ಖ್ಯಾತ ನಿರ್ದೇಶಕ RGVಗೆ ಶಾಕ್‌ ಕೊಟ್ಟ ಮುಂಬೈ ಕೋರ್ಟ್..! ಮೂರು ತಿಂಗಳು ಜೈಲು..

RGV Jail : ರಾಮ್ ಗೋಪಾಲ್ ವರ್ಮಾ ಎಂದಾಕ್ಷಣ ನೆನಪಾಗುವುದು ರಕ್ತ ಚರಿತ್ರೆ ಸಿನಿಮಾ.. ಇತ್ತೀಚಿಗೆ ಇದು ಬದಲಾಗಿದ್ದು RGV ಆಂದ್ರೆ ವಿವಾದ ವಿವಾದ ಅಂದ್ರೆ ಆರ್‌ಜಿವಿ ಎನ್ನುವಂತಾಗಿದೆ.. ಈ ನಿರ್ದೇಶಕ ಆಗಾಗ ಯಾವುದಾದರೊಂದು ವಿವಾದದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಮ್ ಗೋಪಾಲ್ ವರ್ಮಾಗೆ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Last Updated : Jan 23, 2025, 02:10 PM IST
    • ರಾಮ್ ಗೋಪಾಲ್ ವರ್ಮಾಗೆ ಜೈಲು ಶಿಕ್ಷೆ
    • ಮೂರು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಿ ಆದೇಶ
    • ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಆದೇಶ
ಖ್ಯಾತ ನಿರ್ದೇಶಕ RGVಗೆ ಶಾಕ್‌ ಕೊಟ್ಟ ಮುಂಬೈ ಕೋರ್ಟ್..! ಮೂರು ತಿಂಗಳು ಜೈಲು.. title=

Ram Gopal varma Jail : ತೆಲುಗು ಚಿತ್ರರಂಗದಲ್ಲಿ ವಿವಾದಗಳಿಗೆ ಕೇರಾಫ್ ಅಡ್ರೆಸ್ ರಾಮ್ ಗೋಪಾಲ್ ವರ್ಮಾ ಅಂದ್ರೆ  ತಪ್ಪಾಗಲ್ಲ.. ಹೆಚ್ಚಾಗಿ ಅಡಲ್ಟ್ ಸಿನಿಮಾಗಳನ್ನು ಮಾಡಿ ಯುವಜನತೆ ಗಮನಸೆಳೆದಿದ್ದರು. ಮೇಲಾಗಿ ಇವರ ಚಿತ್ರಗಳ ಮೂಲಕ ಹಲವು ನಾಯಕಿಯರು ಸ್ಟಾರ್‌ ಗಿರಿ ಪಡೆದಿದ್ದಾರೆ ಎನ್ನಬಹುದು. ವರ್ಮಾ ನಿರ್ದೇಶನದ ಒಂದೇ ಒಂದು ಚಿತ್ರ ಅವರ ವೃತ್ತಿಜೀವನವನ್ನು ಬದಲಾಯಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.

ಇದೀಗ ಮಾಹಿತಿ ಪ್ರಕಾರ... ಆರು ವರ್ಷಗಳ ಹಿಂದೆ ನಡೆದ ಘಟನೆಯೊಂದು ಇದೀಗ ಅವರ ಕೊರಳಿಗೆ ಸುತ್ತಿಕೊಂಡಿದೆ. ಮುಂಬೈನ ಅಟಾರಿ ಮ್ಯಾಜಿಸ್ಟ್ರೇಟ್ ಕೋರ್ಟ್ ಇತ್ತೀಚೆಗೆ ಈ ಪ್ರಕರಣದಲ್ಲಿ ಸಂಚಲನಕಾರಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಆರ್‌ಜಿವಿ ತಪ್ಪಿತಸ್ಥರಾಗಿದ್ದು, ಮೂರು ತಿಂಗಳ ಜೈಲು ಶಿಕ್ಷೆಯ ನೀಡಿದೆ.. 

ಇದನ್ನೂ ಓದಿ:ಖಾಲಿ ಹೊಟ್ಟೆಗೆ ಈ ಹಣ್ಣು ತಿಂದರೆ ಕಣ್ಣಿನ ದೃಷ್ಟಿ ಎಷ್ಟೇ ಮಂದವಾಗಿದ್ದರೂ ಶಾರ್ಪ್‌ ಆಗುತ್ತೆ! ವಯಸ್ಸ

2018ರಲ್ಲಿ ಮುಂಬೈನಲ್ಲಿ ರಾಮಗೋಪಾಲ್ ವರ್ಮಾ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಆ ಸಮಯದಲ್ಲಿ ಮಹೇಶ್ ಚಂದ್ರ ಮಿಶ್ರಾ ಎಂಬ ವ್ಯಕ್ತಿ ರಾಮ್ ಗೋಪಾಲ್ ವರ್ಮಾ ವಿರುದ್ಧ ಶ್ರೀ ಎಂಬ ಕಂಪನಿಯ ಹೆಸರಿನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಗೆ ಬರುವಂತೆ ಎಷ್ಟೇ ಬಾರಿ ನೋಟಿಸ್ ಕಳುಹಿಸಿದರೂ ವರ್ಮಾ ನ್ಯಾಯಾಲಯಕ್ಕೆ ಅಗೌರವ ಸೂಚಿಸಿದ್ದರು.. 

ಸಿಟ್ಟಿಗೆದ್ದ ಕೋರ್ಟ್ ಆರ್‌ಜಿವಿ ಬಗ್ಗೆ ಸೀರಿಯಸ್ ಆಗಿತು. ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಮುಂದಿನ ಮೂರು ತಿಂಗಳಲ್ಲಿ ದೂರುದಾರರಿಗೆ ರೂ.3.72 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ್ದು, ತಪ್ಪಿದಲ್ಲಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವರದಿಯಾಗಿದೆ. 

ಇದನ್ನೂ ಓದಿ:Tax Update : 10 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ : ಹಣಕಾಸು ಸಚಿವರ ಬಿಗ್ ಗಿಫ್ಟ್  

ಸದ್ಯ ವರ್ಮಾಗೆ ಸಂಬಂಧಿಸಿದ ಈ ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವರ್ಮಾ ಅವರು ದೂರುದಾರರಿಗೆ ಹಣ ನೀಡುತ್ತೀರಾ ಅಥವಾ ಜೈಲಿಗೆ ಹೋಗುತ್ತೀರಾ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News