BBK 11: ಫೈನಲಿಸ್ಟ್‌ ಆಗಬೇಕಿದ್ದ ಈ ಸ್ಪರ್ಧಿಗೆ ಮಿಡ್‌ವೀಕ್‌ ಎಲಿಮಿನೇಷನ್‌ ಶಾಕ್ ಕೊಟ್ಟ ಬಿಗ್‌ಬಾಸ್‌! ಮನೆಮಂದಿ‌ ಕಕ್ಕಾಬಿಕ್ಕಿ..

Bigg Boss Kannada Mid Week Elimination: ಬಿಗ್‌ಬಾಸ್‌ ಕನ್ನಡ ಸೀಸನ್ 11 ಭರ್ಜರಿ ತಿರುವಿನೊಂದಿಗೆ ಎಲ್ಲರ ಕುತೂಹಲ ಕೆರಳಿಸುತ್ತಿದೆ.. ದಿನದಿಂದ ದಿನಕ್ಕೆ ಆಟವು ರೋಚಕತೆ ಪಡೆದುಕೊಳ್ಳುತ್ತಿದೆ.. ಇದೀಗ ದೊಡ್ಮನೆಯಲ್ಲಿ ಮಿಡ್‌ವೀಕ್‌ ಎಲಿಮಿನೇಷನ್‌ ಘೋಷಣೆಯಾಗಿ ರದ್ದಾಗಿದೆ.. 
 

1 /6

ಬಿಗ್‌ಬಾಸ್‌ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್‌ಗಳು ಎದುರಾಗುತ್ತಿವೆ.. ಅದರಲ್ಲೂ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಸ್ಪರ್ಧಿಗಳು ಪರಸ್ಪರ ಪೈಪೋಟಿ ನೀಡುತ್ತಾ ಭರ್ಜರಿಯಾಗಿ ಆಟವಾಡುತ್ತಿದ್ದಾರೆ.. ಇದರಿಂದ ವೀಕ್ಷಕರಿಗೂ ಕುತೂಹಲ ಹೆಚ್ಚುತ್ತಿದೆ..  

2 /6

ಇತ್ತೀಚೆಗೆ ಬಿಗ್‌ಬಾಸ್‌ ಮನೆಯಲ್ಲಿ ಮಿಡ್‌ ವೀಕ್‌ ಎಲಿಮಿನೇಷನ್‌ ನಡೆಯುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಅನೀರಿಕ್ಷಿತ ಕಾರಣಗಳಿಂದ ಎವಿಕ್ಷನ್‌ ರದ್ದಾಗಿದೆ.. ಏಕೆಂದರೇ ಸ್ಪರ್ಧಿಯೊಬ್ಬರು ಮೋಸದಾಟವಾಡಿರುವುದನ್ನು ಬಿಗ್‌ಬಾಸ್‌ ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ..   

3 /6

ಇದು ಬಿಗ್‌ಬಾಸ್‌ ಮನೆಯ ನಿರ್ಣಾಯಕ ವಾರವೆಂದರೇ ಅತಿಶಯೋಕ್ತಿಯಲ್ಲ.. ಏಕೆಂದರೇ ಸದ್ಯ ಎಂಟು ಮಂದಿ ಇರುವ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಹನುಮಂತ ಹಾಗೂ ಮಿಡ್‌ ವೀಕ್‌ ಎಲಿಮಿನೇಷನ್‌ ಗೆದ್ದಿದ್ದ ಧನರಾಜ್‌ ಅವರನ್ನು ಬಿಟ್ಟು ಉಳಿದ ಆರು ಸ್ಪರ್ಧಿಗಳಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್‌ ಆಗಲೇಬೇಕಿತ್ತು.   

4 /6

ನಾಮಿನೇಟ್‌ ಆಗಿದ್ದ ಆರು ಸ್ಪರ್ಧಿಗಳನ್ನು ಬಿಗ್‌ಬಾಸ್‌ ಮುಖ್ಯ ದ್ವಾರದ ಬಳಿಗೆ ಕರೆದರು.. ಆಗ ಬಿಗ್‌ಬಾಸ್‌ ಮೊದಲು ತ್ರಿವಿಕ್ರಮ್‌ ಅವರಿಗೆ ಬರಲು ಹೇಳಿ "ಮೇನ್‌ ಡೋರ್‌ ಓಪನ್‌ ಆಗಿರುವುದು ನಿಮಗಾಗಿ ಅಲ್ಲ" ಎಂದು ಹೇಳಿ ವಾಪಸ್‌ ಕಳುಹಿಸಿದರು.. ಹೀಗೆ ಇನ್ನುಳಿದ ಸ್ಪರ್ಧಿಗಳಿಗೆ ಹೇಳಲಾಯಿತು..   

5 /6

ಆದರೆ ಭವ್ಯ ಅವರಿಗೆ ಮಾತ್ರ ಬಿಗ್‌ಬಾಸ್‌ ಈ ರೀತಿ ಹೇಳಲಿಲ್ಲ.. ಆಗ ಭವ್ಯ ಗೌಡ ಅವರೇ ಈ ವಾರ ಮಿಡ್‌ವೀಕ್‌ ಎಲಿಮಿನೇಷನ್‌ನಿಂದ ಹೊರಹೋಗಬಹುದು ಎಂದು ಎಲ್ಲರೂ ಫಿಕ್ಸ್‌ ಆಗಿದ್ದರು. ಆದರೆ ಆಗ ನಡೆದಿದ್ದೇ ಬೇರೆ.. "ಭವ್ಯ ನೀವು ಈಗ ಹೊರಬರುವಂತಿಲ್ಲ" ಎಂದು ಬಿಗ್‌ಬಾಸ್‌ ಹೇಳಿದರು.. ಅಲ್ಲಿಗೆ ಈ ವಾರ ಯಾರು ಎಲಿಮಿನೇಟ್‌ ಆಗಲೇ ಇಲ್ಲ..    

6 /6

ಇದು ಮೊದಲಲ್ಲ.. ಈ ಹಿಂದೆಯೂ ಭವ್ಯ ನಾಮಿನೇಟ್‌ ಆಗಿ ಎಲಿಮಿನೇಟ್‌ ಎಂದು ಹೇಳಲಾಗಿತ್ತು. ಆದರೆ ಅದರಲ್ಲೂ ಬಿಗ್‌ಬಾಸ್‌ ಟ್ವಿಸ್ಟ್‌ ನೀಡಿ ಮನೆಯ ದ್ವಾರವನ್ನೇ ತೆರೆಯಲಿಲ್ಲ.. ಇದೀಗ ಮತ್ತೇ ಅದೇ ಭವ್ಯ ಅವರಿಗೆ ರಿಪೀಟ್‌ ಆಗಿದೆ..