ಇನ್ಮುಂದೆ ಕೇಂದ್ರ ಸರ್ಕಾರದಿಂದಲೂ ಮಹಿಳೆಯರ ಖಾತೆಗೆ ಹಣ !ಬಜೆಟ್ ನಲ್ಲಿ ಆಗಲಿದೆ ಘೋಷಣೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಇದರೊಂದಿಗೆ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸುವಂತೆ ಆಗುತ್ತದೆ.  

Written by - Ranjitha R K | Last Updated : Jan 14, 2025, 05:35 PM IST
  • ಕೆಲವೇ ದಿನಗಳಲ್ಲಿ 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಮಂಡನೆ
  • ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಮಂಡಿಸಲಾಗುತ್ತಿರುವ ಬಜೆಟ್
  • ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆ ಜಾರಿಗೆ
ಇನ್ಮುಂದೆ ಕೇಂದ್ರ ಸರ್ಕಾರದಿಂದಲೂ ಮಹಿಳೆಯರ ಖಾತೆಗೆ ಹಣ !ಬಜೆಟ್ ನಲ್ಲಿ  ಆಗಲಿದೆ ಘೋಷಣೆ title=

ಕೆಲವೇ ದಿನಗಳಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಹಣಕಾಸು ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಬಜೆಟ್‌ನಲ್ಲಿ ಕೆಲವು ಸಂಭವನೀಯ ಘೋಷಣೆಗಳ ಬಗ್ಗೆ ಹಣಕಾಸು ಸಚಿವಾಲಯದ ಮೂಲಗಳು ಈ ಹಿಂದೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿವೆ. ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಲಿದೆ ಎನ್ನಲಾಗಿದೆ. 

ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಮಂಡಿಸಲಾಗುತ್ತಿರುವ ಎರಡನೇ ಪೂರ್ಣ ಪ್ರಮಾಣದ ಬಜೆಟ್ :
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ. ಇದರೊಂದಿಗೆ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸುವಂತೆ ಆಗುತ್ತದೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. 

ಇದನ್ನೂ ಓದಿ : Bank Rules: ಚೆಕ್‌ ಮೇಲೆ ಒಟ್ಟು ಹಣದ ಮುಂದೆ ''Only'' ಪದ ಬರೆಯೋದು ಯಾಕೆ ಗೊತ್ತಾ?

ಬಜೆಟ್‌ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ನಿರೀಕ್ಷೆಗಳ ಬಗ್ಗೆ ಮಾತನಾಡುವುದಾದರೆ ಆರ್ಥಿಕ ತಜ್ಞರ ಪ್ರಕಾರ, ಮಹಿಳೆಯರಿಗೆ ಸಹಾಯ ಮಾಡುವ  ನಿಟ್ಟಿನಲ್ಲಿ ಬಜೆಟ್‌ನಲ್ಲಿ ಕೇಂದ್ರ ನಗದು ವರ್ಗಾವಣೆ ಯೋಜನೆಯನ್ನು ಸರ್ಕಾರ ಜಾರಿಗೆ ತರಬಹುದು. ಏಕೆಂದರೆ ಮಹಿಳೆಯರಿಗೆ ಹಣಕಾಸಿನ ಸಹಾಯ ದೊರೆತರೆ  ಕುಟುಂಬಕ್ಕೆ ನಿಜವಾಗಿ ಹೆಚ್ಚು ಲಾಭವಾಗುತ್ತದೆ ಎಂಬುದು ನಮ್ಮ ಅಧ್ಯಯನದಲ್ಲಿ ಕಂಡುಬಂದಿದೆ. ಹಾಗಾಗಿ ಬೊಕ್ಕಸಕ್ಕೆ ಹೊರೆಯಾಗದಂತೆ ಮಹಿಳೆಯರಿಗಾಗಿ ಯೋಜನೆ ಆರಂಭಿಸಬಹುದು. ಇದಕ್ಕಾಗಿ ಮಹಿಳೆಯರಿಗೆ ಸಂಬಂಧಿಸಿದ ಇತರ ರೀತಿಯ ಕಾರ್ಯಕ್ರಮಗಳನ್ನು ಪುನರ್ ಪರಿಶೀಲಿಸಬೇಕು ಎನ್ನುವುದು ತಜ್ಞರ ಮಾತು. 

ಮಹಿಳೆಯರತ್ತ ರಾಜಕೀಯ ಪಕ್ಷಗಳ ಚಿತ್ತ : 
ಹಿಂದಿನಿಂದಲೂ ರಾಜಕೀಯ ಪಕ್ಷಗಳು ಮಹಿಳೆಯರನ್ನೇ ತಮ್ಮ ವೋಟು ಬ್ಯಾಂಕ್ ಮಾಡಿಕೊಂಡಿದೆ. ಹಾಗಾಗಿ ಮಹಿಳೆಯರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ. ಉದಾಹರಣೆಗೆ, ಕೆಲವೇ ದಿನಗಳಲ್ಲಿ ದೆಹಲಿ ವಿಧಾನಸಭಾ ಚುನಾವಣೆಗಳು ಬರಲಿವೆ. ಎಲ್ಲಾ ಪ್ರಮುಖ ಪಕ್ಷಗಳು ಮಹಿಳೆಯರಿಗೆ ನಗದು ಪಾವತಿಯನ್ನು ಘೋಷಿಸಿವೆ.ಈ ಹಿಂದೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಇದೇ ರೀತಿಯ ಘೋಷಣೆಗಳು ಕಾಣಿಸಿಕೊಂಡಿದ್ದವು. ಈ ಕುರಿತಂತೆ ಮಾತನಾಡಿದ ಎನ್‌ಐಪಿಎಫ್‌ಪಿಯ ಪ್ರಾಧ್ಯಾಪಕಿ ಮತ್ತು ಮ್ಯೂನಿಚ್ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಪಬ್ಲಿಕ್ ಫೈನಾನ್ಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯೆ ಲೇಖಾ ಚಕ್ರವರ್ತಿ, 'ಮಹಿಳೆಯರ ಖಾತೆಗಳಿಗೆ ಹಣವನ್ನು ವರ್ಗಾಯಿಸುವುದು ಉತ್ತಮ ಕ್ರಮವಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಇದು ಅಲ್ಪಾವಧಿಯ ಪರಿಹಾರವಾಗಿದೆ. ಮಹಿಳೆಯರಿಗೆ ಉದ್ಯೋಗ ಮತ್ತು ಸಾಲ ವಿತರಣೆಯನ್ನು ಖಾತ್ರಿಪಡಿಸುವುದು ದೀರ್ಘಾವಧಿಯಲ್ಲಿ ಅವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಭಾರತದ ಈ 7 ರೈಲು ನಿಲ್ದಾಣಗಳಿಂದ ವಿದೇಶಗಳಿಗೂ ಪ್ರಯಾಣ ಮಾಡಬಹುದು...

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News