UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ; ಫೆಬ್ರವರಿ 1ರಿಂದ ಈ ರೀತಿಯ ಪೇಮೆಂಟ್‌ಗಳು ವರ್ಕ್‌ ಆಗಲ್ಲ

UPI New Rule:  ಭಾರತದಿಂದ ವಿದೇಶಗಳಿಗೆ ಡಿಜಿಟಲ್ ಪಾವತಿಯ ಪ್ರಮುಖ ಸಾಧನವಾಗಿ ಯುಪಿಐ ಈಗ ಮಾರ್ಪಟ್ಟಿದೆ. ಇದನ್ನು ಇ-ರಿಕ್ಷಾಗಳು, ದಿನಸಿ ಅಂಗಡಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶ್ರೀಲಂಕಾ, ಭೂತಾನ್, ಯುಎಇ, ಮಾರಿಷಸ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ.

Written by - Bhavishya Shetty | Last Updated : Jan 30, 2025, 07:50 PM IST
    • ರಾಷ್ಟ್ರೀಯ ಪಾವತಿ ನಿಗಮ ಹೊಸ ನಿಯಮವನ್ನು ಜಾರಿಗೆ ತಂದಿದೆ
    • ವಿಶೇಷ ಅಕ್ಷರಗಳನ್ನುಹೊಂದಿರುವ ಐಡಿಗಳನ್ನು ಮಾನ್ಯವೆಂದು ಪರಿಗಣಿಸಲಾಗವುದಿಲ್ಲ
    • ಈ ಹೊಸ ನಿಯಮವು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ.
UPI ಪೇಮೆಂಟ್‌ನಲ್ಲಿ ಮಹತ್ವದ ಬದಲಾವಣೆ; ಫೆಬ್ರವರಿ 1ರಿಂದ ಈ ರೀತಿಯ ಪೇಮೆಂಟ್‌ಗಳು ವರ್ಕ್‌ ಆಗಲ್ಲ title=
UPI Payment

UPI New Rule: ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ, ವಿಶೇಷ ಅಕ್ಷರಗಳನ್ನು (@, #, $, %, ಮತ್ತು ಇತ್ಯಾದಿ) ಹೊಂದಿರುವ UPI ಐಡಿಗಳನ್ನುಇನ್ನು ಮುಂದೆ ಮಾನ್ಯವೆಂದು ಪರಿಗಣಿಸಲಾಗವುದಿಲ್ಲ. ಅಂದರೆ ಕೇವಲ ಅಕ್ಷರ ಮತ್ತು ಸಂಖ್ಯೆಗಳನ್ನು ಮಾತ್ರ ಬಳಸಿರುವ UPI ಐಡಿಗಳನ್ನು ಮಾತ್ರ ಮಾನ್ಯ ಎನ್ನಲಾಗುತ್ತದೆ. ಈ ಹೊಸ ನಿಯಮವು ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ.

ಇದನ್ನೂ ಓದಿ: ಈ ರಾಶಿಯವರನ್ನು 19 ವರ್ಷ ನಿರಂತರ ಹರಸುವನು ಶನಿ ಮಹಾತ್ಮ ! ಶನಿ ದೇವನ ಕೃಪೆಯಿಂದಲೇ ಪ್ರಾಪ್ತಿಯಾಗುವುದು ಅಷ್ಟೈಶ್ವರ್ಯ! ಒಲಿದು ಬರುವುದು ಕಾರು, ಬಂಗಲೆ ಖರೀದಿ ಯೋಗ !

ಭಾರತದಿಂದ ವಿದೇಶಗಳಿಗೆ ಡಿಜಿಟಲ್ ಪಾವತಿಯ ಪ್ರಮುಖ ಸಾಧನವಾಗಿ ಯುಪಿಐ ಈಗ ಮಾರ್ಪಟ್ಟಿದೆ. ಇದನ್ನು ಇ-ರಿಕ್ಷಾಗಳು, ದಿನಸಿ ಅಂಗಡಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶ್ರೀಲಂಕಾ, ಭೂತಾನ್, ಯುಎಇ, ಮಾರಿಷಸ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, UPI ವಹಿವಾಟುಗಳನ್ನು ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಿಸಲು ಈ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ನಿಮ್ಮ UPI ಐಡಿಯಲ್ಲಿ ವಿಶೇಷ ಅಕ್ಷರಗಳಿದ್ದರೆ, ಅಂದರೆ @, $, #,^,%,* ಸೇರಿದಂತೆ ಇಂತಹ ಯಾವುದೇ ಚಿಹ್ನೆಗಳನ್ನು ಬಳಸಬಾರದು ಎಂದು ಎನ್‌ಪಿಸಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಇಂತಹ ಚಿಹ್ನೆ ಇದ್ದಲ್ಲಿ ಫೆಬ್ರವರಿ 1 ರ ನಂತರ ನಿಮ್ಮ ವಹಿವಾಟನ್ನು ನಿರ್ಬಂಧಿಸಬಹುದು.

ಇದನ್ನೂ ಓದಿ: ಫೆಬ್ರವರಿಯಲ್ಲಿ ಗುರು ಸಂಚಾರ: ಬೃಹಸ್ಪತಿ ನಡೆಯಿಂದ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳ ಮೇಲೆ ಕಷ್ಟ, ಕೋಲಾಹಲ

UPI ಬಳಕೆದಾರರು ಏನು ಮಾಡಬೇಕು?
ನಿಮ್ಮ ಯುಪಿಐ ಐಡಿಯಲ್ಲಿ ಯಾವುದೇ ವಿಶೇಷ ಅಕ್ಷರವಿದ್ದರೆ, ಅದನ್ನು ಆದಷ್ಟು ಬೇಗ ಬದಲಾಯಿಸಿ. ನಿಮ್ಮ ಬ್ಯಾಂಕ್ ಅಥವಾ ಪಾವತಿ ಅಪ್ಲಿಕೇಶನ್ ಅನ್ನು ಸಂಪರ್ಕಿಸಿ ಮತ್ತು ಹೊಸ ಆಲ್ಫಾನ್ಯೂಮರಿಕ್ ಐಡಿಯನ್ನು ರಚಿಸಿ, ಇದರಿಂದ ಫೆಬ್ರವರಿ 1 ರ ನಂತರವೂ ನಿಮ್ಮ UPI ವಹಿವಾಟುಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News