳವನ್ನು ಸಿಲ್ಕ್ ಟೌನ್ ಎಂದು ಕರೆಯಲಾಗುತ್ತದೆ..?

ಉತ್ತರ: ರಾಮನಗರ

ಪ್ರಶ್ನೆ 7: ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?

ಉತ್ತರ: ಪುರಂದರ ದಾಸ

ಪ್ರಶ್ನೆ 8: ರಾಮದೇವರಬೆಟ್ಟ ಅಭಯಾರಣ್ಯದಲ್ಲಿ ಯಾವ ಪಕ್ಷಿಯನ್ನು ಸಂರಕ್ಷಿಸಲಾಗುತ್ತಿದೆ?

ಉತ್ತರ: ರಣಹದ್ದು

ಪ್ರಶ್ನೆ 9: ಕರ್ನಾಟಕದ ಚಿರಾಪುಂಜಿ ಎಂದು ಯಾವ ಸ್ಥಳವನ್ನು ಕರೆಯಲಾಗುತ್ತದೆ?

ಉತ್ತರ: ಆಗುಂಬೆ

ಪ್ರಶ್ನೆ 10: ಬೆಂಗಳೂರು ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿದೆ?

ಉತ್ತರ: 920ಮೀ

ಇದನ್ನೂ ಓದಿ: ಕೇಂದ್ರದಿಂದ ಗರ್ಭಿಣಿಯರಿಗೆ ಮಾತೃ ವಂದನಾ ಯೋಜನೆ! 2 ಮಕ್ಕಳಿಗೆ 11 ಸಾವಿರ ಸಹಾಯಧನ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News