Sudip Pandey: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಿನ ಬೇಧವಿಲ್ಲದೆ, ಹೃದಯ ಕಾಯಿಲೆ ಜನರನ್ನು ಬಲಿ ಪಡೆದು ಕೊಳ್ಳುತ್ತಿದೆ, ಇದೀಗ 30 ವರ್ಷದ ಸ್ಟಾರ್ ನಟ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಚಿತ್ರ ರಂಗಕ್ಕೆ ಇದು ಅರಗಿಸಿಕೊಳ್ಳಲಾಗದ ನೋವನ್ನುಂಟು ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿ
Sudip Pandey: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಯಸ್ಸಿನ ಬೇಧವಿಲ್ಲದೆ, ಹೃದಯ ಕಾಯಿಲೆ ಜನರನ್ನು ಬಲಿ ಪಡೆದು ಕೊಳ್ಳುತ್ತಿದೆ, ಇದೀಗ 30 ವರ್ಷದ ಸ್ಟಾರ್ ನಟ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಚಿತ್ರ ರಂಗಕ್ಕೆ ಇದು ಅರಗಿಸಿಕೊಳ್ಳಲಾಗದ ನೋವನ್ನುಂಟು ಮಾಡಿದೆ.
ಹೌದು, ರಾಜಕೀಯ ಮುಖಂಡ, ನಿರ್ಮಾಪಕ ಹಾಗು ನಟರಾಗಿ ಗಿಟ್ಟಿಸಿಕೊಂಡಿರುವ ಭೋಜ್ ಪುರಿ ನಟ ಸುದೀಪ್ ಪಾಂಡೆ, ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ' ಪರೋ ಪಟ್ನವಾಲಿ ಎಂಬ ಸಿನಿಮಾದ ಶೂಟಿಂಗಾಗಿ ಸುದೀಪ್ ಪಾಂಡೆ ಅವರು ಮುಂಬೈನಲ್ಲಿದ್ದರು.
10 ದಿನಗಳ ಹಿಂದೆಯಷ್ಟೇ ತಮ್ಮ 30 ನೆಯ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸುದೀಪ್ ಪಾಂಡೆ ಅತೀ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿರುವುದು ಚಿತ್ರರಂಗಕ್ಕೆ ಶಾಕ್ ತಂದುಕೊಟ್ಟಿದೆ.
ಅಮೆರಿಕದಲ್ಲಿ ಸಾಫ್ಟವೇರ್ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದ ಸುದೀಪ್ ಪಾಂಡೆ ಅವರು ನಂತರ ಭೋಜ್ ಪುರಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು ಅಷ್ಟೇ ಅಲ್ಲ ರಾಜಕೀಯದಲ್ಲಿಯೂ ಅವರು ಸಕ್ರಿಯವಾಗಿದ್ದು, ನಿರ್ಮಕರಾಗಿ ಸಹ ಕೆಲಸ ಮಾಡಿದ್ದರು.
ಶೂಟಿಂಗ್ ನ ವೇಳೆ ಅಸ್ವಸ್ಥರಾಗಿದ್ದ ಸುದೀಪ್ ಪಾಂಡೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರು, ಚಿಕಿತ್ಸೆ ಫಲಕಾರಿಯಾಗದೆ ನಟ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ, ನಟನ ಸಾವಿಗೆ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ
ಇನ್ನು, ಸುದೀಪ್ ಅವರು 2007 ರಲ್ಲಿ ತಮ್ಮ ಮೊದಲನೇ ಸಿನಿಮಾ ಮಾಡಿದ್ದರು, ' ಭೋಜ್ ಪುರಿ ಭಯ್ಯ ' ಎಂಬ ಸಿನಿಮಾದಲ್ಲಿ ನಟಿಸಿದ್ದರು.
ಸುದೀಪ್ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತಾದರೂ ಸಿನಿಮಾ ಕೆರಿಯರ್ ಅವರ ಕೈ ಹಿಡಿಯಲಿಲ್ಲ, ಹತ್ತಾರು ಸಿನಿಮಾಗಳಲ್ಲಿ ಅವರು ನಟಿಸಿದ್ರಾದರು, ಯಾವುದೇ ಸಿನಿಮಾ ಕೂಡ ಅಷ್ಟಾಗಿ ಸದ್ದು ಮಾಡಲಿಲ್ಲ.
ಒಳ್ಳೆ ಮೈಕಟ್ಟು, ಇನ್ನೂ ಚಿಕ್ಕ ವಯಸ್ಸು, ಫಿಟ್ ಆದ ಬಾಡಿ ಹಾಗು ಸಿಸ್ ಪ್ಯಾಕ್ ಹೊಂದಿದ್ದ ಅವರು ಇದೀಗ ಅತೀ ಸಣ್ಣ ವಯಸ್ಸಿಗೇ ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.