ನಿತ್ಯ ದೇಹದ ಈ 'ಅಂಗ'ಕ್ಕೆ ಒಂದು ಹನಿ ತುಪ್ಪ ಸವಾರಿ ಮಸಾಜ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಗೊತ್ತಾ..!

Ayurvedic Padabhyanga: ಆಹಾರದ ರುಚಿ ಹೆಚ್ಚಿಸುವ ತುಪ್ಪವು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಉತ್ತಮ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. 

Written by - Yashaswini V | Last Updated : Jan 23, 2025, 02:44 PM IST
  • ತುಪ್ಪವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.
  • ತುಪ್ಪ ತಿನ್ನುವುದರಿಂದ ಮಾತ್ರವಲ್ಲ ಇದನ್ನು ದೇಹಕ್ಕೆ ಲೇಪಿಸುವುದರಿಂದಲೂ ಆರೋಗ್ಯಕ್ಕೆ ಪ್ರಯೋಜನವಿದೆ.
  • ಒಂದೇ ಒಂದು ಹನಿ ತುಪ್ಪದಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳು ಸಿಗುತ್ತೆ ಗೊತ್ತಾ...
ನಿತ್ಯ ದೇಹದ ಈ 'ಅಂಗ'ಕ್ಕೆ ಒಂದು ಹನಿ ತುಪ್ಪ ಸವಾರಿ ಮಸಾಜ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಗೊತ್ತಾ..!  title=

Ayurvedic Padabhyanga:  ತುಪ್ಪ ತಿನ್ನುವುದರಿಂದ ಮಾತ್ರವಲ್ಲ ದೇಹದ ವಿವಿಧ ಭಾಗಗಳಿಗೆ ತುಪ್ಪ ಲೇಪಿಸುವುದರಿಂದಲೂ ಹಲವು ಪ್ರಯೋಜನಗಳಿವೆ. ಹಾಗಾಗಿಯೇ ಶತಮಾನದಿಂದಲೂ ಆಯುರ್ವೇದಲ್ಲಿ ತುಪ್ಪವನ್ನು ಬಳಸಲಾಗುತ್ತದೆ. ಆಯುರ್ವೇದ ತಜ್ಞರ ಪ್ರಕಾರ, ದೇಹದ ಒಂದು ಅಂಗಕ್ಕೆ ಒಂದೇ ಒಂದು ಹನಿ ತುಪ್ಪ ಹಾಕಿ ಮಸಾಜ್ ಮಾಡಿದರೆ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. 

ಆಯುರ್ವೇದದ ಪ್ರಕಾರ, ಪಾದಕ್ಕೆ ಒಂದೇ ಒಂದು ಹನಿ ತುಪ್ಪ ಸವರಿ ನಿತ್ಯ ಮಸಾಜ್ ಮಾಡಿದರೆ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು ಎನ್ನಲಾಗುತ್ತದೆ. ಪಾದಗಳಿಗೆ ತುಪ್ಪ ಸವರಿ ಮಸಾಜ್ ಮಾಡುವುದನ್ನು ಆಯುರ್ವೇದದಲ್ಲಿ "ಪಾದಾಭ್ಯಂಗ" ಎನ್ನಲಾಗುತ್ತದೆ.  ಪಾದಕ್ಕೆ ತುಪ್ಪದಿಂದ ಮಸಾಜ್ ಮಾಡುವುದರಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿಯಲು ಮುಂದೆ ಓದಿ.. 

ಪಾದಗಳಿಗೆ  ಒಂದನಿ ತುಪ್ಪ ಹಚ್ಚಿ ಮಸಾಜ್ ಮಾಡಿದ್ರೆ ಸಿಗುವ ಲಾಭಗಳೆಂದರೆ... 
* ರಕ್ತಪರಿಚಲನೆ ಸುಧಾರಣೆ: 

ಪಾದಗಳಿಗೆ ತುಪ್ಪ ಸವರಿ ಲಘುವಾಗಿ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಮಾತ್ರವಲ್ಲ ಆಯಾಸವೂ ಕಡಿಮೆ ಆಗುತ್ತದೆ. 

ಇದನ್ನೂ ಓದಿ- ಔಷಧೀಯ ಗಣಿ ಈ ಮಸಾಲೆಗಳು: ಇವುಗಳನ್ನು ಬಳಸಿದ್ರೆ ಹೈ ಶುಗರ್ ಸಹ ಆಗುತ್ತೆ ನಾರ್ಮಲ್, ಮಧುಮೇಹ ಎಂದೂ ಹೆಚ್ಚಾಗಲ್ಲ...!

* ಸುಂದರ ತ್ವಚೆ: 
ತುಪ್ಪದಲ್ಲಿರುವ ಕೊಬ್ಬಿನಾಮ್ಲವು ಚ್ಚರ್ಮವನ್ನು ಮೃದುವಾಗಿರಿಸಿ ಸುಂದರ ತ್ವಚೆ ಹೊಂದಲು ಸಹಕಾರಿ ಆಗಿದೆ. 

*  ಪಾದಗಳ ಊತಕ್ಕೆ ರಾಮಬಾಣ: 
ನಿಯಮಿತವಾಗಿ ಪಾದಗಳಿಗೆ ಹನಿ ತುಪ್ಪದಿಂದ ಮಸಾಜ್ ಮಾಡುವುದರಿಂದ ಪಾದಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತ ಮತ್ತು ಊತದ ಸಮಸ್ಯೆ ಉಪಶಮನಗೊಳ್ಳುತ್ತದೆ. 

ಇದನ್ನೂ ಓದಿ- ವರ್ಷ ಪೂರ್ತಿ ಸಿಗುವ ಈ ಕಾಯಿಯನ್ನು ಸೇವಿಸಿದರೆ ಜೀವನ ಪೂರ್ತಿ ಹಾರ್ಟ್ ಅಟ್ಯಾಕ್ ಕ್ಯಾನ್ಸರ್ ಭಯ ಬೇಡವೇ ಬೇಡ !ಬ್ಲಡ್ ಶುಗರ್ ಇರುವವರಿಗೂ ಇದು ಸಂಜೀವಿನಿ

* ಮೂಳೆಗಳಿಗೆ ಶಕ್ತಿ: 
ಮಲಗುವ ಮೊದಲು ಪಾದಗಳಿಗೆ ಹನಿ ತುಪ್ಪದಿಂದ ಮಸಾಜ್ ಮಾಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News