Bigg Boss Kannada Mid Week Elimination: ಬಿಗ್ಬಾಸ್ ಕನ್ನಡ ಸೀಸನ್ 11 ಭರ್ಜರಿ ತಿರುವಿನೊಂದಿಗೆ ಎಲ್ಲರ ಕುತೂಹಲ ಕೆರಳಿಸುತ್ತಿದೆ.. ದಿನದಿಂದ ದಿನಕ್ಕೆ ಆಟವು ರೋಚಕತೆ ಪಡೆದುಕೊಳ್ಳುತ್ತಿದೆ.. ಇದೀಗ ದೊಡ್ಮನೆಯಲ್ಲಿ ಮಿಡ್ವೀಕ್ ಎಲಿಮಿನೇಷನ್ ಘೋಷಣೆಯಾಗಿ ರದ್ದಾಗಿದೆ..
ಬಿಗ್ಬಾಸ್ ಮನೆಯಲ್ಲಿ ದಿನಕ್ಕೊಂದು ಟ್ವಿಸ್ಟ್ಗಳು ಎದುರಾಗುತ್ತಿವೆ.. ಅದರಲ್ಲೂ ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಸ್ಪರ್ಧಿಗಳು ಪರಸ್ಪರ ಪೈಪೋಟಿ ನೀಡುತ್ತಾ ಭರ್ಜರಿಯಾಗಿ ಆಟವಾಡುತ್ತಿದ್ದಾರೆ.. ಇದರಿಂದ ವೀಕ್ಷಕರಿಗೂ ಕುತೂಹಲ ಹೆಚ್ಚುತ್ತಿದೆ..
ಇತ್ತೀಚೆಗೆ ಬಿಗ್ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಅನೀರಿಕ್ಷಿತ ಕಾರಣಗಳಿಂದ ಎವಿಕ್ಷನ್ ರದ್ದಾಗಿದೆ.. ಏಕೆಂದರೇ ಸ್ಪರ್ಧಿಯೊಬ್ಬರು ಮೋಸದಾಟವಾಡಿರುವುದನ್ನು ಬಿಗ್ಬಾಸ್ ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ..
ಇದು ಬಿಗ್ಬಾಸ್ ಮನೆಯ ನಿರ್ಣಾಯಕ ವಾರವೆಂದರೇ ಅತಿಶಯೋಕ್ತಿಯಲ್ಲ.. ಏಕೆಂದರೇ ಸದ್ಯ ಎಂಟು ಮಂದಿ ಇರುವ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ ಹನುಮಂತ ಹಾಗೂ ಮಿಡ್ ವೀಕ್ ಎಲಿಮಿನೇಷನ್ ಗೆದ್ದಿದ್ದ ಧನರಾಜ್ ಅವರನ್ನು ಬಿಟ್ಟು ಉಳಿದ ಆರು ಸ್ಪರ್ಧಿಗಳಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗಲೇಬೇಕಿತ್ತು.
ನಾಮಿನೇಟ್ ಆಗಿದ್ದ ಆರು ಸ್ಪರ್ಧಿಗಳನ್ನು ಬಿಗ್ಬಾಸ್ ಮುಖ್ಯ ದ್ವಾರದ ಬಳಿಗೆ ಕರೆದರು.. ಆಗ ಬಿಗ್ಬಾಸ್ ಮೊದಲು ತ್ರಿವಿಕ್ರಮ್ ಅವರಿಗೆ ಬರಲು ಹೇಳಿ "ಮೇನ್ ಡೋರ್ ಓಪನ್ ಆಗಿರುವುದು ನಿಮಗಾಗಿ ಅಲ್ಲ" ಎಂದು ಹೇಳಿ ವಾಪಸ್ ಕಳುಹಿಸಿದರು.. ಹೀಗೆ ಇನ್ನುಳಿದ ಸ್ಪರ್ಧಿಗಳಿಗೆ ಹೇಳಲಾಯಿತು..
ಆದರೆ ಭವ್ಯ ಅವರಿಗೆ ಮಾತ್ರ ಬಿಗ್ಬಾಸ್ ಈ ರೀತಿ ಹೇಳಲಿಲ್ಲ.. ಆಗ ಭವ್ಯ ಗೌಡ ಅವರೇ ಈ ವಾರ ಮಿಡ್ವೀಕ್ ಎಲಿಮಿನೇಷನ್ನಿಂದ ಹೊರಹೋಗಬಹುದು ಎಂದು ಎಲ್ಲರೂ ಫಿಕ್ಸ್ ಆಗಿದ್ದರು. ಆದರೆ ಆಗ ನಡೆದಿದ್ದೇ ಬೇರೆ.. "ಭವ್ಯ ನೀವು ಈಗ ಹೊರಬರುವಂತಿಲ್ಲ" ಎಂದು ಬಿಗ್ಬಾಸ್ ಹೇಳಿದರು.. ಅಲ್ಲಿಗೆ ಈ ವಾರ ಯಾರು ಎಲಿಮಿನೇಟ್ ಆಗಲೇ ಇಲ್ಲ..
ಇದು ಮೊದಲಲ್ಲ.. ಈ ಹಿಂದೆಯೂ ಭವ್ಯ ನಾಮಿನೇಟ್ ಆಗಿ ಎಲಿಮಿನೇಟ್ ಎಂದು ಹೇಳಲಾಗಿತ್ತು. ಆದರೆ ಅದರಲ್ಲೂ ಬಿಗ್ಬಾಸ್ ಟ್ವಿಸ್ಟ್ ನೀಡಿ ಮನೆಯ ದ್ವಾರವನ್ನೇ ತೆರೆಯಲಿಲ್ಲ.. ಇದೀಗ ಮತ್ತೇ ಅದೇ ಭವ್ಯ ಅವರಿಗೆ ರಿಪೀಟ್ ಆಗಿದೆ..