ಕೇವಲ 3 ಓವರ್‌ಗೆ ಶತಕ.... ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪದಲ್ಲೂ ಕ್ರಿಕೆಟ್‌ ಆಡದ ಈ ಬ್ಯಾಟ್ಸ್‌ಮನ್‌ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನ: ಯಾರೆಂದು ಗೆಸ್‌ ಮಾಡಿ

Don Bradman century in 3 overs:

Written by - Bhavishya Shetty | Last Updated : Jan 14, 2025, 04:38 PM IST
    • ಈ ಪಂದ್ಯದಲ್ಲಿ, ಬ್ರಾಡ್ಮನ್ ಬ್ಯಾಟ್‌ನಿಂದ ದ್ವಿಶತಕ ಕೂಡ ದಾಖಲಾಗಿತ್ತು
    • ಕೇವಲ 18 ನಿಮಿಷಗಳಲ್ಲಿ ಶತಕ ಗಳಿಸಿ ಬೌಲರ್‌ಗಳ ಮೇಲೆ ಅಬ್ಬರಿಸಿದ್ದ ಬ್ರಾಡ್ಮನ್‌
    • ಬ್ರಾಡ್ಮನ್ ಅವರ ಈ ಇನ್ನಿಂಗ್ಸ್ ಕ್ರಿಕೆಟ್ ಜಗತ್ತಿನಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತು
ಕೇವಲ 3 ಓವರ್‌ಗೆ ಶತಕ.... ಟೆಸ್ಟ್‌ ಬಿಟ್ಟರೆ ಬೇರಾವ ಸ್ವರೂಪದಲ್ಲೂ ಕ್ರಿಕೆಟ್‌ ಆಡದ ಈ ಬ್ಯಾಟ್ಸ್‌ಮನ್‌ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನ: ಯಾರೆಂದು ಗೆಸ್‌ ಮಾಡಿ title=
Don Bradman

ಡಾನ್ ಬ್ರಾಡ್ಮನ್... ಕ್ರಿಕೆಟ್ ದಾಖಲೆ ಪುಸ್ತಕದಲ್ಲಿ ಈ ಹೆಸರಿನ ಮುಂದೆ ಅನೇಕ ದಾಖಲೆಗಳಿರುವುದು ಎಲ್ಲ ಕ್ರಿಕೆಟ್‌ ಅಭಿಮಾನಿಗಳಿಗೆ ತಿಳಿದ ಸಂಗತಿ. ಅದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ಸರಾಸರಿಯಾಗಿರಲಿ ಅಥವಾ ದ್ವಿಶತಕವಾಗಿರಲಿ... ಇನ್ನು ಬ್ರಾಡ್ಮನ್ ಅವರ ಅದ್ಭುತ ದಾಖಲೆಯೊಂದರ ಬಗ್ಗೆ ಇಲ್ಲಿ ತಿಳಿಯೋಣ. ಒಂದು ಪಂದ್ಯದಲ್ಲಿ ಕೇವಲ 18 ನಿಮಿಷಗಳಲ್ಲಿ ಶತಕ ಗಳಿಸಿ ಬೌಲರ್‌ಗಳ ಮೇಲೆ ಅಬ್ಬರಿಸಿದ್ದ ಬ್ರಾಡ್ಮನ್‌ ಅವರ ದಾಖಲೆ ಇಂದಿಗೂ ಅಮರವಾಗಿದೆ.

ಇದನ್ನೂ ಓದಿ: ಊಟಕ್ಕಿಂತ ಅರ್ಧ ಗಂಟೆ ಮುಂಚೆ ಈ ಒಣ ಹಣ್ಣು ಸೇವಿಸಿದರೆ ಜನ್ಮದಲ್ಲಿ ಹೈ ಆಗುವುದಿಲ್ಲ ಬ್ಲಡ್ ಶುಗರ್ !ಬ್ಲಡ್ ಪ್ರೆಶರ್ ಗೂ ಇದೇ ಮದ್ದು

3 ಓವರ್‌ನಲ್ಲಿ ಶತಕ
1931 ರಲ್ಲಿ, ಡಾನ್ ಬ್ರಾಡ್ಮನ್ ಬ್ಲ್ಯಾಕ್‌ಹೀತ್ XI ಪರ ದೇಶೀಯ ಕ್ರಿಕೆಟ್ ಆಡುವಾಗ ಲಿಥೋ ತಂಡದ ವಿರುದ್ಧ ಬ್ಯಾಟ್‌ ಬೀಸಿ ಕೇವಲ 18 ನಿಮಿಷಗಳಲ್ಲಿ ಶತಕ ಗಳಿಸಿದರು. ಪಂದ್ಯದಲ್ಲಿ, ಅವರು 3 ಓವರ್‌ಗಳು ಮುಗಿಯುವ ಮುನ್ನ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಆ ಸಮಯದಲ್ಲಿ ಒಂದು ಓವರ್‌ನಲ್ಲಿ 8 ಎಸೆತಗಳಿರುತ್ತಿದ್ದವು ಮತ್ತು ಬ್ರಾಡ್‌ಮನ್ ಕೇವಲ 22 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಈ ಪಂದ್ಯದಲ್ಲಿ, ಬ್ರಾಡ್ಮನ್ ಬ್ಯಾಟ್‌ನಿಂದ ದ್ವಿಶತಕ ಕೂಡ ದಾಖಲಾಗಿತ್ತು. ಅವರು ಒಟ್ಟು 256 ರನ್ ಗಳಿಸಿದ್ದರು, ಕುತೂಹಲಕಾರಿ ವಿಷಯವೆಂದರೆ ಬ್ರಾಡ್ಮನ್ ಮೊದಲ ಓವರ್ ನಲ್ಲಿ 33 ರನ್, ಎರಡನೇ ಓವರ್ ನಲ್ಲಿ 40 ರನ್ ಮತ್ತು ಮೂರನೇ ಓವರ್ ನಲ್ಲಿ 27 ರನ್ ಗಳಿಸಿದ್ದರು. ಬ್ರಾಡ್ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 14 ಸಿಕ್ಸರ್‌ಗಳು ಮತ್ತು 29 ಬೌಂಡರಿಗಳನ್ನು ಬಾರಿಸಿದ್ದು, ಬ್ರಾಡ್ಮನ್ ಅವರ ಈ ಇನ್ನಿಂಗ್ಸ್ ಕ್ರಿಕೆಟ್ ಜಗತ್ತಿನಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿತು.

ಇದನ್ನೂ ಓದಿ: ಬಿಸಿ ನೀರಿರಲಿ ತಣ್ಣೀರಿರಲಿ ಸ್ನಾನ ಮಾಡುವಾಗ ಮೊದಲು ದೇಹದ ಈ ಭಾಗಕ್ಕೆ ನೀರು ಹಾಕಿದರೆ ಮೈ ಕೈ ನೋವು ನಿವಾರಣೆಯಾಗುವುದು!

ಬ್ರಾಡ್ಮನ್ 1928 ರಿಂದ 1848 ರವರೆಗೆ 52 ಟೆಸ್ಟ್ ಪಂದ್ಯಗಳನ್ನು ಆಡಿ 6996 ರನ್ ಗಳಿಸಿದರು. ದ್ವಿಶತಕಗಳ ವಿಷಯದಲ್ಲೂ ಬ್ರಾಡ್‌ಮನ್ ಮೇಲುಗೈ ಸಾಧಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 12 ದ್ವಿಶತಕಗಳನ್ನು ಗಳಿಸಿದ್ದು, ಎರಡು ಬಾರಿ ತ್ರಿಶತಕ ದಾಖಲಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News