ಬಿಗ್ ಬಾಸ್ ಜೋಡಿಗಳ ಮದುವೆ ಗುಟ್ಟು ಬಯಲು.. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಗಾಸಿಪ್ ಜೋಡಿ! ಯಾರು ಗೊತ್ತೇ?

Bigg Boss Couple Marriage: ಬಿಗ್ ಬಾಸ್ ವಿನ್ನರ್ ಅರ್ಚನಾ ಅವರನ್ನು ಪ್ರೀತಿಸುತ್ತಿರುವ ಅರುಣ್ ಪ್ರಸಾದ್ ಅವರ ಜೊತೆ ಮದುವೆ ಬಗ್ಗೆ ಮಾತನಾಡಿದ್ದಾರೆ..   

Written by - Savita M B | Last Updated : Jan 23, 2025, 11:39 AM IST
  • ಕಳೆದ 8 ವರ್ಷಗಳಿಂದ ತಮಿಳಿನಲ್ಲಿ ಬಿಗ್ ಬಾಸ್ ನಡೆಯುತ್ತಿದೆ.
  • ಬಿಗ್ ಬಾಸ್ ಮುಗಿದ ನಂತರ ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ವಿವಿಧ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಬಿಗ್ ಬಾಸ್ ಜೋಡಿಗಳ ಮದುವೆ ಗುಟ್ಟು ಬಯಲು.. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಗಾಸಿಪ್ ಜೋಡಿ! ಯಾರು ಗೊತ್ತೇ? title=

Arun prasad and Archana: ಕಳೆದ 8 ವರ್ಷಗಳಿಂದ ತಮಿಳಿನಲ್ಲಿ ಬಿಗ್ ಬಾಸ್ ನಡೆಯುತ್ತಿದೆ. ಕಾರ್ಯಕ್ರಮದ ಮೊದಲ 7 ಸೀಸನ್‌ಗಳನ್ನು ಗ್ಲೋಬಲ್‌ ಸ್ಟಾರ್ ಕಮಲ್ ಹಾಸನ್ ನಡೆಸಿಕೊಟ್ಟರು. 8 ನೇ ಸೀಸನ್ ಅನ್ನು ಮಾತ್ರ ವಿಜಯ್ ಸೇತುಪತಿ ನಡೆಸಿಕೊಟ್ಟರು.. ಬಿಗ್ ಬಾಸ್ 8ನೇ ಸೀಸನ್ ನಲ್ಲಿ ಮುತ್ತುಕುಮಾರನ್ ವಿನ್ನರ್‌ ಕಪ್‌ ಗೆದ್ದಿದ್ದಾರೆ.. ಅವರಿಗೆ ಅಭಿನಂದನೆಗಳು ಮಹಾಪೂರವೇ ಹರಿದುಬರುತ್ತಿದೆ.. ಬಿಗ್ ಬಾಸ್ ಮುಗಿದ ನಂತರ ಅದರಲ್ಲಿ ಭಾಗವಹಿಸಿದ ಸ್ಪರ್ಧಿಗಳು ವಿವಿಧ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಅರುಣ್ ಪ್ರಸಾದ್ ಬಿಗ್ ಬಾಸ್ ಸೀಸನ್ 8 ರಲ್ಲಿ ಹೆಚ್ಚು ಮಾತನಾಡುವ ಸ್ಪರ್ಧಿಗಳಲ್ಲಿ ಒಬ್ಬರು. ವಿಜಯ್ ಟಿವಿಯಲ್ಲಿ ಪ್ರಸಾರವಾದ ಭಾರತಿ ಕಣ್ಣಮ್ಮ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಅವರು ಬಿಗ್ ಬಾಸ್ ಶೋಗೆ ಪ್ರವೇಶಿಸಿದರು.. ಮೊದಲ 4 ವಾರಗಳವರೆಗೆ ಮೌನವಾಗಿದ್ದ ಅರುಣ್ ನಂತರ ತಮ್ಮ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದರು.. ಅದರಲ್ಲೂ ಮುತ್ತುಕುಮಾರನ್ ಅವರನ್ನು ಟಾರ್ಗೆಟ್ ಮಾಡಿದ ಅವರು ಒಂದು ಹಂತದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯತೊಡಗಿದರು.

ಇದನ್ನೂ ಓದಿ-ವೈರಲ್ ಆಯ್ತು ಕುಂಭ ಮೇಳದ ಮೊನಾಲಿಸಾಳ ಮೇಕಪ್‌ ರಹಿತ ಫೋಟೋ! ಅಂದ ಹೊಗಳಿ  ಅಟ್ಟಕ್ಕೆರಿಸಿದವರೂ ಉಲ್ಟಾ ಹೊಡೆದ್ರು 

ಅವರು ಬಿಗ್ ಬಾಸ್ ಸೀಸನ್ 8 ರ ಫೈನಲ್‌ಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.. ಆದರೆ ಫೈನಲ್‌ಗೆ ಒಂದು ವಾರದ ಮೊದಲು ಎಲಿಮಿನೇಟ್ ಆಗಿದ್ದರು. ಅರುಣ್ ಪ್ರಸಾದ್ ಬಿಗ್ ಬಾಸ್ ಗೆ ಬರಲು ಮುಖ್ಯ ಕಾರಣ ಅವರ ಗೆಳತಿ ಅರ್ಚನಾ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಸೀಸನ್ 7ರಲ್ಲಿ ಅರ್ಚನಾ ಸ್ಪರ್ಧಿಯಾಗಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದರು.

ಬಿಗ್ ಬಾಸ್ ಸೀಸನ್ 8 ರ ಕೌಟುಂಬಿಕ ಸುತ್ತಿನಲ್ಲಿ ಅರ್ಚನಾ ಅವರು ಅರುಣ್ ಪ್ರಸಾದ್ ಅವರೊಂದಿಗಿನ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಅರುಣ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.. ಅದರಂತೆ ಮನೆಯಲ್ಲಿ ಮದುವೆ ಮಾತುಕತೆ ಶುರುವಾಗಿದ್ದು, ಈ ವರ್ಷಾಂತ್ಯಕ್ಕೆ ಅರ್ಚನಾ ಜೊತೆ ವಿವಾಹವಾಗುವುದಾಗಿ ಘೋಷಿಸಿದ್ದಾರೆ. ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದನ್ನೂ ಓದಿ-ವೈರಲ್ ಆಯ್ತು ಕುಂಭ ಮೇಳದ ಮೊನಾಲಿಸಾಳ ಮೇಕಪ್‌ ರಹಿತ ಫೋಟೋ! ಅಂದ ಹೊಗಳಿ  ಅಟ್ಟಕ್ಕೆರಿಸಿದವರೂ ಉಲ್ಟಾ ಹೊಡೆದ್ರು 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News